ವಿಮಾನ ಅಪಘಾತಗಳ ಹಿಂದಿನ ಕಾರಣವನ್ನು ಭೇದಿಸುವ 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಹಲವಾರು ಹೊಸ ತಂತ್ರಜ್ಞಾನಗಳ ಅಳವಡಿಕೆಯ ಹೊರತಾಗಿಯೂ ವಿಶ್ವಾದ್ಯಂತ ಪ್ರತಿ ವರ್ಷವು ಹಲವಾರು ವಿಮಾನ ದುರಂತಗಳನ್ನು ಸಂಭವಿಸುತ್ತಲೇ ಇರುತ್ತವೆ. ಮೊನ್ನೆಯಷ್ಟೇ ದೇಶದ ಅತ್ಯುನ್ನತ ಸೇನಾ ಹೆಲಿಕಾಪ್ಟರ್‌ ಕೂಡಾ ದುರಂತಕ್ಕೀಡಾಗಿದ್ದು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಸೇರಿ 13 ಜನ ಸಾವನ್ನಪ್ಪಿದ್ದು, ದುರಂತಕ್ಕೆ ನಿಖರವಾದ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಹೆಲಿಕಾಪ್ಟರ್ ದುರಂತಕ್ಕೆ ಕಾರಣವಾದ ಪ್ರಮುಖ ಅಂಶಗಳು ಮತ್ತು ಹೆಲಿಕಾಪ್ಟರ್‌ನ ಅಂತಿಮ ಕ್ಷಣದ ಸ್ಥಿತಿ ಗತಿಗಳನ್ನು ತಿಳಿಯಲು ಬ್ಲ್ಯಾಕ್‌ ಬಾಕ್ಸ್ ನೆರವಾಗಲಿದೆ. ರಕ್ಷಣಾ ಅಧಿಕಾರಿಗಳು ಈಗಾಗಲೇ ದುರಂತ ನಡೆದ ಸ್ಥಳದಲ್ಲಿ ಕಾಕ್‌ಪಿಟ್‌ ರೆಕಾರ್ಡರ್‌ ಬ್ಲ್ಯಾಕ್‌ ಬಾಕ್ಸ್‌ ಪತ್ತೆ ಹಚ್ಚಿ ತನಿಖೆ ನಡೆಸುತ್ತಿದ್ದು, ದುರಂತದ ರಹಸ್ಯವನ್ನು ಬಿಚ್ಚಿಡಲಿದೆ.

ಹಾಗಾದ್ರೆ ವಿಮಾನ ದುರಂತಗಳ ಕಾರಣವನ್ನು ಪತ್ತೆಹಚ್ಚುವಲ್ಲಿ ನೆರವಾಗುವ ಬ್ಲ್ಯಾಕ್ ಬಾಕ್ಸ್ ಕುರಿತಾದ ಇತಿಹಾಸ ಮತ್ತು ಅದರ ಕಾರ್ಯನಿರ್ವಹಣೆ ಕುರಿತಾದ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ತಿಳಿಯೋಣ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

1950 ರ ದಶಕದಿಂದಲೇ ವಿಮಾನ ಅಪಘಾತಗಳ ಕಾರಣಗಳನ್ನು ಪತ್ತೆಹಚ್ಚುವಲ್ಲಿ ಬ್ಲ್ಯಾಕ್ ಬಾಕ್ಸ್ ಅಥವಾ ಕಪ್ಪು ಪೆಟ್ಟಿಗೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಆಸ್ಟ್ರೇಲಿಯಾದ ವಿಜ್ಞಾನಿ ಡೇವಿಡ್ ವಾರೆನ್ ಅವರು ವಿಮಾನದಲ್ಲಿನ ಭದ್ರತಾ ಲೋಪ ದೋಷಗಳನ್ನು ಗುರುತಿಸಲು ಬ್ಲ್ಯಾಕ್ ಬಾಕ್ಸ್ ಪರಿಕಲ್ಪನೆಯನ್ನು ಅಭಿವೃದ್ದಿಪಡಿಸಿದರು.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಪೈಲಟ್‌ಗಳ ವೈಯಕ್ತಿಕ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕೆ ಮೊದಲಿಗೆ ಆಸ್ಟ್ರೇಲಿಯಾ ಸರ್ಕಾರವು ಈ ಕಲ್ಪನೆಯನ್ನು ಅನುಮೋದಿಸಲು ನಿರಾಕರಿಸಿದರೂ ಕಾಲಾಂತರದಲ್ಲಿ ನಡೆದ ಟ್ರಾನ್ಸ್-ಆಸ್ಟ್ರೇಲಿಯನ್ ವಿಮಾನದ ಪತನ(1960)ದ ನಂತರ ಎಲ್ಲಾ ವಿಮಾನಗಳಲ್ಲೂ ಕಪ್ಪು ಪೆಟ್ಟಿಗೆಯನ್ನು ಅಳವಡಿಕೆ ಮಾಡಲು ಆರಂಭಿಸಲಾಯ್ತು.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಟ್ರಾನ್ಸ್-ಆಸ್ಟ್ರೇಲಿಯನ್ ವಿಮಾನದ ಪತನದ ನಂತರ ಯುಎಸ್ಎ ಸರ್ಕಾರವು ಸಹ ಬ್ಲ್ಯಾಕ್ ಬಾಕ್ಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಿತು. ಬ್ಲ್ಯಾಕ್ ಬಾಕ್ಸ್ ಎರಡು ರೀತಿಯ ಸಾಧನಗಳನ್ನು ಒಳಗೊಂಡಿದ್ದು, ಒಂದು ಪೈಲಟ್‌ಗಳ ಸಂಭಾಷಣೆಗಳನ್ನು ದಾಖಲಿಸುವ ಸಿವಿಆರ್(CVR) ಮತ್ತು ಎರಡನೆದಾಗಿ ವಿಮಾನದ ಎಂಜಿನ್‌ನ ಕಾರ್ಯಾಚರಣೆ, ವೇಗ, ಎತ್ತರ ಮತ್ತು ನಿಯಂತ್ರಣ ಸಾಧನಗಳ ಕಾರ್ಯಾಚರಣೆಯ ಕುರಿತು ವಿವಿಧ ಡೇಟಾವನ್ನು ದಾಖಲಿಸುವ ಎಫ್‌ಡಿಆರ್(FDR) ಸಾಧನಗಳನ್ನು ಒಳಗೊಂಡಿರುತ್ತದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಸಿವಿಆರ್ ಮತ್ತು ಎಫ್‌ಡಿಆರ್ ಸಾಧನಗಳನ್ನು ಒಂದೇ ಸಂರಚನೆಯಲ್ಲಿ ಇರಿಸಬಹುದಾಗಿದ್ದು, ಬ್ಲ್ಯಾಕ್ ಬಾಕ್ಸ್ ಗಳ ಉತ್ಪಾದನಾ ವೆಚ್ಚವೂ ಕೂಡಾ ದುಬಾರಿಯಾಗಿರುತ್ತದೆ. ವಿಮಾನ ಅಪಘಾತಗಳ ನಿಖರವಾದ ಕಾರಣವನ್ನು ಕಂಡುಹಿಡಿಯಲು ನೆರವಾಗುವುದರ ಜೊತೆಗೆ ಭವಿಷ್ಯದಲ್ಲಿ ಆಗಾಬಹುದಾದ ತಪ್ಪುಗಳನ್ನು ಸರಿಪಡಿಸಿ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಬ್ಲ್ಯಾಕ್ ಬಾಕ್ಸ್‌ಗಳ ಅಳವಡಿಕೆಯ ಆರಂಭ ದಿನಗಳಲ್ಲಿ ಮ್ಯಾಗ್ನೆಟಿಕ್ ಟೇಪ್ ಮೂಲಕ ಪೈಲಟ್‌ಗಳ ಸಂಭಾಷಣೆಗಳನ್ನು ಮತ್ತು ಹಾರಾಟದ ಮಾಹಿತಿಯನ್ನು ರೆಕಾರ್ಡ್ ಮಾಡಲಾಗುತ್ತಿತ್ತು. ಆದಾಗ್ಯೂ ತಂತ್ರಜ್ಞಾನದ ತ್ವರಿತ ಅಭಿವೃದ್ಧಿಯಿಂದಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲಾಗುತ್ತಿದ್ದು, ಮಾಹಿತಿ ಸಂಗ್ರಹಿಸುವ ಚಿಪ್‌ಗಳನ್ನು ಉತ್ಕೃಷ್ಟ ಗುಣಮಟ್ಟದ ಸ್ಟೇನ್‌ಲೇಸ್ ಸ್ಟೀಲ್ ಕವಚದೊಂದಿಗೆ ಭದ್ರವಾಗಿ ಜೋಡಣೆ ಮಾಡಲಾಗಿರುತ್ತದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಬ್ಲ್ಯಾಕ್ ಬಾಕ್ಸ್ ಮೂಲಕ ಪೈಲಟ್‌ನ ಕೊನೆಯ ಎರಡು ಗಂಟೆಗಳ ಸಂಭಾಷಣೆಗಳನ್ನು ಸಿವಿಆರ್ ರೆಕಾರ್ಡ್ ಮಾಡಿದರೆ ಎಫ್‌ಡಿಆರ್ ಸಾಧನವು ವಿಮಾನದ ಕೊನೆಯ 25 ಗಂಟೆಗಳ ಹಾರಾಟದ ಡೇಟಾವನ್ನು ದಾಖಲಿಸಲಾಗುತ್ತದೆ. ಎಫ್‌ಡಿಆರ್ ಮೂಲಕ ವಿಮಾನದ ದಿಕ್ಕು, ವೇಗ, ಇಂಧನ ಮಟ್ಟ ಮತ್ತು ಎತ್ತರ ಸೇರಿದಂತೆ ಹಲವು ಮಾಹಿತಿಗಳು ನಿಖರವಾಗಿ ಲಭ್ಯವಾಗುತ್ತವೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಡೇಟಾ ಸಂಗ್ರಹಣೆಯನ್ನು ಉನ್ನತೀಕರಿಸುವ ಸಂಬಂಧ 2008ರಿಂದ ರೆಕಾರ್ಡ್ 91 ಸಾಧನವನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದರಲ್ಲಿ ಗರಿಷ್ಠ 1,000 ರೀತಿಯ ಡೇಟಾಗಳನ್ನು ದಾಖಲಿಸಬಹುದಾಗಿದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಮತ್ತೊಂದು ಗಮನಿಸಬೇಕಾದ ಸಂಗತಿಯೆಂದೆರೆ ಬ್ಲ್ಯಾಕ್ ಬಾಕ್ಸ್ ಸಾಧನದಲ್ಲಿರುವ ಬ್ಯಾಟರಿಯು ಕೇವಲ 30 ದಿನಗಳವರೆಗೆ ಮಾತ್ರ ಸಕ್ರಿಯವಾಗಿರಲಿದ್ದು, ಘಟನೆಯ ನಂತರ ಬ್ಲ್ಯಾಕ್ ಬಾಕ್ಸ್ ಅನ್ನು ತುರ್ತಾಗಿ ಪತ್ತೆ ಕಾರ್ಯ ಪ್ರಮುಖವಾಗಿರುತ್ತದೆ. ಹೀಗಾಗಿ ನಿಗದಿತ ಸಮಯದಲ್ಲಿ ಪತ್ತೆ ಮಾಡದಿದ್ದರೆ ಕಪ್ಪು ಪೆಟ್ಟಿಗೆಯನ್ನು ಹಿಂಪಡೆಯುವುದು ತೊಂದರೆಯಾಗಬಹುದಾಗಿದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಭೂ ಮೇಲ್ಮೈ ನಡೆಯುವ ವಿಮಾನ ಅಪಘಾತಗಳಲ್ಲಿನ ಬ್ಲ್ಯಾಕ್ ಬಾಕ್ಸ್ ಪತ್ತೆ ಕಾರ್ಯಕ್ಕಿಂತಲೂ ಸಮುದ್ರಗಳಲ್ಲಿ ಘಟಿಸುವ ದುರಂತಗಳಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆ ಕಾರ್ಯವು ಸಾಕಷ್ಟು ಹರಸಾಹಸವಾಗಿರುತ್ತದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಅದಕ್ಕಾಗಿಯೇ ಪತ್ತೆಕಾರ್ಯಕ್ಕಾಗಿ ಬ್ಲ್ಯಾಕ್ ಬಾಕ್ಸ್‌ನಲ್ಲಿ ವಿಶೇಷ ಚಿಪ್ ಅಳವಡಿಕೆ ಕೂಡಾ ಮಾಡಲಾಗಿದ್ದು, 30 ದಿನಗಳವರೆಗೆ ಮಾತ್ರ ಸಕ್ರಿಯವಾಗಿರುವುದರಿಂದ ತುರ್ತಾಗಿ ಪತ್ತೆ ಮಾಡಬೇಕಾಗುತ್ತದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದ ರೆಕ್ಕೆಗಳಲ್ಲಿ ಜೋಡಣೆ ಮಾಡಲಾಗಿರುತ್ತದೆ. ವಿಮಾನಗಳು ಆಕಸ್ಮಿಕವಾಗಿ ಅಪ್ಪಳಿಸಿದಾಗ ಮುಂಭಾಗವು ಹೆಚ್ಚು ಹಾನಿಗೊಳಗಾಗುವ ಸಾಧ್ಯತೆಯಿರುವುದರಿಂದ ಬ್ಲ್ಯಾಕ್ ಬಾಕ್ಸ್ ರಕ್ಷಣೆಗಾಗಿ ಹೊರಭಾಗದಲ್ಲಿ ಜೋಡಣೆ ಮಾಡಲಾಗಿರುತ್ತದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಇದು ಸರಿಸುಮಾರು1,100 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶ ಮತ್ತು 5,000 ಪೌಂಡ್ ಒತ್ತಡವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು, ಸಮುದ್ರ ಮಟ್ಟಕ್ಕಿಂತ 20,000 ಅಡಿ ಆಳದಲ್ಲಿ ನೀರಿನ ಒತ್ತಡವನ್ನು ಸಹ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಪತ್ತೆ ಕಾರ್ಯಕ್ಕೆ ಸಹಕಾರಿಯಾಗುವ ಉದ್ದೇಶದಿಂದ ವಿಮಾನಕ್ಕೆ ಅಳವಡಿಸಲಾಗಿರುವ ಬ್ಲ್ಯಾಕ್ ಬಾಕ್ಸ್ ಸಾಧನವನ್ನು ಇಂಟರ್ ನ್ಯಾಷನಲ್ ಆರೆಂಜ್ ಎಂಬ ವಿಶೇಷ ಬಣ್ಣವನ್ನು ನೀಡಲಾಗಿರುತ್ತದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಆದರೆ ವಿಮಾನ ಅಪಘಾತಗಳಲ್ಲಿ ಬ್ಲ್ಯಾಕ್ ಬಾಕ್ಸ್ ಪ್ರಮುಖವಾದುದಾದರೂ ಕೆಲವು ದೊಡ್ಡ ಅಪಘಾತಗಳಲ್ಲಿ ಇದು ಪತ್ತೆಯಾಗಿಲ್ಲ. ಅಮೆರಿಕದಲ್ಲಿ ನಡೆದ ಅವಳಿ ಗೋಪುರ ದಾಳಿ ವೇಳೆಯೂ ಎರಡು ವಿಮಾನಗಳ ಕಪ್ಪು ಪೆಟ್ಟಿಗೆ ಪತ್ತೆಯಾಗಿರಲಿಲ್ಲ. ಆದರೂ ಈ ಹಿಂದಿನ ಕೆಲವು ಪ್ರಮುಖ ಘಟನೆಗಳಲ್ಲಿನ ಬ್ಲ್ಯಾಕ್ ಬಾಕ್ಸ್ ಮಾಹಿತಿಗಳು ಭವಿಷ್ಯದಲ್ಲಿನ ದುರಂತಗಳನ್ನು ತಡೆಯಲು ಸಾಕಷ್ಟು ಸಹಕಾರಿಯಾಗಿವೆ ಎನ್ನುವುದು ಪ್ರಮುಖ ವಿಚಾರವಾಗಿದೆ.

 'ಬ್ಲ್ಯಾಕ್ ಬಾಕ್ಸ್' ಕಾರ್ಯನಿರ್ವಹಣೆಯ ರೋಚಕ ಸಂಗತಿಗಳಿವು!

ಇನ್ನೊಂದು ಪ್ರಮುಖ ವಿಚಾರವೆಂದರೆ ಪೈಲಟ್‌ಗಳ ಸಂಭಾಷಣೆಗಳನ್ನು ಉಪಗ್ರಹಗಳ ಸಹಾಯದಿಂದ ರಿಯಲ್ ಟೈಮ್(ನೈಜ-ಸಮಯ)ದ ನಿಯಂತ್ರಣ ಕೊಠಡಿಗಳಲ್ಲಿ ರೆಕಾರ್ಡ್ ಮಾಡುವ ಪ್ರಯತ್ನಗಳು ಕೂಡಾ ನಡೆಯುತ್ತಿದ್ದು, ವೆಚ್ಚದಾಯಕವಾಗಿ ಹೊಸ ತಂತ್ರಜ್ಞಾನವು ಭವಿಷ್ಯದಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
Read more on ವಿಮಾನ plane
English summary
What is a black box and how does it work important details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X