Just In
- 48 min ago
ಕೈಗೆಟುಕುವ ಬೆಲೆ, ಹಲವು ಫೀಚರ್ಸ್ಗಳೊಂದಿಗೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್ಗಳಿವು!
- 52 min ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್ಯುವಿ
- 1 hr ago
ಎಂಜಿ ಮೊದಲ ಕಮ್ಯೂನಿಟಿ ಇವಿ ಚಾರ್ಜರ್ ಆರಂಭ- 1 ಸಾವಿರ ನಿಲ್ದಾಣಗಳನ್ನು ಆರಂಭಿಸುವ ಗುರಿ..
- 2 hrs ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
Don't Miss!
- Movies
ಬಾಕ್ಸಾಫೀಸ್ ಉಳಿಸಿಕೊಳ್ಳಲು ಬಾಲಿವುಡ್ ಹರಸಾಹಸ: ಸಾಲು ಸಾಲು ಸಿನಿಮಾ ರಿಲೀಸ್!
- News
ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ
- Lifestyle
ಆರೋಗ್ಯಕರ ಮಗುವನ್ನು ಪಡೆಯಲು ಪುರುಷರಿಗೆ ಸರಿಯಾದ ವಯಸ್ಸು ಯಾವುದು?
- Education
NEET UG Exam 2022 : ನೀಟ್ ಮುಂದೂಡಿಕೆಗೆ ಒತ್ತಾಯ !...ಪರೀಕ್ಷೆಯ ಸಂಪೂರ್ಣ ವಿವರ
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Sports
Ind vs Eng: ರೋಹಿತ್ ಶರ್ಮಾಗೆ ಕೊರೊನಾ; ಇಂಗ್ಲೆಂಡ್ಗೆ ಹಾರಿದ ಕರ್ನಾಟಕ ಆಟಗಾರ
- Finance
ಜಿಎಸ್ಟಿ ಕೌನ್ಸಿಲ್ ಸಭೆ: ಟಾಪ್ ಅಜೆಂಡಾ ಏನಿದೆ?
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ವಿಮಾನದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ನೀಡುವ ಮುನ್ಸೂಚನೆಗಳ ಹಿಂದಿನ ಕಾರಣಗಳಿವು!
ದೂರದ ಪ್ರಯಾಣಗಳನ್ನು ಕಡಿಮೆ ಸಮಯದಲ್ಲಿ ಮುಗಿಸಲು ಬಹುತೇಕ ಮಂದಿ ವಿಮಾನಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ಚತಾರೆ. ರಸ್ತೆ ಸಾರಿಗೆಗೆ ಹೋಲಿಸಿಕೊಂಡರೆ ಪ್ರಯಾಣದ ವೆಚ್ಚ ವಿಮಾನಗಳಲ್ಲಿ ಹೆಚ್ಚಾಗಿದ್ದರೂ ಸಮಯದ ಅಭಾವವಿದ್ದವರು ವಿಮಾನಗಳ ಮೊರೆ ಹೋಗುತ್ತಾರೆ.

ರೈಲು, ಬಸ್, ಕಾರು, ಮತ್ತಿತರ ವಾಹನಗಳಲ್ಲಿ ಸುಮಾರು 15-16 ಘಂಟೆಗಳು ಸಾಗುವ ಪ್ರಯಾಣವನ್ನು ವಿಮಾನವು ಕೇವಲ 1 ಗಂಟೆಯಲ್ಲಿ ಮುಗಿಸುತ್ತದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದೆ. ಇಂತಹ ವಿಮಾನಗಳಲ್ಲಿ ನಮಗೆ ತಿಳಿಯದ ಹಲವಾರು ನಿಯಮಗಳು ಇರುತ್ತವೆ.

ಮುಖ್ಯವಾಗಿ ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವಾಗ ನಾವು ತುಂಬಾ ಜಾಗರೂಕರಾಗಿರಬೇಕು. ಇದು ವಿಮಾನ ಅಪಘಾತಗಳ ಸಾಧ್ಯತೆ ಹೆಚ್ಚಿರುವ ಸಮಯ. ಹಾಗಾಗಿ ಪ್ರತಿಯೊಬ್ಬರ ಸುರಕ್ಷತೆಯನ್ನು ಪರಿಗಣಿಸಿ ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವಾಗ ವಿವಿಧ ನಿಯಮಗಳನ್ನು ಅನುಸರಿಸಲಾಗುತ್ತದೆ.

ಈಗ ನಾವು ಹೇಳಲು ಹೊರಟಿರುವ ಕೆಲವು ನಿಯಮಗಳು ತುಂಬಾ ಸಾಮಾನ್ಯ ವಿಷಯವೆಂದು ಅನಿಸಬಹುದು. ಆದರೆ ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ಮಾಡಲಾಗಿದೆ. ಇದರಲ್ಲಿ ಮುಖ್ಯವಾದದ್ದು ಟೇಕ್ ಆಫ್ ಮತ್ತು ಲ್ಯಾಂಡಿಗ್ ಸಮಯದಲ್ಲಿ ಆಸನಗಳ ಆರ್ಮ್‌ರೆಸ್ಟ್‌ಗಳನ್ನು ಕೆಳಗೆ ಇಳಿಸುವುದು. ಇದು ಪ್ರತಿಯೊಂದು ವಿಮಾನಗಳಲ್ಲೂ ಕಡ್ಡಾಯವಾಗಿ ಆಚರಿಸಬೇಕಾದ ನಿಯಮ.

ವಿಮಾನವು ಟೇಕ್ ಆಫ್ ಮತ್ತು ಲ್ಯಾಂಡ್ ಆಗುವಾಗ, ಆಸನಗಳ ಆರ್ಮ್‌ರೆಸ್ಟ್‌ಗಳನ್ನು ಕೆಳಕ್ಕೆ ಇಳಿಸಬೇಕು. ಇದು ವಿಮಾನಯಾನ ಸಂಸ್ಥೆಗಳು ಅನುಸರಿಸುವ ಸುರಕ್ಷತಾ ನಿಯಮವಾಗಿದೆ. ಎಲ್ಲರ ಸುರಕ್ಷತೆಗಾಗಿ, ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಪ್ರಯಾಣಿಕರು ತಮ್ಮ ಆರ್ಮ್‌ರೆಸ್ಟ್‌ಗಳನ್ನು ಕೆಳಕ್ಕೆ ಇಳಿಸಲು ಸಲಹೆ ನೀಡಲಾಗುತ್ತದೆ.

ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಆರ್ಮ್‌ರೆಸ್ಟ್‌ಗಳನ್ನು ಕೆಳಗೆ ಇಳಿಸಲು ಫ್ಲೈಟ್ ಅಟೆಂಡೆಂಟ್‌ಗಳಿಗೆ ಸಲಹೆ ನೀಡಲಾಗುತ್ತದೆ, ಏಕೆಂದರೆ ಅವರು ತುರ್ತು ನಿಲುಗಡೆಯ ಸಂದರ್ಭದಲ್ಲಿ ಗಂಭೀರವಾದ ಗಾಯಗಳಾಗಬಹುದೆಂಬ ಮುಂಜಾಗೃತೆಯಿಂದ ಹಾರಾಟದ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಇದರಿಂದಾಗಿ ಪ್ರತಿಯೊಂದು ಸಣ್ಣ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನವನ್ನು ಹಠಾತ್ತನೆ ನಿಲ್ಲಿಸಿದರೆ, ಎತ್ತರದ ಆರ್ಮ್ ರೆಸ್ಟ್ ಕೆಳಗೆ ಬಂದು ಗಂಭೀರವಾದ ಗಾಯಗಳನ್ನು ಉಂಟುಮಾಡುವ ಸಾಧ್ಯತೆಗಳು ತುಂಬಾ ಹೆಚ್ಚು.

ಹಾಗಾಗಿ ಇಂತಹ ಸನ್ನಿವೇಶಗಳಿದ್ದಾಗ ಮೊದಲೇ ಆರ್ಮ್‌ರೆಸ್ಟ್‌ಗಳನ್ನು ಕೆಳಗೆ ಇಳಿಸಿದರೆ, ಪ್ರಯಾಣಿಕರಿಗೆ ಗಾಯಗಳು ಆಗುವ ಸಾಧ್ಯತೆಗಳು ತುಂಬಾ ಕಡಿಮೆ. ವಾಯುಯಾನ ತಜ್ಞರ ಪ್ರಕಾರ, ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನಗಳು ಸಾಮಾನ್ಯವಾಗಿ 250-287 ಕಿ.ಮೀ. ವೇಗದಲ್ಲಿರುತ್ತವೆ.

ಅಂತಹ ಹೆಚ್ಚಿನ ವೇಗದಲ್ಲಿ ವಿಮಾನವು ಹಠಾತ್ ನಿಲುಗಡೆ ಅಥವಾ ಮೇಲಕ್ಕೆ ಹಾರುವ ಸಂದರ್ಭದಲ್ಲಿ ಆರ್ಮ್‌ರೆಸ್ಟ್‌ಗಳು ಪ್ರಯಾಣಿಕರಿಗೆ ವಿರುದ್ಧವಾಗಿ ಅಪ್ಪಳಿಸುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ, ಆರ್ಮ್‌ರೆಸ್ಟ್‌ಗಳನ್ನು ಕೆಳಕ್ಕೆ ಇಳಿಸಲು ಸೂಚಿಸಲಾಗುತ್ತದೆ.

ಅಂತೆಯೇ, ವಿಮಾನವು ಟೇಕ್ ಆಫ್ ಮತ್ತು ಲ್ಯಾಂಡ್ ಆಗುವ ಸಮಯದಲ್ಲಿ ಪ್ರಯಾಣಿಕರಿಗೆ ಕಿಟಕಿಯನ್ನು ತೆರೆದಿಡಲು ಸಲಹೆ ನೀಡಲಾಗುತ್ತದೆ. ನಾವು ಈಗಾಗಲೇ ಹೇಳಿದಂತೆ ಈ ನಿಯಮವು ಕೇಳಲು ಸಾಮಾನ್ಯವೆಂದೆನಿಸಬಹುದು. ಆದರೆ ಈ ನಿಯಮದ ಹಿಂದೆ ಕೆಲವು ಪ್ರಮುಖ ಭದ್ರತಾ ಕಾರಣಗಳಿವೆ.

ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಯಾವುದೇ ಅನಾಹುತ ಸಂಭವಿಸಿದಲ್ಲಿ, ಕಿಟಕಿಗಳು ತೆರೆದಿದ್ದರೆ ಮಾತ್ರ ಫ್ಲೈಟ್ ಅಟೆಂಡೆಂಟ್‌ಗಳು ತಕ್ಷಣವೇ ಹೊರಗಿನ ಪರಿಸರವನ್ನು ನೋಡಲು ಸಾಧ್ಯವಾಗುತ್ತದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಫ್ಲೈಟ್ ಅಟೆಂಡೆಂಟ್‌ಗಳ ಯೋಜನೆಗೆ ಸಹಾಯ ಮಾಡುತ್ತದೆ.

ಆದ್ದರಿಂದ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಫ್ಲೈಟ್ ಅಟೆಂಡೆಂಟ್‌ಗಳು ನೀಡುವ ಎಲ್ಲಾ ಸೂಚನೆಗಳ ಹಿಂದೆ ಸುರಕ್ಷತಾ ಕಾರಣಗಳು ಇರುತ್ತವೆ. ಅವುಗಳನ್ನು ಬಹಳ ಕ್ಷುಲ್ಲಕ ವಿಷಯವೆಂದು ನಿರ್ಲಕ್ಷಿಸಬಾರದು. ವಿಮಾನದಲ್ಲಿ ಹಠಾತ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರತಿ ಸೆಕೆಂಡ್ ಮುಖ್ಯವಾಗಿರುತ್ತದೆ. ಪ್ರತಿಯೊಂದು ಸಣ್ಣ ವಿಷಯವೂ ಮುಖ್ಯವಾಗಿರುತ್ತದೆ ಎಂಬುದನ್ನು ಮರೆಯಬಾರದು.