ವಿಶ್ವದ ಅತಿ ಭಾರದ ಚಾಲನಾ ಯೋಗ್ಯವಾದ ಮೋಟಾರುಸೈಕಲ್

By Nagaraja

ಭೇಟಿಯಾಗಿ ಇದೇ ವಿಶ್ವದ ಅತ್ಯಂತ ಭಾರದ ಚಾಲನಾ ಯೋಗ್ಯವಾದ ಮೋಟಾರ್ ಸೈಕಲ್ (ಬೈಕ್) - Harzer Bike Schmeide. ಪ್ರಸ್ತುತ ಬೈಕ್ ಗಿನ್ನೆಸ್ ದಾಖಲೆ ಪುಟದಲ್ಲೂ ತನ್ನ ಸ್ಥಾನವನ್ನು ಭದ್ರವಾಗಿಸಿದೆ.

ಗಿನ್ನೆಸ್ ದಾಖಲೆ ವಿಶೇಷ ಪುಟಕ್ಕೆ ಭೇಟಿ ಕೊಡಿರಿ

ಹಾಗಿದ್ದರೆ ಒಂದು ಜಾಲಿ ರೈಡ್ ಹೊಡೆಯೋಣವೇ? ಈ ಮೋಟಾರ್ ಸೈಕಲ್ ನ ವಿಶೇಷತಗಳೇನು ? ಬನ್ನಿ ಸಮಗ್ರ ಮಾಹಿತಿ ಪಡೆಯೋಣ...

ಭಾರ

ಭಾರ

ಪ್ರಪಂಚದಲ್ಲೇ ಅತಿ ಹೆಚ್ಚು ಭಾರದ ಚಾಲನಾ ಯೋಗ್ಯವಾದ ಮೋಟಾರ್ ಸೈಕಲ್ ಎಂದು ಹೇಳುವಾಗ ಅದರ ಭಾರದ ಬಗ್ಗೆ ಮೊದಲು ಚರ್ಚಿಸ ಬೇಕಾಗುತ್ತದೆ. ಇದು ಬರೋಬ್ಬರಿ 4.749 ಟನ್ ಭಾರವನ್ನು ಹೊಂದಿದೆ ಅಂದರೆ ನಂಬಬಹುದೇ?

ರೂವಾರಿಗಳು

ರೂವಾರಿಗಳು

ವಿಶ್ವದ ಅತಿ ಭಾರದ ಚಾಲನಾ ಯೋಗ್ಯವಾದ ಮೋಟಾರ್ ಸೈಕಲ್ ಅನ್ನು ಟಿಲೊ (Tilo) ಹಾಗೂ ವಿಲ್ ಫ್ರೆಡ್ ನಿಬೆಲ್ (Wilfried Niebel) ಎಂಬವರು ಸೇರಿ ನಿರ್ಮಿಸಿದ್ದಾರೆ.

ಎಲ್ಲಿ ನಿರ್ಮಾಣ?

ಎಲ್ಲಿ ನಿರ್ಮಾಣ?

Harzer Bike Schmeide ಮೋಟಾರ್ ಸೈಕಲ್ ಅನ್ನು 2007ರಲ್ಲಿ ಜರ್ಮನಿಯಲ್ಲಿ ನಿರ್ಮಿಸಲಾಗಿತ್ತು.

ಆಯಾಮ

ಆಯಾಮ

ಪ್ರಸ್ತುತ ಮೋಟಾರ್ ಸೈಕಲ್ 5.28 ಮೀಟರ್ ಉದ್ದ ಹಾಗೂ 2.29 ಮೀಟರ್ ಎತ್ತರವನ್ನು ಪಡೆದುಕೊಂಡಿದೆ.

ಎಂಜಿನ್

ಎಂಜಿನ್

ಇಷ್ಟೊಂದು ಭಾರಿ ಗಾತ್ರದ ಮೋಟಾರ್ ಸೈಕಲ್ ಅನ್ನು ಎಳೆಯುವ ನಿಟ್ಟಿನಲ್ಲಿ ಅತ್ಯಂತ ಪವರ್ ಫುಲ್ ರಷ್ಯಾದ ಟ್ಯಾಂಕ್ ಎಂಜಿನ್ ಅನ್ನು ಇದರಲ್ಲಿ ಜೋಡಣೆ ಮಾಡಲಾಗಿದೆ.

ಅವಧಿ

ಅವಧಿ

ಒಂದು ವರ್ಷಗಳ ನಿರಂತರ ಪರಿಶ್ರಮದ ಬಳಿಕ ವಿಶ್ವದ ಅತಿ ಭಾರದ ಚಾಲನಾ ಯೋಗ್ಯವಾದ ಬೈಕ್ ಅನ್ನು ರಚಿಸಲಾಗಿದೆ.

ಗಿನ್ನೆಸ್ ದಾಖಲೆ

ಗಿನ್ನೆಸ್ ದಾಖಲೆ

ಅಂದ ಹಾಗೆ 2007 ನವೆಂಬರ್ 23ರಂದು ವಿಶ್ವದ ಅತ್ಯಂತ ಭಾರದ ಚಾಲನಾ ಯೋಗ್ಯವಾದ ಮೋಟಾರ್ ಸೈಕಲ್ ಗಿನ್ನೆಸ್ ದಾಖಲೆ ಬರೆದಿತ್ತು.

ಎಷ್ಟು ಮಂದಿಗೆ ಪ್ರಯಾಣಿಸಬಹುದು?

ಎಷ್ಟು ಮಂದಿಗೆ ಪ್ರಯಾಣಿಸಬಹುದು?

ಬಸ್ಸುಗಳಲ್ಲಿ ಕಿಕ್ಕಿರಿದು ತುಂಬಿದ ಜನರಿಂದ ಸಂಚರಿಸುವ ಹಾಗೆ ವಿಶ್ವದ ಅತಿ ಭಾರದ ಬೈಕ್ ನಲ್ಲಿ ಎಷ್ಟು ಮಂದಿಗೆ ಪಯಣಿಸಬಹುದು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ.

Most Read Articles

Kannada
English summary
The World's heaviest rideable motorcycle Harzer Bike Schmiede holds Guiness Record, built by Tilo and Wilfried Niebel of Zilly, Germany, which weighed 4.749 tonnes (10,470 lb) on 23 November 2007.
Story first published: Wednesday, May 20, 2015, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X