ಶತಮಾನ ಭೀಕರ ಪ್ರವಾಹಕ್ಕೆ ನಲುಗಿದ ಚೆನ್ನೈ

By Nagaraja

ಚೆನ್ನೈ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿದ್ದು, ಭಾರಿ ನಾಶನಷ್ಟ ಸಂಭವಿಸಿದೆ. ಚೆನ್ನೈ ನೆರೆಯು ಕಳೆದೊಂದು ಶತಮಾನದಲ್ಲೇ ಅತ್ಯಂತ ಭೀಕರವೆಂದು ವಿಶ್ಲೇಷಿಸಲಾಗುತ್ತಿದ್ದು, ಜನ ಸಾಮಾನ್ಯರ ಪಾಡು ದುಸ್ತರವೆನಿಸಿದೆ.

Also Read: ಚೆನ್ನೈ ಪ್ರವಾಹ; ಆಟೋ ಕ್ಷೇತ್ರಕ್ಕೆ ಆಗಿರುವ ನಷ್ಟ ಅಷ್ಟಿಷ್ಟಲ್ಲ! ಮುಂದಕ್ಕೆ ಓದಿ

ಇದಾದ ಬೆನ್ನಲ್ಲೇ ಚೆನ್ನೈ ನಗರವನ್ನು ದುರಂತ ಪೀಡಿತ ನಗರವೆಂದು ಘೋಷಿಸಲಾಗಿದ್ದು, ತಮಿಳುನಾಡು ರಾಜ್ಯ ಸರಕಾರ ಸೇರಿದಂತೆ ಕೇಂದ್ರ ಸರಕಾರದ ವಿಪತ್ತು ರಕ್ಷಣಾ ಪಡೆಗಳು ರಕ್ಷಣಾಗಿ ಧಾವಿಸಿದೆ. ಪ್ರಸ್ತುತ ಲೇಖನದಲ್ಲಿ ಚೆನ್ನೈ ಮಹಾ ಪ್ರವಾಹಕ್ಕೆ ಸಿಲುಕಿರುವ ವಾಹನ ಸವಾರರ ಪರದಾಟವನ್ನು ಚಿತ್ರ ಸಮೇತ ವಿವರಿಸಲಾಗುವುದು.

ರೈಲು ಸಂಚಾರ ಅಸ್ತವ್ಯಸ್ತ

ರೈಲು ಸಂಚಾರ ಅಸ್ತವ್ಯಸ್ತ

ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ಉಪನಗರದ ರೈಲು ಸಂಚಾರವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರೈಲು ಹಳಿಯೂ ನೀರಿನಿಂದ ಆವೃತ್ತವಾಗಿದೆ.

ವಾಹನಗಳ ಪರದಾಟ

ವಾಹನಗಳ ಪರದಾಟ

ಸತತ ಮಳೆಯಿಂದಾಗಿ ಹಲೆವೆಡೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಜಲಾವೃತ ಚೆನ್ನೈಯಲ್ಲಿ ವಾಹನ ಸಂಚಾರಿಗಳ ಪರಾದಾಟವನ್ನು ನೀವಿಲ್ಲಿ ಕಾಣಬಹುದಾಗಿದೆ.

ಜನಸಾಮಾನ್ಯರ ರಕ್ಷಣೆ

ಜನಸಾಮಾನ್ಯರ ರಕ್ಷಣೆ

ಈ ನಡುವೆ ದೋಣಿಗಳ ಸಹಾಯದಿಂದ ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಗೆ ಚುರುಕು ಮುಟ್ಟಿಸಿದೆ.

ಭಾರತೀಯ ಸೇನೆ

ಭಾರತೀಯ ಸೇನೆ

ಈ ಹಿಂದೆ ಅನೇಕ ಭಾರಿ ದುರಂತ ಪೀಡಿತ ಪ್ರದೇಶಗಳಲ್ಲಿ ನೆರವಿಗೆ ಧಾವಿಸಿರುವ ಭಾರತೀಯ ಸೇನೆಯು ಮಗದೊಮ್ಮೆ ತನ್ನ ಸೇವೆಯನ್ನು ನಿರೂಪಿಸಿದೆ.

ಚೈನ್ನೈ ಉಪನಗರ

ಚೈನ್ನೈ ಉಪನಗರ

ಚೆನ್ನೈ ಉಪನಗರ ರೈಲು ನಿಲ್ದಾಣ ದೃಶ್ಯ ಇದಾಗಿದ್ದು, ರೈಲು ಹಳಿ ಸಂಪೂರ್ಣವಾಗಿ ಜಲಾವೃತವಾಗಿದೆ.

ಪ್ರವಾಹ

ಪ್ರವಾಹ

ಪ್ರವಾಹ ಪೀಡಿತ ಕೊಟ್ಟೂರ್ ಪುರಂ ಪ್ರದೇಶದಲ್ಲಿ ಮಹಿಳೆ ಹಾಗೂ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿರು ದೃಶ್ಯ

ನೆರವಿಗಾಗಿ ಕಾತರ

ನೆರವಿಗಾಗಿ ಕಾತರ

ಕೊಟ್ಟೂರ್ ಪುರಂ ಪ್ರದೇಶದಲ್ಲಿ ರಸ್ತೆ ಮಧ್ಯದಲ್ಲೇ ನೆರವಿಗಾಗಿ ಕಾಯುತ್ತಿರುವ ಕುಟುಂಬವೊಂದರ ದೃಶ್ಯ.

ಜಲಾವೃತ

ಜಲಾವೃತ

ಇನ್ನು ನಾಲ್ಕೈದು ದಿನ ಮಳೆ ಸುರಿಯುವ ಸಾಧ್ಯತೆಯಿದ್ದು, ಪರಿಸ್ಥಿತಿ ಮತ್ತಷ್ಟು ಹದೆಗೆಡುವ ಬಗ್ಗೆ ಹವಮಾನ ಇಲಾಖೆ ಎಚ್ಚರಿಸಿದೆ. ಈ ನುಡವೆ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಶತಮಾನ ಭೀಕರ ಪ್ರವಾಹಕ್ಕೆ ನಲುಗಿದ ಚೆನ್ನೈ

ಇದು ಮಳೆಯ ಪ್ರವಾಹಕ್ಕೆ ನಲುಗಿದ ಚೆನ್ನೈನ ಮಗದೊಂದು ಭೀಕರ ದೃಶ್ಯ.

ಮರೀನಾ ಬೀಚ್ ರಸ್ತೆ

ಮರೀನಾ ಬೀಚ್ ರಸ್ತೆ

ವಿಶ್ವ ಪ್ರಸಿದ್ಧ ಮರೀನಾ ಬೀಚ್ ರಸ್ತೆಯನ್ನು ಬಂಗಾಳ ಕೊಲ್ಲಿ ಸಮುದ್ರ ಆಕ್ರಮಿಸಿರುವ ದೃಶ್ಯ ಇದಾಗಿದೆ.

ಶತಮಾನ ಭೀಕರ ಪ್ರವಾಹಕ್ಕೆ ನಲುಗಿದ ಚೆನ್ನೈ

ಚೆನ್ನೈ ಪ್ರವಾಹಕ್ಕೆ ಕೊಚ್ಚಿ ಹೋದ ಬೈಕ್ ಸವಾರನ ರಕ್ಷಣೆ

Most Read Articles

Kannada
English summary
Vehicle moves on the watter lodged road during heavy rains in Chennai
Story first published: Thursday, December 3, 2015, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X