Just In
Don't Miss!
- News
Breaking; ತೈಲ ಕೊರತೆ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ
- Sports
ಕಿವೀಸ್ ವಿರುದ್ಧ ಸರಣಿ ಗೆದ್ದು ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಸಾಮಾನ್ಯರು ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಈ ಕಾರಣಗಳಿಂದ ಮಾತ್ರ ಸಾಧ್ಯ!
ವಿಮಾನದಲ್ಲಿ ಪ್ರಯಾಣಿಸಬೇಕೆಂಬುದು ಮಧ್ಯಮ ಹಾಗೂ ಬಡ ವರ್ಗದ ಅದೆಷ್ಟೋ ಮಂದಿಯ ಬಹುದೊಡ್ಡ ಕನಸಾಗಿರುತ್ತದೆ. ಇದಕ್ಕಾಗಿಯೇ ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ವಿಮಾನ ಪ್ರಯಾಣದ ದರ ಇಳಿಕೆ ಮಾಡಿ ಎಲ್ಲರೂ ಪ್ರಯಾಣಿಸಲು ಅನುವು ಮಾಡಿಕೊಟ್ಟಿದೆ. ಆದರೆ ಕೆಲವೊಮ್ಮೆ ಪ್ಯಾಸೆಂಜರ್ ವಿಮಾನಗಳಲ್ಲಿ ಒಬ್ಬನೇ ಪ್ರಯಾಣಿಕನಿದ್ದರೂ ವಿಮಾನಯಾನ ಸಂಸ್ಥೆಗಳು ಹಾರಾಟ ನಡೆಸುತ್ತವೆ.

ಇದರಿಂದ ವಿಮಾನಯಾನ ಸಂಸ್ಥೆಗಳಿಗೆ ನಷ್ಟ ಉಂಟಾಗುವುದಿಲ್ಲವೇ? ಎಂಬುದು ಹಲವರ ಪ್ರಶ್ನೆ. ಸಾಮಾನ್ಯವಾಗಿ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಅದೃಷ್ಟ ಕೆಲವೇ ಜನರಿಗೆ ಮಾತ್ರ ಸಿಗುತ್ತಿರುತ್ತದೆ. ಅದರಲ್ಲೂ ದುಡ್ಡಿದ್ದವರು ಮಾತ್ರ ಪ್ಯಾಸೆಂಜರ್ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಾರೆ ಎಂಬುವುದು ತಪ್ಪು ಕಲ್ಪನೆ.

ಟಿಕೆಟ್ ಬುಕ್ ಮಾಡಿದ ಮೇಲೆ ಸಾಮಾನ್ಯರು ಕೂಡಾ ಏಕಾಂಗಿಯಾಗಿ ಪ್ರಯಾಣಿಸಬಹುದು. ಅದು ಹೇಗೆ ಎಂದರೆ, ನೀವು ಬುಕ್ ಮಾಡಿದ ವಿಮಾನಕ್ಕೆ ಅದೇ ಸಮಯಕ್ಕೆ ಬೇರೆಯವರು ಬುಕ್ ಮಾಡದಿದ್ದಾಗ ಇಂತಹ ಅದೃಷ್ಟ ಸಿಗಬಹುದು. ಆದರೆ ಇಂತಹ ಸಂದರ್ಭಗಳಲ್ಲಿ ಮಧ್ಯಮ ವರ್ಗದ ಜನರು ಅನುಭವವಿಲ್ಲದೆ ಪ್ರಯಾಣಿಸುವಾಗ ಗಾಬರಿಯಾಗುತ್ತಾರೆ.

ಇದೇ ಕಾರಣಕ್ಕೆ ಹಲವರು ಪ್ರಯಾಣಿಸದೇ ಟಿಕೆಟ್ ರದ್ದು ಮಾಡುತ್ತಾರೆ. ಆದರೆ ಅನುಭವವಿದ್ದವರು ಏಕಾಂಗಿಯಾಗಿ ಪ್ರಯಾಣಿಸುತ್ತಾರೆ. ಇದರರ್ಥ ಮಧ್ಯಮ ವರ್ಗದ ಜನರು ಏಕಾಂಗಿಯಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದಲ್ಲ. ಅದೃಷ್ಟ, ಅನುಭವ ಇದ್ದರೆ ಏಕಾಂಗಿಯಾಗಿ ಪ್ರಯಾಣಿಸಬಹುದು.

ಒಬ್ಬರ ಪ್ರಯಾಣದಿಂದ ಸಂಸ್ಥೆಗೆ ನಷ್ಟವಾಗುವುದಿಲ್ಲವೆ?ಈ ಹಿಂದೆಯೂ ಹಲವಾರು ಬಾರಿ ಇಂತಹ ಘಟನೆಗಳು ನಡೆದಿವೆ. ವಿಮಾನವನ್ನು ಒಬ್ಬರಿಗಾಗಿ ನಿರ್ವಹಿಸುವ ಬದಲು ಏಕೆ ರದ್ದುಗೊಳಿಸಬಾರದು? ಒಬ್ಬನೇ ಪ್ರಯಾಣಿಕರಿದ್ದರೂ ರದ್ದುಗೊಳಿಸದಿರಲು ಹಲವು ಕಾರಣಗಳಿವೆ.

ಕೇವಲ ಒಬ್ಬ ಪ್ರಯಾಣಿಕ ಇದ್ದರೂ ವಿಮಾನಗಳನ್ನು ನಿರ್ವಹಿಸಲು ಮೊದಲ ಮತ್ತು ಮುಖ್ಯ ಕಾರಣವೆಂದರೆ ವೇಳಾಪಟ್ಟಿ. ವಿಮಾನ ಎಲ್ಲಿಗೆ ಹಾರಬೇಕು ಎಂಬುದನ್ನು ಕೆಲವು ತಿಂಗಳ ಮುಂಚಿತವಾಗಿಯೇ ನಿಗದಿ ಮಾಡಿ ವೇಳಾಪಟ್ಟಿಯನ್ನ ಸಿದ್ದಪಡಿಸಿರುತ್ತಾರೆ. ಕೆಲವೊಮ್ಮೆ ಒಂದು ವರ್ಷದ ಮುಂಚಿತವಾಗಿಯೇ ಎಲ್ಲಿಗೆ ಹೋಗಬೇಕು ಎಂಬದನ್ನು ನಿಗದಿಪಡಿಸಿರುತ್ತಾರೆ.

ಈ ವೇಳಾಪಟ್ಟಿಯನ್ನು ಅನುಸರಿಸಲು ವಿಫಲವಾದರೆ ವಿವಿಧ ಗೊಂದಲಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಈ ವೇಳಾಪಟ್ಟಿಯ ಪ್ರಕಾರ, ಪ್ರತಿ ವಿಮಾನವು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿರಬೇಕು. ಹಾಗಾಗಿ ಒಬ್ಬನೇ ಪ್ರಯಾಣಿಕನಿದ್ದಾನೆ ಎಂಬ ಕಾರಣಕ್ಕೆ ವಿಮಾನವನ್ನು ರದ್ದು ಮಾಡಲು ಸಾಧ್ಯವಿಲ್ಲ.

ಸಾಮಾನ್ಯವಾಗಿ ವಿಮಾನಗಳು ಎರಡು ನಿರ್ದಿಷ್ಟ ವಿಮಾನ ನಿಲ್ದಾಣಗಳ ನಡುವೆ ಪ್ರಯಾಣಿಸುವುದಿಲ್ಲ. ಬದಲಾಗಿ ವಿವಿಧ ಮಾರ್ಗಗಳಲ್ಲಿ, ವಿವಿಧ ವಿಮಾನ ನಿಲ್ದಾಣಗಳಿಗೆ ಬಂದು ಅಲ್ಲಿ ಕಾಯ್ದಿರಿಸಿರುವ ಪ್ರಯಾಣಿಕರನ್ನು ಪಿಕ್ಅಪ್ ಮಾಡಿಕೊಳ್ಳುತ್ತದೆ. ಒಂದು ವಿಮಾನ ನಿಲ್ದಾಣದಲ್ಲಿ ಒಬ್ಬನೇ ಪ್ರಯಾಣಿಕನಿದ್ದರೂ ಮುಂಬರುವ ನಿಲ್ದಾಣದಲ್ಲಿ ಬಹಳಷ್ಟು ಪ್ರಯಾಣಿಕರನ್ನು ಕಾಯ್ದಿರಿಸಿರಬಹುದು.

ಒಬ್ಬನೇ ಪ್ರಯಾಣಿಕನಿದ್ದರೂ ವಿಮಾನಗಳನ್ನು ನಿರ್ವಹಿಸಲು ಮತ್ತೊಂದು ಕಾರಣವೆಂದರೆ ಸರಕು ಸಾಗಾಟ. ಹೌದು, ವಿಮಾನಗಳು ಪ್ರಯಾಣಿಕರೊಂದಿಗೆ ಸರಕುಗಳನ್ನು ಸಾಗಿಸುತ್ತವೆ. ಆದ್ದರಿಂದ ಒಬ್ಬನೇ ಪ್ರಯಾಣಿಕರಿದ್ದರೂ, ಸರಕು ಸಂಪೂರ್ಣವಾಗಿ ಲೋಡ್ ಆಗಿರುತ್ತದೆ. ಸರಕಗಳಿಂದಲೂ ವಿಮಾನಯಾನ ಸಂಸ್ಥೆಗಳು ಹೆಚ್ಚು ಆದಾಯವನ್ನು ಗಳಿಸುತ್ತವೆ.

ಈ ಸರಕುಗಳನ್ನು ಸಮಯಕ್ಕೆ ಸರಿಯಾಗಿ ಸಾಗಿಸಿ ಸಾಗಿಸಬೇಕಾದ್ದರಿಂದ ಒಬ್ಬರಿದ್ದರೂ ಪ್ರಯಾಣ ನಿಲ್ಲುವುದಿಲ್ಲ. ವಿಮಾನವನ್ನು ನಿರ್ವಹಿಸುವ ವೆಚ್ಚವನ್ನು ಸರಕುಗಳಿಂದ ಬರುವ ಆದಾಯದ ಮೂಲಕ ವಿಮಾನಯಾನ ಸಂಸ್ಥೆಗಳು ಸರಿದೂಗಿಸುತ್ತವೆ.

ಮತ್ತೊಂದು ಪ್ರಮುಖಬ ಕಾರಣವೆಂದರೆ, ಕಾನೂನು. ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ, ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ನಿರ್ವಹಿಸುವ ಕರ್ತವ್ಯವನ್ನು ಹೊಂದಿರುತ್ತವೆ. ಇಲ್ಲದಿದ್ದಲ್ಲಿ ಸಂಸ್ಥೆಗಳು ಸರ್ಕಾರದ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿದ್ದರೆ, ಈ ನಿಯಂತ್ರಣದಲ್ಲಿ ವಿನಾಯಿತಿ ನೀಡಲಾಗುವುದು.

ಅಂದರೆ ಹವಾಮಾನ ವೈಪರಿತ್ಯ ಅಥವಾ ಯಾಂತ್ರಿಕ ವೈಫಲ್ಯಗಳಂತಹ ಅನಿವಾರ್ಯ ಕಾರಣಗಳಿದ್ದರೆ, ವಿಮಾನಯಾನ ಸಂಸ್ಥೆಗಳು ವಿನಾಯಿತಿ ಪಡೆಯುತ್ತವೆ. ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಹಳ ವಿಶೇಷ ಅನುಭವ ಇರುತ್ತದೆ. ಕಡಿಮೆ ವೆಚ್ಚದಲ್ಲಿ ವಿಮಾನದಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸುತ್ತಾರೆ. ಆದರೆ ಎಲ್ಲರಿಗೂ ಈ ಅದೃಷ್ಟ ಸಿಗುವುದು ವಿರಳ.