ಮಾಡಿದುಣ್ಣೋ ಮಹರಾಯ ಅನ್ನೋದು ಇದಕ್ಕೆ ಅಲ್ವಾ ?

Written By:

ನಮ್ಮ ನೆಲದಲ್ಲಿ ಒಂದು ಮಾತಿದೆ, 'ನೀವು ಏನು ಮಾಡುತ್ತೀರೋ ಅದೇ ನಿಮಗೆ ಆಗುತ್ತದೆ?' ಎಂದು. ನಾವು ಒಳ್ಳೆಯದು ಬಯಸಿದರೆ ನಮಗೆ ಒಳ್ಳೆಯದಾಗುತ್ತದೆ. ಅದೇ ರೀತಿ ಕೆಟ್ಟದ್ದು ಬಯಸಿದರೆ ಖಂಡಿತ ಕೆಟ್ಟದು ಸಂಭವಿಸುತ್ತದೆ.

ಇಲ್ಲೊಂದು ಘಟನೆ ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು, ಒಬ್ಬ ವ್ಯಕ್ತಿಯ ಕಾರಿನ ಕ್ಯಾಮೆರಾ ಕಣ್ಣಿನಲ್ಲಿ ಎಲ್ಲವೂ ಧಾಖಲಾಗಿದ್ದು, ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ರಸ್ತೆಗೆ ಹೊಂದಿಕೊಂಡಂತೆ ನಿಂತಿದ್ದ ಕಾರು ಚಲಿಸಲು ಆರಂಭಿಸಿದ ತಕ್ಷಣ ರಸ್ತೆಯ ಮೇಲೆ ವೇಗವಾಗಿ ಚಲಿಸುತ್ತಿದ್ದು ಮುಂದಿನ ವಾಹನದ ಮಾಲೀಕ ಯಾವುದೇ ಕಾರಣವಿಲ್ಲದೆ ಸುಮ್ಮನೆ ಖ್ಯಾತಿ ತೆಗೆದಿದ್ದಾನೆ.

ಕಾರಣವಿಲ್ಲದೆ ಬ್ರೇಕ್ ಹಾಕುವುದು, ಹಿಂದೆ ಮುಂದೆ ಮಾಡುವುದು ಮುಂದುವರಿಸಿದ ಕಾರು ಚಾಲಕ ಕೊನೆಗೆ ಎಡಕ್ಕೆ ತೆಗೆದುಕೊಳ್ಳುವ ಸಲುವಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸಿದ್ದು, ಸ್ವಲ್ಪ ಸಮಯದ ನಂತರ ಅತಿ ವೇಗವಾಗಿ ಎಡಕ್ಕೆ ತಿರುಗಿಸಿದ್ದಾನೆ.

ಆದರೆ ಅದೇನಾಯಿತೋ ಏನೋ ಕಾರು ನಿಯಂತ್ರಣ ಕಳೆದುಕೊಂಡು ಅತ್ತ ಇತ್ತ ಚಲಿಸಿ ಕೊನೆಗೆ ಮರ ಹತ್ತುವ ಹಾಗೆ ನೇರವಾಗಿ ನಿಂತುಬಿಟ್ಟಿದೆ. ಕೊನೆಗೆ ಕಾರಿನಿಂದ ಇಳಿಯಲು ಬಾರದ ಸ್ಥಿತಿಯಲ್ಲಿ ಆಹಂಕಾರಿ ಚಾಲಕ ನಿಂತಿದ್ದು ಎಲ್ಲರಿಗೂ ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದು ಸುಳಲ್ಲ.

Read more on ಕಾರು car
English summary
That's what happened exactly to this particular driver when he pulled out of his driveway. A Camaro passes him out of nowhere.
Story first published: Friday, June 9, 2017, 18:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark