ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

By Nagaraja

ಕೂದಲೆಳೆಯ ಅಂತರದಲ್ಲಿ ವಿಮಾನ ದುರ್ಘಟನೆಯೊಂದು ತಪ್ಪಿರುವ ನಾಟಕೀಯ ಘಟನೆಯೊಂದು ಸ್ಪೇನ್‌ನ ಬಾರ್ಸಿಲೋನಾ ವಿಮಾನ ನಿಲ್ದಾಣದಿಂದ ವರದಿಯಾಗಿದೆ. ಪ್ರಸ್ತುತ ವೀಡಿಯೋ ಸೆರೆಹಿಡಿಯಲಾಗಿದ್ದು, ಇನ್ನಷ್ಟು ರೋಚಕತೆಗೆ ಸೃಷ್ಟಿಯಾಗಲು ಕಾರಣವಾಗಿದೆ.

ಏಕಕಾಲಕ್ಕೆ ನದಿಗೆ ಉರುಳಿದ 3 ವಿಮಾನಗಳು

ಏನಿದು ಘಟನೆ?
ಸ್ಪೇನ್‌ನ ಇಲ್ ಪ್ರಾಟ್ ವಿಮಾನ ನಿಲ್ದಾಣದಲ್ಲಿ ಈ ಆತಂಕಕಾರಿ ಘಟನೆ ವರದಿಯಾಗಿದೆ. ಆದರೆ ಪೈಲಟ್‌ನ ಸಮಯ ಪ್ರಜ್ಞೆಯಿಂದಾಗಿ ಸಂಭವನೀಯ ದುರಂತ ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ರಷ್ಯಾ ಏರ್‌ಲೈನ್ಸ್‌ ಅಟೈರ್‌ಗೆ ಸೇರಿದ ಬೋಯಿಂಗ್ 767 ಇನ್ನೇನು ಲ್ಯಾಂಡಿಂಗ್ ಆಗಲಿದೆ ಎನ್ನುವಷ್ಟರಲ್ಲಿ ಅರ್ಜೈಂಟೀನಾದ ಏರೋಲೈನ್ಸ್ ಏರ್‌ಬಸ್ ಎ340 ತೊಡಕಾಗಿ ಪರಿಣಿಸಿತ್ತು.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ತನ್ನ ಮುಂದಿನ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಏರ್‌ಬಸ್ ನಿಧಾನವಾಗಿ ರನ್ವೇಯಲ್ಲಿ ಹಾದು ಹೋಗುತ್ತಿತ್ತು. ಈ ಸಂದರ್ಭದಲ್ಲಿ ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿತ್ತು.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಬೋಯಿಂಗ್ ವಿಮಾನದ ಪೈಲಟ್ ತಕ್ಷಣ ವಿಮಾನವನ್ನು ಮೇಲಕ್ಕೆತ್ತಿದ್ದರು. ಇದರಿಂದಾಗಿ ಸಂಭವನೀಯ ಅಪಘಾತ ತಪ್ಪಿದಂತಾಗಿದೆ.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಬಾರ್ಸಿಲೋನಾ ವಿಮಾನ ಅಧಿಕಾರಿಗಳು ಇಂತಹದೊಂದು ಅಪಘಾತ ಸನ್ನಿವೇಶ ಸೃಷ್ಟಿಯಾಗಿರುವ ಹಿಂದಿರುವ ನಿಖರ ಕಾರಣ ತಿಳಿಯುವ ಹಿನ್ನಲೆಯಲ್ಲಿ ತನಿಖೆ ಕೈಗೊಂಡಿದ್ದಾರೆ.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ತದಾನಂತರ ವಿಮಾನ ಮೇಲಕ್ಕೆತ್ತಿದ ರಷ್ಯಾ ಬೋಯಿಂಗ್ ವಿಮಾನದ ಚಾಲಕ ಸ್ವಲ್ಪ ಸಮಯದ ಬಳಿಕ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾದರು.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ಕಳೆದ ಶನಿವಾರ ಜುಲೈ 05ರಂದು ಈ ಘಟನೆ ನೆಡಿದಿದ್ದು, ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗಿದೆ.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ಈ ನಡುವೆ ಹೇಳಿಕೆ ಕೊಟ್ಟಿರುವ ಸ್ಪಾನಿಶ್ ಏರ್‌ಪೋರ್ಟ್ಸ್ ಆಂಡ್ ಏರ್ ನೇವಿಗೇಷನ್ (ಎಇಎನ್‌ಎ), ಈ ಎಲ್ಲ ಅವಾಂತರದ ನಡುವೆಯೂ ಎರಡು ವಿಮಾನಗಳಿಗೂ ಸುರಕ್ಷಿತವಾಗಿ ಹಾದು ಹೋಗುವ ಸ್ಥಳವಕಾಶ ಕಲ್ಪಿಸಿಕೊಡಲಾಗಿತ್ತು ಎಂಬ ಹೇಳಿಕೆ ಗೊಂದಲಕ್ಕೀಡು ಮಾಡಿದೆ.

ಕೂದಲೆಳೆಯ ಅಂತರದಲ್ಲಿ ತಪ್ಪಿದ ವಿಮಾನ ದುರ್ಘಟನೆ

ಪ್ರಾಥಮಿಕ ತನಿಖೆಯಲ್ಲಿ ವಿಮಾನ ಟ್ರಾಫಿಕ್ ಕಂಟ್ರೋಲರ್ ಎಡವಟ್ಟಿನಿಂದಾಗಿ ಇಂತಹದೊಂದು ಮುಖಾಮುಖಿ ಪ್ರಸಂಗ ಎದುರಾಗಿತ್ತು ಎಂಬ ಬಗ್ಗೆ ಮಾಹಿತಿ ಲಭಿಸಿದೆ.

ಎರಡು ವಿಮಾನಗಳ ಮುಖಾಮುಖಿ - ರೋಚಕ ವೀಡಿಯೋ ವೀಕ್ಷಿಸಿ

Most Read Articles

Kannada
English summary
Dramatic moment two planes almost collide on runway at Barcelona airport
Story first published: Tuesday, July 8, 2014, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X