ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

Written By:

ಸೌರಶಕ್ತಿ ಉತ್ಪಾದನೆ ಮೂಲಕ ಈಗಾಗಲೇ ವಿಶ್ವದ್ಯಾಂತ ಹೆಸರು ಮಾಡಿರುವ ಗುಜರಾತ್ ಮತ್ತೊಮ್ಮೆ ಸುದ್ದಿಯಲ್ಲಿ ಕಾಣಿಸಿಕೊಂಡಿದೆ. ಹೌದು, ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ಅಥವಾ ಸೋಲರ್ ನಿಯಂತ್ರಿತ ವಿಮಾನ ಗುಜರಾತ್‌ನ ಅಹಮಾಬಾದ್‌ನಲ್ಲಿ ಬಂದಿಳಿಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಗುಜರಾತ್ ಇತ್ತೀಚೆಗಿನ ಕೆಲವು ಸಮಯಗಳಿಂದ ಅಭಿವೃದ್ಧಿ ವಿಚಾರದಲ್ಲಿ ಸದಾ ಸುದ್ದಿ ಮಾಡುತ್ತಿದೆ. ಇದೀಗ ಸೋಲರ್ ವಿಮಾನ ತನ್ನ ಚೊಚ್ಚಲ ಹಾರಾಟವನ್ನು ಅಬುದಾಬಿಯಿಂದ ನೇರವಾಗಿ ಗುಜರಾತ್ ಕಡೆಗೆ ಬೆಳೆಸಲಿದೆ.

To Follow DriveSpark On Facebook, Click The Like Button
ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಮುಂದಿನ ವರ್ಷ ದುಬೈನ ಅಬುದಾಬಿಯಿಂದ ಗುಜರಾತ್‌ನ ಅಹಮಾದಾಬಾದ್‌ಗೆ ಪಯಣ ಬೆಳೆಸಲಿರುವ ಸೋಲರ್ ಇಂಪಲ್ಸ್ ವಿಮಾನ ತದಾ ಬಳಿಕ ವಾರಣಾಸಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಲರ್ ಇಂಪಲ್ಸ್ ಯೋಜನೆಯ ಸೂತ್ರಧಾರಿಗಳಲ್ಲಿ ಓರ್ವರಾಗಿರುವ ಬರ್ಟ್ರಾಂಡ್ ಪಿಕಾರ್ಡ್, "ಈ ಸಂಬಂಧ ಎರಡು ಬಾರಿ ನರೇಂದ್ರ ಮೋದಿ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ಸಂಪೂರ್ಣ ಹವಾಮಾನ ಅಗತ್ಯಗಳಿಗನುಸಾರವಾಗಿ ಅಹಮಾಬಾದ್ ನಗರವನ್ನು ಆಯ್ಕೆ ಮಾಡಲಾಗಿದೆ" ಎಂದಿದ್ದಾರೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಅಬುದಾಬಿಯಿಂದ ಚೊಚ್ಚಲ ಹಾರಾಟ ಆರಂಭಿಸಲಿರುವ ಸೌರಶಕ್ತಿ ವಿಮಾನವು ಅರಬೀಯಾ ಸಮುದ್ರ ಮಾರ್ಗವಾಗಿ ಭಾರತವನ್ನು ತಲುಪಲಿದೆ. ಇಲ್ಲಿಂದ ಬಳಿಕ ಚೀನಾ, ಫೆಸಿಫಿಕ್ ಸಾಗರ, ಅಮೆರಿಕ, ಅಟ್ಲಾಂಟಿಕಾ ಸಾಗರ, ಯುರೋಪ್, ಉತ್ತರ ಆಫ್ರಿಕಾವನ್ನು ಸುತ್ತಾಡಿ ಮತ್ತೆ ಅಬುದಾಬಿ ನಗರವನ್ನು ಹಿಂತಿರುವ ಯೋಜನೆ ಹೊಂದಿದೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಬೋಯಿಂಗ್ 747 ವಿಮಾನಗಿಂತಲೂ ಅಗಲವಾದ ರೆಕ್ಕೆಯನ್ನು ಹೊಂದಿರುವ ಸೋಲರ್ ವಿಮಾನ 2,300 ಕೆ.ಜಿ ತೂಕವನ್ನು ಹೊಂದಿದ್ದು, ಗಂಟೆಗೆ 140 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇದರಲ್ಲಿ ಏಕಮಾತ್ರ ಪೈಲಟ್‌ಗೆ ಸಂಚರಿಸಬಹುದಾಗಿದೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

10 ವರ್ಷಗಳ ಸುದೀರ್ಘ ಅಧ್ಯಯನ, ನಿರ್ಮಾಣ ಹಾಗೂ ಪರೀಕ್ಷಾರ್ಥ ಚಾಲನೆಯ ಬಳಿಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಇದು ಗರಿಷ್ಠ 70 ಅಶ್ವಶಕ್ತಿ (17.5 ಅಶ್ವಶಕ್ತಿ ಉತ್ಪಾದಿಸುವ ನಾಲ್ಕು ವಾಹನಗಳಿಗೆ ಸಮಾನ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಪ್ರಾರಂಭದಲ್ಲಿ ಇದು ಪ್ರಯಾಣಿಕ ವಿಮಾನ ಎನಿಸಿಕೊಳ್ಳುವುದಿಲ್ಲ. ವಿಮಾನದ ಜನಕ ರೈಟ್ ಸೋದರರು ಸಹ ಪ್ರಯಾಣಿಕರನ್ನು ಸಾಗಿಸುವ ವಿಮಾನ ಸಂಶೋಧನೆ ಮಾಡಿರಲಿಲ್ಲ. ವಿಮಾನ ಹಾರಾಟದ ವೆಚ್ಚ ಕಡಿಮೆ ಮಾಡುವ ಮೂಲಕ ಹಳೆಯ ತಂತ್ರಜ್ಞಾನಕ್ಕೆ ಬದಲಿ ವ್ಯವಸ್ಥೆ ಕಂಡುಕೊಳ್ಳುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದವರು ವಿವರಿಸಿದ್ದಾರೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಇನ್ನು ವಿಶೇಷವೆಂದರೆ ಸೋಲರ್ ವಿಮಾನದ ಪಯಣದ ಉದ್ದಕ್ಕೂ ಪೈಲಟ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರಲಿದ್ದು, ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಅಂತೆಯೇ ಪ್ರತಿ ನಿಲ್ದಾಣದಲ್ಲೂ ಶಾಲಾ ಮಕ್ಕಳು ಹಾಗೂ ಜನರೊಂದಿಗೆ ಬೆರೆಯಲಿದ್ದಾರೆ.

ಗುಜರಾತ್‌ನಲ್ಲಿ ಹಾರಲಿರುವ ವಿಶ್ವದ ಮೊದಲ ಸೌರಶಕ್ತಿ ವಿಮಾನ

ಅಂದ ಹಾಗೆ ಸೋಲರ್ ಇಂಪಲ್ಸ್ ಇದುವರೆಗೆ 2010ರ 26 ತಾಸಿನ ವಿಮಾನ ಸೇರಿದಂತೆ ಹಲವಾರು ಪರೀಕ್ಷಾರ್ಥ ವಿಮಾನಗಳನ್ನು ಅಭಿವೃದ್ಧಿಪಡಿಸಿದೆ.

English summary
Ahmedabad and Varanasi are set for a flying start. The cities will be ports of stop in India for a unique experiment that began in Switzerland — a round-the-world flight by the first aircraft run on solar power
Please Wait while comments are loading...

Latest Photos