ಮಂಗಳೂರಿನಲ್ಲಿ ಐಕಾನಿಕ್ ವಿಲ್ಲೀಸ್ ಜೀಪ್‌ನಂತೆ ಮಾಡಿಫೈಗೊಂಡ ಮಹೀಂದ್ರಾ ಥಾರ್

ಮಹೀಂದ್ರಾ ಥಾರ್ ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಎರಡನೇ ಜನರೇಷನ್ ಮಹೀಂದ್ರಾ ಥಾರ್ ಬಹುಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಮಹೀಂದ್ರಾ ಥಾ ಬೇಡಿಕೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಇದರ ಕಾಯುವ ಅವಧಿಯು ಕೂಡ ಹೆಚ್ಚಾಗಿದೆ.

ಎರಡನೇ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಹಲವಾರು ಜನರು ಮಾಡಿಫೈಗೊಳಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ. ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಮಾಡಿಫೈಗೊಳಿಸಿದ ಹಲವಾರು ಚಿತ್ರಗಳನ್ನು ಮತ್ತು ವೀಡಿಯೊಗಳನು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಸಿಗುತ್ತದೆ. ಭಾರತದಲ್ಲಿ ಮಾಡಿಫೈಗೊಂಡ ಥಾರ್ ಎಸ್‍ಯುವಿಯ ಹಲವಾರು ಉದಾಹರಣೆಗಳಿವೆ. ಕೆಲವು ಗ್ರಾಹಕರು ವಾಹನದ ಒಟ್ಟು ವೆಚ್ಚಕ್ಕಿಂತ ಹೆಚ್ಚಿನ ಹಣವನ್ನು ಮಾಡಿಫೈಗೊಳಿಸಲು ಖರ್ಚು ಮಾಡುತ್ತಾರೆ.

ಮಂಗಳೂರಿನಲ್ಲಿ ಐಕಾನಿಕ್ ವಿಲ್ಲೀಸ್ ಜೀಪ್‌ನಂತೆ ಮಾಡಿಫೈಗೊಂಡ ಮಹೀಂದ್ರಾ ಥಾರ್

ಎರಡನೇ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ವಿಲ್ಲಿಸ್ ಜೀಪ್ ಆಗಿ ಮಾಡಿಫೈಗೊಳಿಸಿದ್ದಾರೆ. ಎರಡನೇ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಮಂಗಳೂರಿನ ಕೆಎಎಂ ಕಸ್ಟಮ್ಸ್ ಅವರು ಮಾಡಿಫೈಗೊಳಿಸಿದ್ದಾರೆ. ಮಾಡಿಪೈಗೊಂಡ ಎರಡನೇ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯ ಮೂಲ ಆವೃತ್ತಿಗಿಂತ ಅದರ ರೂಫ್ ಮತ್ತು ಇತರ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ, ಮಂಗಳೂರಿನ ಕೆಎಎಂ ಕಸ್ಟಮ್ಸ್ ಅವರು ಎರಡನೇ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಟಾಪ್ ಭಾಗವನ್ನು ತೆಗೆದು ಹಾಕಲಾಗಿದೆ.

ಅದರ ಮೇಲೆ ಕೆಎಎಂ ಕಸ್ಟಮ್ಸ್ ಎಸ್‍ಯುವಿಯನ್ನು ಬಾಗಿಕೊಳ್ಳಬಹುದಾದ ವಿಂಡ್ ಸ್ಕ್ರೀನ್ ಅನ್ನು ಮತ್ತು ಮಧ್ಯದಲ್ಲಿ ಮೆಟಲ್ ಸೆಕ್ಷನ್ ಅನ್ನು ನೀಡಲಾಗಿದೆ. ಈ ಮಾಡಿಫೈ ಸರಳ ಮತ್ತು ಸುಲಭವಾಗಿ ತೋರುತ್ತಿದ್ದರೂ, ರೂಫ್, ಡೋರುಗಳು ಮತ್ತು ವಿಂಡ್ ಸ್ಕ್ರೀನ್ ಗಳ ರಚನಾತ್ಮಕ ಘಟಕಗಳ ಭಾಗವಾಗಿರುವುದರಿಂದ ಇದನ್ನು ನಿಖರವಾಗಿ ಮಾಡಿಫೈ ಮಾಡಿದ್ದಾರೆ. ಇನ್ನು ರೋಲ್ ಓವರ್ ರಕ್ಷಣೆಯ ಕೊರತೆಯಿಂದ ಸ್ವಲ್ಪ ಅಪಾಯಕಾರಿ ಎಂದು ತೋರುತ್ತದೆಯಾದರೂ, ಇದು ನಿಖರವಾಗಿ ಮಾಡಿಫೈ ಮಾಡಿದ್ದಾರೆ.

ರೋಲ್‌ಓವರ್ ರಕ್ಷಣೆಯ ಕೊರತೆಯಿಂದಾಗಿ ಈ ಮಾರ್ಪಾಡುಗಳು ಸ್ವಲ್ಪ ಅಪಾಯಕಾರಿ ಎಂದು ತೋರುತ್ತದೆಯಾದರೂ, ಈ ನಿರ್ದಿಷ್ಟ ಉದಾಹರಣೆಯನ್ನು ಸುಸಜ್ಜಿತ ರಸ್ತೆಗಳಿಗೆ ನಿರ್ಮಿಸಲಾಗಿದೆ ಏಕೆಂದರೆ ಚುನಾವಣಾ ಸಮಯದಲ್ಲಿ ವಾಹನವನ್ನು ಪ್ರಚಾರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಮತ್ತು ಈ ಮಾರ್ಪಾಡುಗಳು ಅಭ್ಯರ್ಥಿಯನ್ನು ಜನರೊಂದಿಗೆ ಉತ್ತಮವಾಗಿ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇನ್ನು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಭಾರತದಲ್ಲಿ ಎರಡನೇ ತಲೆಮಾರಿನ ರಿಯಲ್ ವ್ಹೀಲ್ ಡ್ರೈವ್ (RWD) ರೂಪಾಂತರವನ್ನು ಬಿಡುಗಡೆಗೊಳಿಸಿತು.

‌ಈ ಹೊಸ ಮಹೀಂದ್ರಾ ಥಾರ್ RWD ಎಸ್‍ಯುವಿಯ ಪರಿಚಯಾತ್ಮಕ ಬೆಲೆಯಯು ಎಕ್ಸ್ ಶೋರೂಂ ಪ್ರಕಾರ ರೂ.9.99 ಲಕ್ಷವಾಗಿದೆ. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಪರಿಚಯಾತ್ಮಕ ಬೆಲೆಯು ಮೊದಲ 10,000 ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ. ಮಹೀಂದ್ರಾ ಥಾರ್ ಎಸ್‍ಯುವಿಯು 4WD ರೂಪಾಂತರಗಳಂತೆ, ಥಾರ್ RWD ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಮಹೀಂದ್ರಾ ಥಾರ್ RWD ಅನ್ನು ಮೂರು ರೂಪಾಂತರ ಹಂತಗಳಲ್ಲಿ ನೀಡಲಾಗುತ್ತದೆ ಮತ್ತು ಗಟ್ಟಿಯಾದ ರೂಫ್ ನೊಂದಿಗೆ ಮಾತ್ರ ನೀಡಲಾಗುತ್ತದೆ.

ಥಾರ್ RWD ಅನ್ನು ಡೀಸೆಲ್ (ಮ್ಯಾನ್ಯುವಲ್ ಗೇರ್‌ಬಾಕ್ಸ್ ಮಾತ್ರ) ಮತ್ತು ಪೆಟ್ರೋಲ್ ಎಂಜಿನ್‌ಗಳೊಂದಿಗೆ (ಆಟೋಮ್ಯಾಟಿಕ್ ಗೇರ್ ಬಾಕ್ಸ್) ನೀಡಲಾಗುತ್ತದೆ. ಈ ಹೊಸ ಮಹೀಂದ್ರಾ ಥಾರ್ RWD ಎಸ್‍ಯುವಿಯುಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 50 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪೆಟ್ರೋಲ್ ಎಂಜಿನ್ ಅನ್ನು 6-ಸೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡೀಸಲಾಗಿದೆ.

ಈ ಮಹೀಂದ್ರಾ ಥಾರ್ ಆರ್‌ಡಬ್ಲ್ಯೂಡಿಯ ಡೀಸೆಲ್ ಎಂಜಿನ್ ಮಹೀಂದ್ರಾದಿಂದ ಡಿ117 ಸಿಆರ್‌ಡಿಇ ಎಂದು ಕರೆಯಲಾದ ಹೊಸ ಯುನಿಟ್ ಆಗಿದೆ. ಈ ಹೊಸ D117 CRDe ಎಂಜಿನ್ 1.5 ಲೀಟರ್ ಆಗಿದ್ದು, ಈ ಎಂಜಿನ್ 117 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಡೀಸೆಲ್ ಎಂಜಿನ್ ಅನ್ನು ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಇನ್ನು ಈ ಮಹೀಂದ್ರಾ ಥಾರ್ RWD ಎಸ್‍ಯುವಿಯು ಬ್ಲೇಜಿಂಗ್ ಬ್ರಾಂಜ್ ಮತ್ತು ಎವರೆಸ್ಟ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

Image Courtesy: KAM Customs

Most Read Articles

Kannada
English summary
Willys inspired mahindra thar suv details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X