ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

Written By:

ಬ್ರಿಟನ್ ನ 10 ಯುದ್ಧ ಟ್ಯಾಂಕರ್ ಗಳನ್ನು ಹೊತ್ತೊಯ್ಯಬಲ್ಲ ಹಾಗೂ ಬೋಯಿಂಗ್ 747 ವಿಮಾನಗಿಂತಲೂ ಎರಡು ಪಟ್ಟು ದೊಡ್ಡದಾದ ಅಗಲವಾದ ರೆಕ್ಕೆಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ವಿಮಾನ ಉಕ್ರೇನ್ ನಿಂದ ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ಈ ಐತಿಹಾಸಿಕ ಕ್ಷಣವನ್ನು ಬರಮಾಡಿಕೊಳ್ಳಲು ಇಡೀ ವಿಶ್ವದ ವ್ಯೋಮಯಾನ ವಿಭಾಗವು ಸಜ್ಜಾಗಿ ನಿಂತಿದೆ. ವಿಶ್ವದ ಅತಿ ದೊಡ್ಡ ವಿಮಾನವು ಪ್ರಯಾಣಿಕ ವಿಮಾನವಲ್ಲ. ಬದಲಾಗಿ ಪ್ರಮುಖವಾಗಿಯೂ ಸರಕು ಸಾಗಣೆಗಾಗಿ ಬಳಕೆ ಮಾಡಲಾಗುವುದು.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಆರು ಎಂಜಿನ್ ಗಳಿಂದ ನಿಯಂತ್ರಿತ ವಿಶ್ವದ ಅತಿ ದೊಡ್ಡ ವಿಮಾನವು ಆಂಟೋನೊವ್ ಎಎನ್-225 ಮ್ರಿಯಾ (Antonov An-225 Mriya) ಎಂಬ ಹೆಸರನ್ನು ಪಡೆದಿದೆ. ಇದು 600 ಟನ್ ಗಳಷ್ಟು ಭಾರವನ್ನು ಹೊಂದಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಉಕ್ರೇನ್ ನ ಗೊಸ್ಟೊಮೆಲ್ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿರುವ ವಿಶ್ವದ ಅತಿ ದೊಡ್ಡ ವಾಣಿಜ್ಯ ಜೆಟ್ ವಿಮಾನವು ಭಾನುವಾರದಂದು ಆಸ್ಟ್ರೇಲಿಯಾದ ಪರ್ತ್ ಬಂದಿಳಿಯಲಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಯಾತ್ರೆ ಮಧ್ಯೆ ಭಾರತಕ್ಕೂ ಭೇಟಿ ಕೂಡಲಿರುವ 42 ಚಕ್ರಗಳ ಮ್ರಿಯಾ ವಿಮಾನ ಗುರುವಾರ ಮಧ್ಯರಾತ್ರಿ (ಇಂದು) ಬಂದಿಳಿಯಲಿದೆ. ಬಳಿಕ 20 ತಾಸುಗಳಷ್ಟು ಹೊತ್ತು ವಿಶ್ರಾಂತಿ ಪಡೆಯಲಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಇಂಧನ ಮರು ತುಂಬುವುದು ಮತ್ತು ಸಿಬ್ಬಂದಿಗಳ ವಿಶ್ರಾಂತಿ ಬಳಿಕ ಹೈದಾರಾಬಾದ್ ನಲ್ಲಿ ಮತ್ತೆ ಆಸ್ಟ್ರೇಲಿಯಾದತ್ತ ಪ್ರಯಾಣ ಮುಂದುವರಿಯಸಲಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ವಿಶ್ವದ ಅತಿ ದೊಡ್ಡ ವಿಮಾನ ನಿರ್ಮಿಸಿರುವ ಶ್ರೇಯಸ್ಸು ಉಕ್ರೇನ್ ಗೆ ಸಲ್ಲುತ್ತದೆ. ಇಲ್ಲಿ ಎಂರಿಯಾ ಎಂಬ ಪದದ ಅರ್ಥ ಕನಸು ಎಂದಾಗಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ತನ್ನ ಚೊಚ್ಚಲ ಪ್ರಯಾಣದ ಹಿಂದೆ ಉದ್ದೇಶವೊಂದಿದೆ. ಯುರೋಪ್ ನ ಜೆಕ್ ಗಣರಾಜ್ಯದಿಂದ 117 ಟನ್ ಭಾರದ ಬೃಹತ್ತಾದ ಎಲೆಕ್ಟ್ರಿಕ್ ಮೈನಿಂಗ್ ಜನರೇಟರ್ ಗಳನ್ನು ಪಶ್ಚಿಮ ಆಸ್ಟ್ರೇಲಿಯಾದಲ್ಲಿರುವ ಅಲ್ಯೂಮಿನಿಯಂ ಓರ್ ಮೈನಿಂಗ್ ಸಂಸ್ಥೆಗೆ ಹಸ್ತಾಂತರಿಸಲಾಗುವುದು.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಸಾಂಪ್ರದಾಯಿಕ ಫುಟ್ಬಾಲ್ ಮೈದಾನಗಿಂತಲೂ ಎರಡು ಪಟ್ಟು ಅಗಲವನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ವಿಮಾನವು 88 ಮೀಟರ್ ಗಳ ರೆಕ್ಕೆ ಅಗಲವನ್ನು ಹೊಂದಿದ್ದು, 84 ಮೀಟರ್ ಗಳಷ್ಟು ಉದ್ದವನ್ನು ಪಡೆದಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಯಾವುದೇ ಭಾರವನ್ನು ಹೊರದೆ ಆಂಟೋನೊವ್ ಎಎನ್-225 ಮ್ರಿಯಾ ವಿಮಾನವು ಇಂಧನ ಮರು ತುಂಬದೆ 18 ತಾಸುಗಳಷ್ಟು ನಿರಂತರವಾಗಿ ಚಲಿಸುವಷ್ಟು ಸಾಮರ್ಥ್ಯ ಹೊಂದಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

1980ರ ದಶಕಗಳಲ್ಲಿ ಆಟೋನೊವ್ ಎಎನ್-225 ಮ್ರಿಯಾ ವಿಮಾನವನ್ನು ಸೋವಿಯತ್ ಸ್ಪೇಸ್ ಶಟ್ಲ್ ವಿಮಾನಗಳಾದ 'ದಿ ಬುರಾನ್' ಸಾಗಿಸಲು ಬಳಸಲಾಗುತ್ತಿತ್ತು.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಈ ಐತಿಹಾಸಿಕ ಕ್ಷಣವನ್ನು ಕಣ್ಣಾರೆ ವೀಕ್ಷಿಸಲು ಪರ್ತ್ ವಿಮಾನದಲ್ಲಿ 50,000 ಮಂದಿ ಪ್ರೇಕ್ಷಕರು ಒಟ್ಟು ಸೇರುವ ನಿರೀಕ್ಷೆಯಿದೆ. ಇದಕ್ಕಾಗಿ ಎಲ್ಲ ರೀತಿಯ ಬಂದೋಬಸ್ತ್ ಏರ್ಪಡಿಸಲಾಗಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಆಟೋನೊವ್ ಎಎನ್-225 ಎಂರಿಯಾ ಇತರೆ ಸರಕು ವಿಮಾನಗಳಿಂದ ಸಾಧ್ಯವಾಗದ ಅತಿ ಹೆಚ್ಚು ಭಾರದ ಉಪಕರಣಗಳನ್ನು ಹೊತ್ತೊಯ್ಯುವಷ್ಟು ಸಮರ್ಥವೆನಿಸಿಕೊಂಡಿದೆ.

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ಭಾರತಕ್ಕೆ ಹಾರಿತು ವಿಶ್ವದ ಅತ್ಯಂತ ದುಬಾರಿ ವಿಮಾನ

ವಿಶ್ವದ ಅತಿ ದೊಡ್ಡ ವಿಮಾನ ಯುರೋಪ್‌ನಿಂದ ಆಸ್ಟ್ರೇಲಿಯಾಗೆ ಐತಿಹಾಸಿಕ ಯಾತ್ರೆ

ವಿಶ್ವವನ್ನೇ ಬೆರಗುಗೊಳಿಸುವ ನೀವು ಎಂದು ನೋಡಿರದ ವಿಮಾನ ಇಳಿದಾಣಗಳು

Read more on ವಿಮಾನ plane
English summary
The world's largest airplane, Ukraine-designed 'Antonov An-225 Mriya'

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more