ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವಾಗಲು ಕೇಂದ್ರ ಸರ್ಕಾರವು ಮುಂದೆ ಬಂದಿದೆ. 28 ನ್ಯಾನೋಮೀಟರ್‌ಗಳವರೆಗೆ ಚಿಪ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು 50%ವರೆಗೂ ನೆರವು ನೀಡಲಿದೆ. ಇತ್ತೀಚೆಗಷ್ಟೇ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ರೂ. 76,000 ಕೋಟಿ ಹೂಡಿಕೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಪ್ರಪಂಚದಾದ್ಯಂತ ಸೆಮಿಕಂಡಕ್ಟರ್ ಚಿಪ್ ಗಳಿಗೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಆ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರವು ಈ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ವೇಳೆ ಕೇಂದ್ರ ಸರ್ಕಾರವು 28 ಎನ್ಎಂನಿಂದ 45ಎನ್ಎಂ ವರೆಗಿನ ಚಿಪ್‌ಗಳನ್ನು ತಯಾರಿಸುವ ಘಟಕಗಳಿಗೆ 40% ನಷ್ಟು ಹಾಗೂ 45ಎನ್ಎಂನಿಂದ 65ಎನ್ಎಂ ವರೆಗಿನ ಚಿಪ್‌ಗಳನ್ನು ತಯಾರಿಸುವ ಘಟಕಗಳಿಗೆ 30% ನಷ್ಟು ರಿಯಾಯಿತಿ ನೀಡಲಿದೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಟ್ರಾನ್ಸಿಸ್ಟರ್‌ಗಳ ಸಹಾಯದಿಂದ ಚಿಪ್ ಅನ್ನು ತಯಾರಿಸಲಾಗುತ್ತದೆ. ಎರಡು ಟ್ರಾನ್ಸಿಸ್ಟರ್‌ಗಳ ನಡುವಿನ ಅಂತರವು ಚಿಕ್ಕದಾದಷ್ಟು ಚಿಪ್ ಚಿಕ್ಕದಾಗಿರುತ್ತದೆ. ಇದರಿಂದಾಗಿ 28 ಎನ್ಎಂ ಚಿಪ್ ತಯಾರಿಸುವ ಘಟಕಗಳಿಗೆ ಗರಿಷ್ಠ ರಿಯಾಯಿತಿ ನೀಡಲಾಗುತ್ತದೆ. ಈ ಚಿಪ್‌ಗಳನ್ನು ಸಂಸ್ಕರಣಾ ಘಟಕಗಳು, ಗ್ರಾಫಿಕ್ಸ್ ಪ್ರೊಸೆಸರ್‌ಗಳು, ಸಂಪರ್ಕಿತ ತಂತ್ರಜ್ಞಾನ ಹಾಗೂ ಆಟೋಮೋಟಿವ್ ವಲಯದಲ್ಲಿಯೂ ಬಳಸಲಾಗುತ್ತದೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳು ಆಧುನಿಕ ಫೀಚರ್ ಹಾಗೂ ಸಲಕರಣೆಗಳನ್ನು ಹೊಂದುತ್ತಿರುವುದರಿಂದ ಆಟೋ ಮೊಬೈಲ್ ಉದ್ಯಮದಲ್ಲಿ ಚಿಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಕೋವಿಡ್‌ನಿಂದಾಗಿ ಅವುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದ್ದು, ಬೇಡಿಕೆಗೆ ತಕ್ಕಷ್ಟು ಪೂರೈಸಲಾಗುತ್ತಿಲ್ಲ. ಈ ಕೊರತೆಯು ಆಟೋ ಮೊಬೈಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಈ ವಿನಾಯಿತಿ ಪಡೆಯಲು ಸರ್ಕಾರ ಹಲವು ಷರತ್ತುಗಳನ್ನು ಹಾಕಿದ್ದರೂ, ಇದರ ಅಡಿಯಲ್ಲಿ ಸೆಮಿಕಂಡಕ್ಟರ್ ಉತ್ಪಾದಿಸುವ ಕಂಪನಿಯು ರೂ. 20,000 ಕೋಟಿ ಹೂಡಿಕೆ ಮಾಡಬೇಕಾಗುತ್ತದೆ. ಇದರ ಜೊತೆಗೆ ಕಂಪನಿಯ ಎಲೆಕ್ಟ್ರಾನಿಕ್ ಸಿಸ್ಟಂ ವಿನ್ಯಾಸ ಹಾಗೂ ತಯಾರಿಕೆಯಲ್ಲಿ ಸಮೂಹದ ಗಳಿಕೆಯು ಕಳೆದ ಮೂರು ವರ್ಷಗಳಲ್ಲಿ ರೂ. 7500 ಕೋಟಿಗಳಾಗಬೇಕಾಗಿರುತ್ತದೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಈ ಯೋಜನೆಯನ್ನು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಏಜೆನ್ಸಿಯು ಜಾರಿಗೊಳಿಸುತ್ತದೆ. ಈ ಯೋಜನೆಯು ಆರು ವರ್ಷಗಳದ್ದಾಗಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರ ಅನುಮೋದನೆಯ ನಂತರ ಮತ್ತಷ್ಟು ಕಾಲ ವಿಸ್ತರಿಸಬಹುದು. ಇತ್ತೀಚೆಗೆ ಟಾಟಾ ಗ್ರೂಪ್ ದೇಶದಲ್ಲಿ ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ಮುಂದೆ ಬಂದಿದೆ. ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಸೆಮಿಕಂಡಕ್ಟರ್'ಗಳ ಉತ್ಪಾದನೆಯನ್ನು ಆರಂಭಿಸುವ ಸಾಧ್ಯತೆಗಳಿವೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಸೆಮಿಕಂಡಕ್ಟರ್ ಉದ್ಯಮದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ರೂ. 76 ಸಾವಿರ ಕೋಟಿಗಳ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯನ್ನು (ಪಿಎಲ್ಐ ಯೋಜನೆ) ಘೋಷಿಸಿದೆ. ಮುಂದಿನ 2 - 3 ವರ್ಷಗಳಲ್ಲಿ ದೇಶಿಯ ಅಗತ್ಯಕ್ಕಾಗಿ ಸೆಮಿಕಂಡಕ್ಟರ್'ಗಳ ಉತ್ಪಾದನೆಯನ್ನು ದೇಶದಲ್ಲಿ ಆರಂಭಿಸಲಾಗುವುದು ಎಂದು ಹೇಳಲಾಗಿದೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಚಿಪ್ ಉತ್ಪಾದನಾ ಉದ್ಯಮದಲ್ಲಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಮುಂದಿನ ವರ್ಷದ ಜನವರಿಯಿಂದ ಪಿ‌ಎಲ್‌ಐ ಯೋಜನೆಯಡಿ ಅರ್ಜಿಗಳನ್ನು ಸ್ವೀಕರಿಸಲಿದೆ. ಇನ್ನು 2 - 3 ವರ್ಷಗಳಲ್ಲಿ ಸುಮಾರು 10 - 12 ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ವೈಷ್ಣವ್ ಜೈನ್ ಹೇಳಿದ್ದಾರೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಈ ಅವಧಿಯಲ್ಲಿ ಸುಮಾರು 50 - 60 ಡಿಸೈನಿಂಗ್ ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ. ಪ್ರಪಂಚದಾದ್ಯಂತ ವಾಹನ ಉದ್ಯಮವು ಬಿಡಿಭಾಗಗಳ ಕೊರತೆಯಿಂದಾಗಿ ಉತ್ಪಾದನೆಯಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಚಿಪ್ ತಯಾರಿಕೆಗಾಗಿ ಪಿ‌ಎಲ್‌ಐ ಯೋಜನೆಯನ್ನು ತರಲಾಗಿದೆ. ಇದರಿಂದ ದೇಶದ ಆಟೋ ಮೊಬೈಲ್ ವಲಯಕ್ಕೆ ಸಾಕಷ್ಟು ನೆರವಾಗುವ ನಿರೀಕ್ಷೆಗಳಿವೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಕೋವಿಡ್ 19 ಸಾಂಕ್ರಾಮಿಕದ ನಂತರ ಸೆಮಿಕಂಡಕ್ಟರ್ ಗಳಿಗೆ ಬೇಡಿಕೆ ಗಗನಕ್ಕೇರಿದೆ. ಸೆಮಿಕಂಡಕ್ಟರ್ ಚಿಪ್ ಬಳಸುವ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳ ಬೇಡಿಕೆ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಚಿಪ್ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಈ ಬೇಡಿಕೆಗೆ ತಕ್ಕಂತೆ ಬದಲಾಯಿಸಿದರು.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಲಾಕ್‌ಡೌನ್‌ ನಂತರ ಆಟೋಮೊಬೈಲ್ ಉದ್ಯಮವು ಕಾರ್ಯಾಚರಣೆಯನ್ನು ಪುನರಾರಂಭಿಸಿದಾಗ, ಮೈಕ್ರೋಚಿಪ್‌ಗಳ ಕೊರತೆ ಎದುರಾಯಿತು. ಚಿಪ್ ತಯಾರಕ ಕಂಪನಿಗಳು ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ಉತ್ಪಾದನೆಯಲ್ಲಿ ಅಡಚಣೆ ಉಂಟಾಗಿದೆ. ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳು ಮುಂದೆ ಬರುತ್ತಿವೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ದೇಶದಲ್ಲಿ ಸೆಮಿಕಂಡಕ್ಟರ್ ಕೊರತೆ ಎದುರಿಸುತ್ತಿರುವ ಆಟೋಮೊಬೈಲ್ ಕಂಪನಿಗಳಿಗೆ ನೆರವಾಗಲು ವೇದಾಂತ ಗ್ರೂಪ್ ಮುಂದಾಗಿದೆ. ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ವೇದಾಂತ ಗ್ರೂಪ್ ನಿರ್ಧರಿಸಿದೆ. ವೇದಾಂತ ಗ್ರೂಪ್ ಮುಖ್ಯಸ್ಥರಾದ ಅನಿಲ್ ಅಗರ್ವಾಲ್ ರವರು ದೇಶದಲ್ಲಿ ಸೆಮಿಕಂಡಕ್ಟರ್‌ಗಳ ಉತ್ಪಾದನೆಯನ್ನು ಆರಂಭಿಸಲು ರೂ. 60,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಮುಂದಿನ ಮೂರು ವರ್ಷಗಳಲ್ಲಿ ಈ ಹೂಡಿಕೆ ಮಾಡಲಾಗುವುದು ಎಂದು ವರದಿಯಾಗಿದೆ. ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಕೇಂದ್ರ ಸರ್ಕಾರವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಘೋಷಿಸಿದ ಕೆಲವೇ ದಿನಗಳ ನಂತರ ವೇದಾಂತ ಗ್ರೂಪ್ ಕಂಪನಿಯು ಈ ಘೋಷಣೆ ಮಾಡಿದೆ. ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ವೇದಾಂತ ಗ್ರೂಪ್ ಅವಾನ್‌ಸ್ಟ್ರಾಟ್ ಕಂಪನಿಯೊಂದಿಗೆ ಕೈಜೋಡಿಸಲಿದೆ.

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ನೆರವು ನೀಡಲಿದೆ ಕೇಂದ್ರ ಸರ್ಕಾರ

ಅವಾನ್‌ಸ್ಟ್ರಾಟ್ ಜಪಾನ್ ಮೂಲದ ಕಂಪನಿಯಾಗಿದೆ. ಈ ಕಂಪನಿಯನ್ನು ವೇದಾಂತ ಗ್ರೂಪ್ 2017ರಲ್ಲಿ ಕಾರ್ಲೈಲ್ ಗ್ರೂಪ್‌ನಿಂದ ಸ್ವಾಧೀನಪಡಿಸಿಕೊಂಡಿತು. ಕಂಪನಿಯು TSMC, United Microelectronics Corp, Foxconn, Korean LG ಹಾಗೂ ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ Samsung ಹಾಗೂ Sharp ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

Most Read Articles

Kannada
English summary
Union government to give subsidy for chip manufacturing units details
Story first published: Tuesday, December 28, 2021, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X