ಇಂಧನ ಬೆಲೆ ಏರಿಕೆಗೆ ಕಂಗೆಟ್ಟು ವಿಂಟೇಜ್ ಶೈಲಿಯ ಎಲೆಕ್ಟ್ರಿಕ್ ಕಾರು ಖರೀದಿ..‌ಪ್ರತಿ ಕಿ.ಮೀಗೆ 1ರೂ. ವೆಚ್ಚ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದಾರೆ. ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ

ಇತ್ತೀಚೆಗೆ ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ವೇಳೆ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಇನ್ನು ಪಂಜಾಬ್‌ ನಂತಹ ಸ್ಥಳಗಳಲ್ಲಿ ಕಸ್ಟಮ್ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಅನೇಕ ಖಾಸಗಿ ಗ್ಯಾರೇಜ್ ಗಳಿವೆ. ಅವುಗಳಲ್ಲಿ ಹೆಚ್ಚಿನವು ಲೋ-ಸ್ಪೀಡ್ ಎಲೆಕ್ಟ್ರಿಕ್ ವಾಹನಗಳಾಗಿದ್ದು, ನೋಂದಣಿ ಸಂಖ್ಯೆಯ ಅಗತ್ಯವಿಲ್ಲ.

ವಿಂಟೇಜ್ ಶೈಲಿಯ ಎಲೆಕ್ಟ್ರಿಕ್ ಕಾರು ಖರೀದಿ

ಇಂತಹ ಇವಿಗಳನ್ನು ಖರೀದಿಸಿ ದಿನನಿತ್ಯ ಬಳಸುತ್ತಿರುವವರು ಅನೇಕರಿದ್ದಾರೆ. ವಿಂಟೇಜ್ ಕಾರಿನಂತೆ ಕಾಣುವ ಎಲೆಕ್ಟ್ರಿಕ್ ಕಾರಿನ ಬಗ್ಗೆ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಳ್ಳುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೋವನ್ನು Pazhamaye Thedi ಎಂಬ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದೆ. ಈ ವೀಡಿಯೊದಲ್ಲಿ, ಈ ಲೋ-ಸ್ಪೀಡ್ ಎಲೆಕ್ಟ್ರಿಕ್ ಕಾರನ್ನು ಮಾಲೀಕನ್ನು ಪ್ರತಿದಿನ ಬಳಸುತ್ತಿದ್ದಾರೆ. ಈ ಮಾಡಿಫೈ ಎಲೆಕ್ಟ್ರಿಕ್ ಕಾರು ಕೇರಳದ ಕೊಲ್ಲಂ ಜಿಲ್ಲೆಯ ಅಲೆಕ್ಸ್ ಅವರ ಒಡೆತನದಲ್ಲಿದೆ. ಅವರು ಪ್ರತಿನಿತ್ಯ ಕೆಲಸಕ್ಕೆ ಈ ಕಾರನ್ನು ಬಳಸುತ್ತಾರೆ.

ಪೆಟ್ರೋಲ್ ಬೆಲೆ ಹೆಚ್ಚಾಗಿರುವುದರಿಂದ, ಅಲೆಕ್ಸ್ ಅವರು ಇಂಧನ ವೆಚ್ಚ ಉಳಿಸಲು ಈ ಎಲೆಕ್ಟ್ರಿಕ್ ಕಾರನ್ನು ಬಳಸುತ್ತಿದ್ದಾರೆ. ಇನ್ನು ಅಲೆಕ್ಸ್ ಅವರು ದ್ವಿಚಕ್ರ ವಾಹನವನ್ನು ಇಷ್ಟಪಡುವುದಿಲ್ಲ. ಮಾಲೀಕರು ಈ ಕಾರನ್ನು ಮಲಪ್ಪುರಂನ ಬಿಲ್ಡರ್‌ನಿಂದ ಖರೀದಿಸಿದ್ದಾರೆ. ಅವರು ಇವಿಗಾಗಿ ಹುಡುಕುತ್ತಿರುವಾಗ, ಪಂಜಾಬ್‌ನಿಂದ ಪ್ಲುಟೊ ಮೋಟಾರ್‌ಗಳು ಕಾಣಿಸಿಕೊಂಡವು, ಅವರು ಲೋ-ಪವರ್ ಇವಿ ಗಳನ್ನು ನಿರ್ಮಿಸುತ್ತಿದ್ದರು. ಅವರ ವಿಂಟೇಜ್ ಕಾರಿನ ವಿನ್ಯಾಸವನ್ನು ಇಷ್ಟಪಟ್ಟು ಸ್ವತಃ ಕಾರನ್ನು ಖರೀದಿಸಿದರು. ಈ ವಿಂಟೇಜ್ ಕಾರು ಎಲೆಕ್ಟ್ರಿಕ್ ಕಾರ್ ಆಗಿದೆ.

ವಿಂಟೇಜ್ ಶೈಲಿಯ ಎಲೆಕ್ಟ್ರಿಕ್ ಕಾರು ಖರೀದಿ

ಇದನ್ನು ಅನೇಕ ಇತರ ವಾಹನಗಳ ಭಾಗಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ಟೈರ್‌ಗಳು ಮತ್ತು ಚಕ್ರಗಳು ರಾಯಲ್ ಎನ್‌ಫೀಲ್ಡ್ ಬುಲೆಟ್‌ನಿಂದ ಮತ್ತು ಇತರ ಭಾಗಗಳು ಟ್ರಾಕ್ಟರ್‌ಗಳಿಂದ. ಹೆಡ್‌ಲೈಟ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್ ಭಾಗವಾಗಿದೆ. ಸಿಂಗಲ್ ಚಾರ್ಜ್‌ನಲ್ಲಿ ಈ ಕಾರು ಸುಮಾರು 100 ಕಿಮೀ ಮೈಲೇಜ್ ಅಥವಾ ರೇಂಜ್ ಅನ್ನು ಒದಗಿಸುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಪ್ರತಿ ಕಿ.ಮೀಗೆ ಸುಮಾರು 1 ರೂ.ವೆಚ್ಚವಾಗುತ್ತಿದೆ. ಇದು ಸಾಮಾನ್ಯ ICE ವಾಹನಕ್ಕಿಂತ ಕಡಿಮೆಯಾಗಿದೆ.

ಮಾಲೀಕರು ಹ್ಯಾಂಡ್‌ಬ್ರೇಕ್ ಅಳವಡಿಸಿ ಟೈಲ್ ಲ್ಯಾಂಪ್‌ಗಳಿಗೆ ಸಂಪರ್ಕವನ್ನೂ ನೀಡಿದರು. ನಗರ ಪ್ರಯಾಣಕ್ಕೆ ಇದು ಪರಿಪೂರ್ಣ ಕಾರು ಎಂದು ಅವರು ಉಲ್ಲೇಖಿಸುತ್ತಾರೆ ಮತ್ತು ಅವರು ಅದನ್ನು ಎಂದಿಗೂ ಲಾಂಗ್ ಡ್ರೈವ್‌ಗಳಿಗೆ ತೆಗೆದುಕೊಳ್ಳುವುದಿಲ್ಲ. ವಿಂಟೇಜ್ ಕಾರಿನಂತೆ ಕಾಣುವುದರಿಂದ ವಾಹನದ ಬಗ್ಗೆ ಕೇಳಲು ಜನರು ಆಗಾಗ್ಗೆ ಅವರ ಬಳಿಗೆ ಬರುತ್ತಾರೆ. ಅವರಲ್ಲಿ ಹಲವರು ಕಾರಿನ ಬೆಲೆ ಸುಮಾರು 3 ಲಕ್ಷ ರೂಪಾಯಿಗಳ ಬಗ್ಗೆ ಕೇಳಿದ್ದಾರೆ. ಪ್ಲುಟೊ ಮೋಟಾರ್ಸ್ ಕಾರಿನೊಂದಿಗೆ ಚಾರ್ಜ್ ಮಾಡಲು ಇನ್ವರ್ಟರ್ ಅನ್ನು ನೀಡಿತು.

ಸದ್ಯಕ್ಕೆ ಬ್ಯಾಟರಿಗಳನ್ನು ಕಾರಿನ ಮುಂಭಾಗದಲ್ಲಿ ಇರಿಸಲಾಗುತ್ತದೆ. ಇನ್ನು ಕಡಿದಾದ ದೊಡ್ಡ ಎತ್ತರದ ಪ್ರದೇಶವನ್ನು ಹತ್ತಲು ಕಾರಿಗೆ ಅಷ್ಟು ಸಾಮರ್ಥ್ಯವಿಲ್ಲ. ಪೊಲೀಸರು ಅವರನ್ನು ಒಂದೆರಡು ಬಾರಿ ನಿಲ್ಲಿಸಿದ್ದಾರೆ. ಇದು ಲೋ-ಸ್ಪೀಡ್ ಎಲೆಕ್ಟ್ರಿಕ್ ಕಾರು ಎಂದು ತಿಳಿದ ನಂತರ, ಅವರಿಗೆ ಮುಂದೆ ತೆರಳಲು ಅನುಮತಿಸಿದರು. ಈ ಕಾರಿನಲ್ಲಿ ಎಸಿಯಂತಹ ಸೌಲಭ್ಯವನ್ನು ಹೊಂದಿದೆ. ಯಾವುದೇ ಸಮಸ್ಯೆಯಿಲ್ಲದೆ ಈ ವಿಂಟೇಜ್ ಮಾದರಿಯ ಎಲೆಕ್ಟ್ರಿಕ್ ಕಾರಿನ 4 ಜನರು ಆರಾಮದಾಯಕ ಪ್ರಯಾಣ ಮಾಡಬಹುದು.

ಅವರು ಕಾರಿನಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ ಮತ್ತು ಅವರು ತಮ್ಮ ಸ್ಥಳದ ಸಮೀಪವಿರುವ ಯಾವುದೇ ವರ್ಕ್‌ಶಾಪ್‌ನಲ್ಲಿ ಕಾರನ್ನು ರಿಪೇರಿ ಮಾಡಬಹುದು ಮತ್ತು ಕಾರನ್ನು ಪಂಜಾಬ್‌ಗೆ ಸಾಗಿಸಬೇಕಾಗಿಲ್ಲ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ಈ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ರಸ್ತೆಯಲ್ಲಿ ಈ ವಾಹನ ಚಲಿಸುತ್ತಿರುವಾಗ ಹಲವು ಜನರು ಇದನ್ನು ವೀಕ್ಷಿಸುತ್ತಾರೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೆರಿರುವುದರಿಂದ ಎಲೆಕ್ಟ್ರಿಕ್ ಆಗಿ ಮಾಡಿಫೈ ಮಾಡುವ ವಾಹನಗಳಿಗೆ ಹೆಚ್ಚಿನ ಬೇಡಿಕೆಗಳಿದೆ.

Most Read Articles

Kannada
English summary
Vintage car is an low speed ev costs rs 1 per km details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X