ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

Written By:

ಇತ್ತೀಚಿನ ದಿನಗಳಲ್ಲಿ ಅನಧಿಕೃತ ವಾಹನಗಳು ರಸ್ತೆಗಳ ಮೇಲೆ ಅಡ್ಡ ದಿಡ್ಡಿ ಸಂಚರಿಸಿ ಬಹಳಷ್ಟು ಅಪಘಾತಗಳಿಗೆ ಮೂಲ ಕಾರಣವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರಿ ಇಲಾಖೆ ಬಹಳಷ್ಟು ದಿನಗಳಿಂದಲೂ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂಬುದು ನಮ್ಮ ನಿಮ್ಮೆಲರಿಗೂ ತಿಳಿದಿರುವ ಸಂಗತಿ.

To Follow DriveSpark On Facebook, Click The Like Button
ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಸವಾರರೂ ಸಹ ಯಾವುದೇ ರೀತಿಯ ನಿಯಮಗಳನ್ನು, ಧಾಖಲಾತಿಗಳನ್ನು ಹೊಂದಿರದೆ ವಾಹನ ಚಾಲನೆ ಮಾಡುತ್ತಿರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಹೆಚ್ಚು ಸಿಬ್ಬಂದಿ ನೇಮಿಸಿ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಆದರೆ, ಈ ರೀತಿ ಸಂಚಾರಿ ದಾಖಲೆಗಳನ್ನು ಪರಿಶೀಲನೆ ಮಾಡುವುದೇ ದೊಡ್ಡ ಅನಾಹುತಕ್ಕೆ ಕಾರಣವಾಗಿದ್ದು, ಒಂದು ಜೀವವನ್ನೇ ಬಲಿ ತೆಗೆದುಕೊಂಡಿದೆ.

ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಹೌದು, ಪೊಲೀಸರು ರಸ್ತೆಯ ಮೇಲೆ ಚಲಿಸುತ್ತಿದ್ದ ಬೈಕಿನ ಕೀಲಿ ಕೈ ಕಸಿದುಕೊಳ್ಳಲು ಹೋಗಿ ಆಯಾ ತಪ್ಪಿ ಬೈಕ್ ಸವಾರ ರಸ್ತೆ ಮೇಲೆ ಬಿದ್ದಿದ್ದು, ಹಿಂದಗಡೆ ಕುಳಿತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.

ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಈ ಘಟನೆ ಆಂಧ್ರಪ್ರದೇಶದ ವೈಜಾಕ್ ನಗರದಲ್ಲಿ ನೆಡೆದಿದ್ದು, ಕೀಲಿ ಕೈ ಎಳೆದ ರಭಸಕ್ಕೆ ಬೈಕ್ ಹೆಚ್ಚಿನ ವೇಗವಾಗಿ ನೆಲಕ್ಕೆ ಅಪ್ಪಳಿಸಿದ್ದು, ಇದರ ಪರಿಣಾಮವಾಗಿ ಹಿಂದಗಡೆ ಕುಳಿತಿದ್ದ ಮಹಿಳೆಯ ಜೀವವನ್ನೇ ಕಳೆದುಕೊಳ್ಳಬೇಕಾಗಿದೆ.

ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಹಿಂದಗಡೆ ಇಂದ ರಭಸವಾಗಿ ಬರುತ್ತಿದ್ದ ಲಾರಿ ಚಕ್ರಕ್ಕೆ ಮಹಿಳೆ ಸಿಲುಕಿದ್ದು, ತಲೆಗೆ ಪೆಟ್ಟು ಬಿದ್ದು ಹೆಚ್ಚಿನ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮಹಿಳೆ ಪ್ರಾಣ ಬಿಟ್ಟಿದ್ದಾರೆ.

ಕಾರ್ಯನಿರತ ಸಂಚಾರಿ ಪೋಲೀಸ್ ಬೈಕ್ ಕೀಲಿ ಕೈ ಎಳೆದ ಪರಿಣಾಮ ಚಾಲಕ ನಿಯಂತ್ರಣವನ್ನು ಕಳೆದುಕೊಂಡ ಕರಣ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಆಟೊ ನಗರದಲ್ಲಿರುವ ವಿಶಾಖಪಟ್ಟಣಂ ಪೊಲೀಸ್ ಚೆಕ್ ಪೋಸ್ಟ್ ಬಲಿ ಈ ಘಟನೆ ನೆಡೆದಿದ್ದು, ಚಾಲಕ ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದೆ. ಆತನಿಗೂ ಕೂಡ ಕೊಂಚ ಮಟ್ಟಿನ ಗಾಯಗಳಾಗಿವೆ.

ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಸುಪ್ರೀಂ ಕೋರ್ಟ್ ಆದೇಶದಂತೆ ದಾಖಲೆಗಳನ್ನು ಪರಿಶೀಲಿಸಲು ಪೊಲೀಸರು ಕೀಲಿ ಕೈ ಕಿತ್ತುಕೊಳ್ಳುವ ಅಗತ್ಯ ಇಲ್ಲ ಎನ್ನುವ ವಿಚಾರ ಪೊಲೀಸರಿಗೆ ತಿಳಿದಿದ್ದರೂ ಸಹ ಈ ರೀತಿಯ ಕೃತ್ಯ ಎಸಗಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಾಫಿಕ್ ಪೊಲೀಸ್ ಮಾಡಿದ ಯಡವಟ್ಟಿಗೆ ಮಹಿಳೆ ಬಲಿ : ವಿಡಿಯೋ ನೋಡಿ

ಘಟನೆಗೆ ಸಂಬಂಧಿಸಿದಂತೆ ಬೈಕ್ ಕೀಲಿ ಕೈ ಎಳೆದ ಪೊಲೀಸ್ ಸದ್ಯ ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿಯನ್ನು ಸದ್ಯದರಲ್ಲೇ ಡ್ರೈವ್ ಸ್ಪಾರ್ಕ್ ತಿಳಿಸಲಿದೆ.

Read more on ಅಪಘಾತ accident
English summary
Read in Kannada about A cop pulled out the key out of a moving motorcycle, which caused women died. Know more about this incident and more
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark