Just In
- 30 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 2 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Sports
ಐಪಿಎಲ್ : ಈ ದಾಖಲೆ ಮಾಡಿದ್ದು ಕೊಹ್ಲಿ ಬಿಟ್ರೆ ಸಂಜು ಸ್ಯಾಮ್ಸನ್
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಿಬೆಟ್ ಮಾರ್ಗವಾಗಿ ವಿಮಾನಗಳ ಹಾರಾಟವನ್ನು ನಿಷೇಧ ಮಾಡಿರುವುದು ಏಕೆ ಗೊತ್ತಾ?
ಆಧುನಿಕ ಜಗತ್ತಿನ ವಿಮಾನಯಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇತರೆ ಸಂಚಾರ ವಾಹಕಗಳನ್ನು ಹೋಲಿಸಿದಾಗ ವಿಮಾನಯಾನ ಹೆಚ್ಚು ಸುರಕ್ಷಿತವೆನಿಸಿಕೊಂಡಿದ್ದು, ಕೆಲವೇ ಗಂಟೆಯೊಳಗೆ ಸಾವಿರಾರು ಕೀ.ಮೀ. ದೂರವನ್ನು ಕ್ರಮಿಸಬಹುದಾಗಿದೆ. ಆದ್ರೆ ಹಲವು ಅಚ್ಚರಿಗಳಿಗೆ ಕಾರಣವಾಗಿರುವ ವಿಮಾನಯಾನದ ಬಗ್ಗೆ ನಾವಿಂದು ಕೆಲವು ಅಚ್ಚರಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ.

ವಿಮಾನಯಾನದ ಬಗ್ಗೆ ಸಾಕಷ್ಟು ಕಟ್ಟುಕಥೆಗಳು ಅಲೆದಾಡುತ್ತಲೇ ಇರುತ್ತವೆ. ಈ ಸಂಬಂಧ ನೀವು ಅರಿತುಕೊಳ್ಳಬೇಕಾದ ಕೆಲವೊಂದು ಸ್ವಾರಸ್ಯಕರ ಸಂಗತಿಗಳಲ್ಲಿ ಟೆಬೆಟ್ ಮಾರ್ಗವಾಗಿ ವಿಮಾನಗಳ ಏಕೆ ಹಾರಾಟ ನಡೆಸುವುದಿಲ್ಲ ಎಂಬುವುದು ಅನೇಕರಿಗೆ ಗೊತ್ತಿಲ್ಲ.

ಬಹುಶಃ ಬರ್ಮುಡಾ ಟ್ರಯಾಂಗಲ್ ಹೊರತುಪಡಿಸಿ ಜಗತ್ತಿನ ಎಲ್ಲಾ ಪ್ರದೇಶಗಳ ಮಾರ್ಗವಾಗಿಯು ವಿಮಾನಗಳು ಹಾರಾಟ ನಡೆಸುತ್ತವೆ ಎಂದು ತಿಳಿದಿರುವ ನಮೆಗೆಲ್ಲಾ ಅದೇ ರೀತಿ ವಿಮಾನಗಳು ಟೆಬೆಟ್ ಮಾರ್ಗವಾಗಿಯೂ ಕೂಡಾ ಹಾರಾಟ ನಡೆಸುವುದಿಲ್ಲ ಎಂಬ ಅಚ್ಚರಿ ಕೂಡಾ ಹೊಸದಲ್ಲ.

ಚೀನಾದಿಂದ ಪ್ರತ್ಯೇಕವಾಗಿ ಸ್ವತಂತ್ರವಾಗಿ ರೂಪಗೊಂಡಿರುವ ಟೆಬೆಟ್ ಮಾರ್ಗವಾಗಿ ಇದುವರೆಗೂ ಯಾವುದೇ ರೀತಿಯ ವಿಮಾನಗಳು ಹಾರಾಟ ನಡೆಸುವ ಹುಚ್ಚು ಸಾಹಸಕ್ಕೆ ಕೈ ಹಾಕಿಲ್ಲ.

ಇದಕ್ಕೆ ಕಾರಣ 'ರೂಫ್ ಆಪ್ ದಿ ವರ್ಲ್ಡ್' ಎಂದೇ ಖ್ಯಾತಿಯಾಗಿರುವ ಟೆಬೆಟ್ ಮಾರ್ಗದಲ್ಲಿ ವಿಮಾನಗಳ ಸುರಕ್ಷಿತ ಚಾಲನೆ ಅಷ್ಟು ಸುಲಭವಲ್ಲ. 5 ಕಿಮಿ ಗಿಂತಲೂ ಹೆಚ್ಚು ಎತ್ತರವಾಗಿರುವ ಹಿಮಾಲಯ ಪರ್ವತಗಳ ಶ್ರೇಣಿಯು ವಿಮಾನ ಹಾರಾಟಕ್ಕೆ ಅಷ್ಟು ಅನುಕೂಲರವಾಗಿಲ್ಲ.

ಒಂದು ವೇಳೆ ಟೆಬೆಟ್ ಮಾರ್ಗವಾಗಿ ವಿಮಾನ ಹಾರಾಟ ನಡೆಸಿದ್ದೇ ಆದಲ್ಲಿ ಹುಲಿ ಬಾಯಿಯಿಂದ ತಪ್ಪಿಸಿಕೊಂಡು ಬಂದಷ್ಟೇ ಹತ್ತಾರು ಸವಾಲುಗಳಿದ್ದು, ಸುರಕ್ಷಿತ ವಿಮಾನಯಾನ ಕೈಗೊಳ್ಳುವುದು ಸುಲಭದ ಮಾತಲ್ಲ.

ಅಲ್ಲದೇ ವಿಮಾನ ಹಾರಾಟ ನಡೆಸಿದರು ಆರಂಭದಲ್ಲೇ ಹಲವು ಸವಾಲುಗಳಿದ್ದು, ಅದರಲ್ಲಿ ಪ್ರಮುಖವಾಗಿ ಆಕ್ಸಿಜನ್ ಕೊರತೆ ಸುರಕ್ಷಿತ ಪ್ರಯಾಣಕ್ಕೆ ಪೂರಕವಾಗಿಲ್ಲ. ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರಿಗೆ ಕೇವಲ 15ರಿಂದ 20 ನಿಮಿಷಗಳ ಕಾಲ ಮಾತ್ರ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಬಹುದಾಗಿದೆ.

15 ರಿಂದ 20 ನಿಮಿಷಗಳ ಕಾಲ ಹೊರತುಪಡಿಸಿ ಹೆಚ್ಚುವರಿ ಕೃತಕ ಆಕ್ಸಿಜನ್ ನೀಡಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಸಾಗಬೇಕಾದ ಟಿಬೆಟ್ ಪರ್ವತಗಳ ಪಯಣ ಯಶಸ್ವಿಯಾಗುವುದು ಕಷ್ಟದ ವಿಚಾರ.

ಇದೇ ಕಾರಣದಿಂದಲೇ ಟಿಬೆಟ್ ಮಾರ್ಗವಾಗಿ ಯಾವುದೇ ವಿಮಾನಗಳು ಕೂಡಾ ಹಾರಾಟ ನಡೆಸುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಜೊತೆಗೆ ವಿಮಾನಯಾನ ಸಂಸ್ಥೆಗಳಿಗೆ ಟಿಬೆಟ್ ಮಾರ್ಗವಾಗಿ ಪಯಣಿಸಲೇಬೇಕಾದ ಅನಿವಾರ್ಯತೆಗಳು ಕೂಡಾ ಇಲ್ಲ.
MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ವಿಮಾನಗಳಿಗೆ ಸಂಬಂಧಪಟ್ಟ 10 ಸ್ವಾರಸ್ಯಕರ ಸತ್ಯಗಳು..!
ಮೊಬೈಲ್ ಫೋನ್ ಬಳಕೆ ಹಾನಿಕಾರಕವೇ?
ವಿಮಾನ ಹಾರಾಟದ ವೇಳೆ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಲು ಗಗನಸಖಿಯರು ಸೂಚಿಸುತ್ತಾರೆ. ಅಷ್ಟಕ್ಕೂ ವಿಮಾನಗಳ ಹಾರಾಟದ ವೇಳೆ ಮೊಬೈಲ್ ಸಂಕೇತಗಳು ಸಮಸ್ಯೆಯನ್ನುಂಟು ಮಾಡುತ್ತದೆಯೇ ಎಂಬುದು ಆಸಕ್ತಿಯನ್ನು ಮೂಡಿಸುತ್ತದೆ. ಒಂದೆರಡು ಫೋನ್ ಗಳಿಂದಾಗಿ ತೊಂದರೆ ಕಾಡದು.

13ನೇ ಸಾಲಿಗೆ ಕತ್ತರಿ?
ವಿಜ್ಞಾನ ಎಷ್ಟೇ ಪ್ರಗತಿ ಸಾಧಿಸಿದರೂ ಮೂಢನಂಬಿಕೆಯಲ್ಲಿ ನಂಬಿಕೆಯನ್ನಿಡುವ ನಮ್ಮ ಸಮಾಜದಲ್ಲಿ ಅನೇಕ ಮಂದಿ 13ನೇ ಸಾಲು ಅಥವಾ ಸೀಟಿನಲ್ಲಿ ಪ್ರಯಾಣಿಸಲು ನಿರಾಕರಿಸುತ್ತಾರೆ. ಇದರಿಂದಾಗಿ ಬಹುತೇಕ ವಿಮಾನಗಳಲ್ಲಿ 13ನೇ ಸಾಲನ್ನು ಖಾಲಿ ಬಿಡಲಾಗುತ್ತದೆ. ಇನ್ನೊಂದೆಡೆ ಲುಂಫ್ತಾಸಾದಲ್ಲಿ 17ನೇ ಸಾಲಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಮಿಂಚು ಬಡಿದರೆ ವಿಮಾನ ಪತನವಾಗುವುದೇ?
ವರದಿಯೊಂದರ ಪ್ರಕಾರ ವರ್ಷವೊಂದರಲ್ಲಿ ವಾಣಿಜ್ಯ ವಿಮಾನಕ್ಕೆ ವರ್ಷದಲ್ಲಿ ಒಂದು ಬಾರಿಯಾದರೂ ಮಿಂಚಿನ ಆಘಾತ ಎದುರಾಗುತ್ತದೆ. ಆದರೆ ಮಿಂಚು ಬಡಿತದಿಂದ ವಿಮಾನ ಪತನವಾಗಲಿದೆ ಎಂಬುವುದು ತಪ್ಪಾದ ಕಲ್ಪನೆಯಾಗಿದೆ.

ಎಮರ್ಜನ್ಸಿ ಮಾಸ್ಕ್
ಎಮರ್ಜನ್ಸಿ ಮಾಸ್ಕ್ ಮುಖಾಂತರ ವಿಮಾನಗಳಲ್ಲಿ ಆಮ್ಲಜನಕ ಪೂರೈಕೆ ಮಾಡಲಾಗುತ್ತದೆ. ಪ್ರಯಾಣದ ವೇಳೆ ಉಸಿರಾಟದ ತೊಂದರೆ ಎದುರಾದ್ದಲ್ಲಿ ಇದರ ಸಹಾಯ ಪಡೆಯಬಹುದಾಗಿದೆ.

ಅವಘಡ ಸಾಧ್ಯತೆ
ವಿಮಾನಗಳು ಹಲವಾರು ಕಾರಣಗಳಿಂದಾಗಿ ಅವಘಡಕ್ಕೊಳಬಹುದಾಗಿದೆ. ಈ ಹಿನ್ನಲೆಯಲ್ಲಿ ಸುರಕ್ಷಿತವಾದ ಸೀಟುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇನ್ನು ತುರ್ತು ಪರಿಸ್ಥಿತಿಯಲ್ಲಿ ಪಾರಾಗಲು ಬಹಳ ಹತ್ತಿರದಲ್ಲಿ ಎಮರ್ಜನ್ಸಿ ಬಾಗಿಲುಗಳನ್ನು ಜೋಡಿಸಲಾಗಿದೆ.

ವಾಯು ವಲಯ
ವಿಮಾನದಲ್ಲಿ ಹೈ ಎಫಿಷಿಯನ್ಸಿ ಪಾರ್ಟಿಕಲ್ ಏರ್ ಫಿಲ್ಟರ್ಸ್ ವಲಯವನ್ನು ಲಗತ್ತಿಸಲಾಗಿದ್ದು, ಗಾಳಿಯನ್ನು ರಿಸೈಕಲ್ ಮಾಡಿ ಫಿಲ್ಟರ್ ಮಾಡಲಾಗುತ್ತದೆ. ತನ್ಮೂಲಕ ಶುದ್ಧ ವಾಯು ಉಸಿರಾಡುವಂತೆ ನೆರವಾಗುತ್ತದೆ.

ಬಿಡುವಿಲ್ಲದ ವಿಮಾನ ನಿಲ್ದಾಣ
ಜಗತ್ತಿನ ಅತಿ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಚಿಕಾಗೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿ 37 ಸೆಕೆಂಡುಗಳಿಗೊಂದು ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುತ್ತಿರುತ್ತದೆ.

ವಿಷಾಹಾರ
ವಿಷಾಹಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಪೈಲಟ್ ಮತ್ತು ಸಹ ಪೈಲಟ್ ಗಳಿಗೆ ವಿಭಿನ್ನವಾದ ಆಹಾರ ಕ್ರಮವನ್ನು ಅನುಸರಿಸಲಾಗುತ್ತದೆ.

ಲ್ಯಾಂಡಿಂಗ್
ರಾತ್ರಿ ವೇಳೆಯಲ್ಲಿ ವಿಮಾನ ಲ್ಯಾಂಡಿಂಗ್ ಆದಾಗ ಹೊರಗಡೆ ಕಗ್ಗತ್ತಲು ಆವರಿಸಿರುವುದರಿಂದ ನಿಮ್ಮ ಕಣ್ಣುಗಳು ಆಗಲೇ ಪರಿಸ್ಥಿತಿಗೆ ಹೊಂದಿಕೊಳ್ಳಲು ವಿಮಾನದೊಳಗೆ ಬೆಳಕನ್ನು ಮಂಕು ಮಾಡಲಾಗುತ್ತದೆ.

ನಿದ್ರೆ
ಮಗದೊಂದು ಬೆಚ್ಚಿ ಬೀಳಿಸುವ ಸತ್ಯ ಏನೆಂದರೆ ದೀರ್ಘ ದೂರದ ಯಾನದ ವೇಳೆಯಲ್ಲಿ ಇರ್ವರಲ್ಲಿ ಓರ್ವ ಪೈಲೆಟ್ ಗಾಢ ನಿದ್ರೆಗೆ ಜಾರುತ್ತಾರೆ. ಇಲ್ಲಿ ಇನ್ನಷ್ಟು ಆಸಕ್ತದಾಯಕ ವಿಚಾರ ಏನೆಂದರೆ, ಒಟ್ಟು ಸಂಚಾರ ಅವಧಿಯ ಮೂರನೇ ಒಂದರಷ್ಟು ಸಮಯದಲ್ಲಿ ಸಹ ಪೈಲಟ್ ಗಳು ನಿದ್ರೆಗೆ ಜಾರಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸುತ್ತಾರೆ.

ಎಂಜಿನ್ ವೈಫಲ್ಯ
ಎರಡೂ ಎಂಜಿನ್‌ಗಳು ವೈಫಲ್ಯದ ನಡುವೆಯೂ ವಿಮಾನಗಳು 5000 ಅಡಿ ಎತ್ತರದಲ್ಲೂ 6 ನಾಟಿಕಲ್ ಮೈಲು ದೂರವನ್ನು ಸಾಗವಷ್ಟು ಸಾಮರ್ಥ್ಯವನ್ನು ಪಡೆದಿರುತ್ತದೆ.