ಓದಲು ಮರೆಯದಿರಿ; ವಿಶ್ವಕ್ಕೆ ಇವುಗಳೇ ಪ್ರಥಮ!

Written By:

ನಿಮಗೆಲ್ಲರಿಗೂ ಜಗತ್ತಿನ ಏಳು ಅದ್ಭುತಗಳ ಬಗ್ಗೆ ಗೊತ್ತಿರಬಹುದು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕಂಠಪಾಠವಾಗಿ ಹೇಳಲು ನಿಮ್ಮಿಂದ ಸಾಧ್ಯವಾಗಬಹುದು. ಆದರೆ ನಿಮಗೆ ಗೊತ್ತಿರದ ಇನ್ನು ಕೆಲವು ವಿಚಾರಗಳಿವೆ.

ಉದಾಹರಣೆಗೆ ಜಗತ್ತಿನ ಅತ್ಯಂತ ದೊಡ್ಡ ಪ್ರಯಾಣಿಕ ವಿಮಾನ ಯಾವುದು? ಅತ್ಯಂತ ಉದ್ದವಾದ ಹಡಗು ಯಾವುದು? ಎಂಬಿತ್ಯಾದಿ ವಾಹನ ಜಗತ್ತಿನ ಸಂಬಂಧಪಟ್ಟ ವಿಚಾರಗಳ ಬಗ್ಗೆ ಕೆಲವು ಪ್ರಥಮಗಳ ಬಗ್ಗೆ ವಿವರಣೆ ಕೊಡಲಿದ್ದೇವೆ. ಇದು ನಿಮಗೆ ನೆರವಾಗುವ ನಂಬಿಕೆ ನಮ್ಮದ್ದು.

To Follow DriveSpark On Facebook, Click The Like Button
ಆಂಟೊನೊವ್ ಆನ್ - 225 ಮ್ರಿಯಾ (Antonov An-225 Mriya)

ಆಂಟೊನೊವ್ ಆನ್ - 225 ಮ್ರಿಯಾ (Antonov An-225 Mriya)

ಯಾವುದಕ್ಕೆ ಪ್ರಥಮ? - ವಿಶ್ವದ ಅತಿದ್ದೊಡ ಫಿಕ್ಸೆಡ್-ವಿಂಗ್ ಏರ್‌ಕ್ರಾಫ್ಟ್

ತಯಾರಕರು: ಆಟೋನೋವ್ ಡಿಸೈನ್ ಬ್ಯೂರೋ ಆಪ್ ಸೋವಿಯತ್ ರಷ್ಯಾ.

ಜಗತ್ತಿನ ಅತ್ಯಂತ ದೊಡ್ಡ ವಿಮಾನ ರೆಕ್ಕೆಗಳನ್ನು ಹೊಂದಿರುವ ಆಂಟೊನೊವ್ ಆನ್-225 ಮ್ರಿಯಾ, ಇಂದಿಗೂ ಯಶಸ್ವಿಯಾಗಿ ಹಾರಾಡುತ್ತಿದೆ. ಈ ಸರಕು ವಿಮಾನ 290 ಅಡಿಗಳಷ್ಟು ಉದ್ದದ ರೆಕ್ಕೆಗಳನ್ನು ಹೊಂದಿದೆ.

ಬೆಲ್‌ಎಝಡ್ (BelAZ 75710)

ಬೆಲ್‌ಎಝಡ್ (BelAZ 75710)

ಯಾವುದಕ್ಕೆ ಪ್ರಥಮ? - ವಿಶ್ವದ ದೊಡ್ಡ ವಿಲೇವಾರಿ ಟ್ರಕ್

ತಯಾರಕರು: ಒಎಒ ಬೆಲ್‌ಎಝಡ್

ಬೆಲೂರಸ್ ಆಟೋಮೊಬೈಲ್ ಎಂಜಿನಿಯರಿಂಗ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವ ಜಗತ್ತಿನ ಅತ್ಯಂತ ದೊಡ್ಡ ಕಸ ವಿಲೇವಾರಿ ಟ್ರಕ್, 450 ಟನ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 60 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

ಆರ್‌ಡಬ್ಲ್ಯುಇ ಬ್ಯಾಗರ್ 288 ಎಸ್ಕವೇಟರ್ (RWE Bagger 288 excavator)

ಆರ್‌ಡಬ್ಲ್ಯುಇ ಬ್ಯಾಗರ್ 288 ಎಸ್ಕವೇಟರ್ (RWE Bagger 288 excavator)

ಯಾವುದಕ್ಕೆ ಪ್ರಥಮ? - ಜಗತ್ತಿನ ಅತಿದೊಡ್ಡ ಉತ್ಖನ ವಾಹನ

ತಯಾರಕರು: ಕ್ರುಪ್, ಜರ್ಮನಿ

ಲ್ಯಾಂಡ್ ವಾಹನ ಎಂದು ಸಹ ಅರಿಯಲ್ಪಡುವ ಬ್ಯಾಗರ್ 288, ನಿರ್ವಹಣೆಯನ್ನು ಆರ್‌ಡಬ್ಲ್ಯು‌ಇ ಎಜಿ ಹೊಂದಿದೆ. ಇದು 311ಫೀಟ್ ಎತ್ತರ, 705 ಫೀಟ್ ಉದ್ದ ಹಾಗೂ 45,500 ಟನ್ ಭಾರವನ್ನು ಹೊಂದಿದೆ. ಅಂದರೆ ಟೈಟಾನಿಕ್ (46,328 ಟನ್) ಹಡಗಿನ ಭಾರಕ್ಕೆ ಸರಿ ಸಮಾನವಾಗಿದೆ. ಪ್ರಮುಖವಾಗಿಯೂ ಇದನ್ನು ಜರ್ಮನಿಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿದೆ.

ನಾಸಾ ಕ್ರಾಲರ್ ಟ್ರಾನ್ಸ್‌ಫೋರ್ಟರ್ (NASA Crawler Transporter)

ನಾಸಾ ಕ್ರಾಲರ್ ಟ್ರಾನ್ಸ್‌ಫೋರ್ಟರ್ (NASA Crawler Transporter)

ಯಾವುದರಲ್ಲಿ ಪ್ರಥಮ? - ವಿಶ್ವದ ಅತಿದೊಡ್ಡ ಸ್ವಯಂ ಚಾಲಿತ ಟ್ರ್ಯಾಕ್ ವಾಹನ

ತಯಾರಕರು: ಮರಿಯನ್ ಪವರ್ ಶೋವೆಲ್

ಪ್ರಮುಖವಾಗಿಯೂ ಬಾಹ್ಯಾಕಾಶ ನೌಕೆಗಳ ಉಡಾವಣೆಗಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಇದನ್ನು ನಾಸಾದ ವೆಹಿಕಲ್ ಜೋಡಣೆ ಕಟ್ಟಡದಿಂದ ಬಾಹ್ಯಾಕಾಶ ಉಡಾವಣೆ ಕೇಂದ್ರ ಉಪಗ್ರಹ ರವಾನಿಸಲು ಬಳಕೆ ಮಾಡಲಾಗುತ್ತದೆ.

ಫೋಟೋ ಕೃಪೆ: ವಿಕಿಮೀಡಿಯಾ

ಎಂಎಸ್ ಓಯಸಿಸ್ ಆಫ್ ದಿ ಸೀಸ್ (MS Oasis of the Seas)

ಎಂಎಸ್ ಓಯಸಿಸ್ ಆಫ್ ದಿ ಸೀಸ್ (MS Oasis of the Seas)

ಯಾವುದಕ್ಕೆ ಪ್ರಥಮ? - ಜಗತ್ತಿನ ಅತಿದೊಡ್ಡ ಪ್ರಯಾಣಿಕ ಹಡಗು

ತಯಾರಕರು: ರಾಯಲ್ ಕೆರಿಬಿಯನ್ ಇಂಟರ್‌ನ್ಯಾಷನಲ್

ಓಯಸಿಸ್ ಕ್ಲಾಸ್ ಕ್ರೂಸ್ ಶಿಪ್ ಆಗಿರುವ ಎಂಎಸ್ ಓಯಸಿಸ್ ಆಫ್ ದಿ ಸೀಸ್, ದಾಖಲೆ ಸಂಖ್ಯೆಯ 6,000 ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 41.9 ಕೀ.ಮೀ. ವೇಗದಲ್ಲಿ ಸಂಚರಿಸಬಲ್ಲದು.

ನಾಕ್ ನೆವಿಸ್ ಸೂಪರ್ ಟ್ಯಾಕರ್ (Knock Nevis Super Tanker)

ನಾಕ್ ನೆವಿಸ್ ಸೂಪರ್ ಟ್ಯಾಕರ್ (Knock Nevis Super Tanker)

ಯಾವುದಕ್ಕೆ ಪ್ರಥಮ? - ಜಗತ್ತಿನ ಅತ್ಯಂತ ಉದ್ದದ ಹಡಗು

ತಯಾರಕರು: ಆಂಬೆರ್ ಡೆವೆಲಪ್‌ಮೆಂಟ್

ಇದು ಇದುವರೆಗೆ ನಿರ್ಮಾಣವಾಗಿರುವ ಅತ್ಯಂತ ಉದ್ದದ ಹಡಗಾಗಿದೆ. ಸೀವೈಸ್ ಜೈಂಟ್, ಹ್ಯಾಪಿ ಜೈಂಟ್, ಜಾಹ್ರೆ ವೈಕಿಂಗ್, ಓಪ್ಪಮ ಎಂದು ಸಹ ಅರಿಯಲ್ಪಡುವ ಈ ಹಡಗು, ಬರೋಬ್ಬರಿ 65,7019 ಕೆ.ಜಿ ಭಾರವನ್ನು ಹೊಂದಿದೆ

ಏರ್‌ಬಸ್ (Airbus A380)

ಏರ್‌ಬಸ್ (Airbus A380)

ಯಾವುದಕ್ಕೆ ಪ್ರಥಮ? - ವಿಶ್ವದ ಅತ್ಯಂತ ದೊಡ್ಡ ಪ್ರಯಾಣಿಕ ವಿಮಾನ

ತಯಾರಕರು: ಏರ್‌ಬಸ್

ಏರ್‌ಬಸ್ ಪ್ರಮುಖವಾಗಿಯೂ ಅಮೆರಿಕದ ಬೋಯಿಂಗ್ ವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ. ಫ್ರಾನ್ಸ್‌ನ ಏರ್‌ಬಸ್ ಸಂಸ್ಥೆಯ ಭಾಗವಾಗಿರುವ ಈ ಏರ್‌ಬಸ್ ಎಲ್ಲ ಆರ್ಥಿಕ ಸಂರಚನೆಯಲ್ಲಿ ಏಕಕಾಲಕ್ಕೆ 850ರಷ್ಟು ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ತ್ರಿ ಕ್ಲಾಸ್ ಸಂರಚನೆಯಲ್ಲಿ 550ರಿಂದ 600ರಷ್ಟು ಪ್ರಯಾಣಿಕರನ್ನು ಸಾಗಿಸಲಿದೆ.ಸಾಮಾನ್ಯ ವಿಮಾನಗಳಿಗೆ ಸಿಂಗಲ್ ಡೆಕ್ ಸೌಲಭ್ಯವಿರುತ್ತದೆ. ಆದರೆ ಏರ್‌ಬಸ್ ಎ380 ಎಂಬುದು ಡಬಲ್ ಡೆಕ್, ವಿಶಾಲವಾದ ದೇಹವನ್ನು ಹೊಂದಿರುವ ನಾಲ್ಕು ಎಂಜಿನ್ ಜೆಟ್ ಏರ್‌ಲೈನರ್ ಆಗಿದೆ. 2005 ಎಪ್ರಿಲ್ 27ರಂದು ಮೊದಲ ಹಾರಾಟ ಆರಂಭಿಸಿದ್ದ ಏರ್‌ಬಸ್ ಎ380, 2007ನೇ ಇಸವಿಯಲ್ಲಿ ಸಿಂಗಾಪುರ ಏರ್‌ಲೈನ್ಸ್‌ಗೆ ಸೇರುವ ಮೂಲಕ ಮೊದಲ ವಾಣಿಜ್ಯ ಪಯಣ ಆರಂಭಿಸಿತ್ತು.

ರಷ್ಯನ್ ತೈಫೂನ್-ಕ್ಲಾಸ್ ಸಬ್‌ಮರೈನ್ (Russian Typhoon-Class submarine)

ರಷ್ಯನ್ ತೈಫೂನ್-ಕ್ಲಾಸ್ ಸಬ್‌ಮರೈನ್ (Russian Typhoon-Class submarine)

ಯಾವುದಕ್ಕೆ ಪ್ರಥಮ? - ವಿಶ್ವದ ದೊಡ್ಡ ಜಲಾಂತರ್ಗಾಮಿ

ತಯಾರಕರು: ರುಬಿನ್ ಡಿಸೈನ್ ಬ್ಯೂರೋ

ಪ್ರೊಜೆಕ್ಟ್ 941 ಅಥವಾ ಅಕುಲ ಎಂದರಿಯಲ್ಪಡುವ ರಷ್ಯನ್ ತೈಫೂನ್ ಕ್ಲಾಸ್ ಸಂಬ್‌ಮರೈನ್ ನ್ಯೂ, ಇದುವರೆಗೆ ನಿರ್ಮಾಣವಾಗಿರುವ ಪೈಕಿ ಅತ್ಯಂತ ದೊಡ್ಡ ಜಲಾಂತರ್ಗಾಮಿಯಾಗಿದೆ. ಇದು ಒಂದು ವಿಧದ ಪರಮಾಣು ಚಾಲಿತ ಕ್ಷಿಪಣಿ ಜಲಾಂತರ್ಗಾಮಿಯಾಗಿದೆ.

ಅಮೆರಿಕನ್ ನಿಮಿಟ್ಜ್ ಕ್ಲಾಸ್ ಏರ್‌ಕ್ರಾಫ್ಟ್ ಕ್ಯಾರಿಯರ್ (American Nimitz class aircraft carrier)

ಅಮೆರಿಕನ್ ನಿಮಿಟ್ಜ್ ಕ್ಲಾಸ್ ಏರ್‌ಕ್ರಾಫ್ಟ್ ಕ್ಯಾರಿಯರ್ (American Nimitz class aircraft carrier)

ಯಾವುದಕ್ಕೆ ಪ್ರಥಮ? - ವಿಶ್ವದ ಅತಿದೊಡ್ಡ ಯುದ್ಧ ನೌಕೆ

ತಯಾರಕರು: ನ್ಯೂಪೋರ್ಟ್ ನ್ಯೂಸ್ ಶಿಪ್‌ಬಿಲ್ಡಿಂಗ್ ಸಂಸ್ಥೆ

ಅಮೆರಿಕ ನೌಕಾದಳದ ಅಧೀನತೆಯಲ್ಲಿರುವ, ಪರಮಾಣು ಚಾಲಿತ ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ.

ಮಿಲ್ ವಿ-12 (Mil V-12)

ಮಿಲ್ ವಿ-12 (Mil V-12)

ಯಾವುದಕ್ಕೆ ಪ್ರಥಮ? - ವಿಶ್ವದ ಅತಿದೊಡ್ಡ ಹೆಲಿಕಾಪ್ಟರ್

ತಯಾರಕರು: ಮಿಲ್ ಡಿಸೈನ್ ಬ್ಯೂರೋ

ಇದುವರೆಗೆ ನಿರ್ಮಾಣವಾಗಿರುವ ಪೈಕಿ ಅತಿದೊಡ್ಡ ಹೆಲಿಕಾಪ್ಟರ್ ಇದಾಗಿದೆ. ಸೋವಿಯತ್ ಯೂನಿಯನ್ ಬಳಕೆಯಲ್ಲಿದ್ದ ಈ ದೈತ್ಯ ಹೆಲಿಕಾಪ್ಟರ್ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡಿದೆ.

ಅಮೆರಿಕನ್ ಸ್ಯಾಟರ್ನ್ (American Saturn V)

ಅಮೆರಿಕನ್ ಸ್ಯಾಟರ್ನ್ (American Saturn V)

ಯಾವುದಕ್ಕೆ ಪ್ರಥಮ? - ವಿಶ್ವದ ಅತ್ಯಂತ ಎತ್ತರದ, ಭಾರವಾದ ಹಾಗೂ ಅತ್ಯಂತ ಶಕ್ತಿಶಾಲಿ ರಾಕೆಟ್

ತಯಾರಕರು: ಬೋಯಿಂಗ್, ಉತ್ತರ ಅಮೆರಿಕ, ಡಗ್ಲಾಸ್

ವಿಶ್ವದ ಅತ್ಯಂತ ಎತ್ತರದ, ಭಾರವಾದ ಮತ್ತು ಶಕ್ತಿಶಾಲಿ ರಾಕೆಟ್ ಅಮೆರಿಕನ್ ಸ್ಯಾಟರ್ನ್ ಅನ್ನು ನಾಸಾದ ಐತಿಹಾಸಿಕ ಅಪೊಲೊ ಹಾಗೂ ಸ್ಕೈಲ್ಯಾಬ್ ಉಡಾವಣೆಗಾಗಿ ಬಳಸಿಕೊಳ್ಳಲಾಗಿತ್ತು.

ಫೋಟೊ ಕೃಪೆ: ವಿಕಿಮೀಡಿಯಾ

Story first published: Monday, April 28, 2014, 17:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark