ನಿಯಂತ್ರಣ ತಪ್ಪಿ ಗೊಡೆಗೆ ಡಿಕ್ಕಿ ಹೊಡೆದ ವ್ಯಾಗನರ್- ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆ

Written By:

ನಿಯಂತ್ರಣ ತಪ್ಪಿದ ಕಾರು ಚಾಲಕ ಗೊಡೆಗೆ ಡಿಕ್ಕಿ ಹೊಡೆದಿರುವ ಘಟನೆ ಮೂಡುಬಿದಿರೆಯಲ್ಲಿ ನಡೆದಿದ್ದು, ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ತುಂತುರು ಮಳೆ ಶುರುವಾಗಿದ್ದು, ಮೂಡುಬಿದರೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ಜಿಟಿ ಜಿಟಿ ಮಳೆ ಹಿನ್ನೆಲೆ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ವ್ಯಾಗನರ್ ಕಾರು ಚಾಲಕ ಕಾಂಕ್ರಿಟ್ ಗೊಡೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಗೋಡೆ ಸಂಪೂರ್ಣ ಕಿತ್ತು ಹೊಗಿದೆ.

ಮಂಗಳೂರು ಜಿಲ್ಲೆ ಮೂಡುಬಿದರಿಯ ಮಸ್ತಿಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಗೋಡೆಗೆ ಡಿಕ್ಕಿ ಹೊಡೆದ ವ್ಯಾಗನರ್ ಕಾರು ತದನಂತರ ಅಲ್ಲಿಯೇ ನಿಂತಿದ್ದ ಸ್ಪಿಫ್ಟ್ ಕಾರಿಗೂ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದ್ರೆ ವ್ಯಾಗನರ್ ಸಂಪೂರ್ಣ ಜಖಂಗೊಂಡಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಮೊಚಗಿ ಬಿದ್ದಿದೆ.

ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಮತ್ತಷ್ಟು ವಿವರಗಳಿಗಾಗಿ ವಿಡಿಯೋ ವೀಕ್ಷಿಸಿ. 

English summary
Read in Kannada about WagonR Crashes Into Concrete Wall And Swift Dzire.
Please Wait while comments are loading...

Latest Photos