ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

Written By:

ವಿಶ್ವದ ಅತಿ ಹಿರಿಯ ವಿಮಾನ ಪೈಲಟ್ ಯಾರು ಗೊತ್ತೇ? ಅವರೇ ಅಮೆರಿಕ ಕ್ಯಾಲಿಫೋರ್ನಿಯಾ ತಳಹದಿಯ 95ರ ಹರೆಯದ ಹಿರಿಯಜ್ಜ ಪೀಟರ್ ವೆಬರ್ ಜೂನಿಯರ್ (Peter Weber Jr.).

ಪ್ರಸ್ತುತ ಗಿನ್ನೆಸ್ ದಾಖಲೆಯನ್ನು ಬರೆದಿರುವ ಪೀಟರ್ ಗೆ ಇಂತಹದೊಂದು ಸಾಧನೆ ಮಾಡಲು ಸ್ಪೂರ್ತಿಯಾಗಿರುವುದು ಏನು? ಅವರು ಚಾಲನೆ ಮಾಡಿರುವ ವಿಮಾನ ಯಾವುದು? ಎಂಬಿತ್ಯಾದಿ ರೋಚಕ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣವೇ.

To Follow DriveSpark On Facebook, Click The Like Button
ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

2015 ಮಾರ್ಚ್ 30ರಂದು ಪ್ಲೇಸರ್ ವಿಲ್ಲೆನಲ್ಲಿ ವಿಶ್ವದ ಹಿರಿಯಜ್ಜ ಪೀಟರ್ ನೂತನ ಗಿನ್ನೆಸ್ ದಾಖಲೆ ಬರೆದಿದ್ದು, ಗಿನ್ನೆಸ್ ಪುಟದಲ್ಲಿ ತಮ್ಮ ಸ್ಥಾನ ಭದ್ರವಾಗಿರಿಸಿದ್ದಾರೆ.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ಪೀಟರ್ ಅವರು ಹಗುರ ಭಾರದ ವಿಮಾನವೊಂದದಲ್ಲಿ ಇಂತಹದೊಂದು ಸಾಧನೆ ಮಾಡಿದ್ದಾರೆ.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ನಡೆದಾಡಲು ಸಹ ಕಷ್ಟವೆನಿಸುವ ಈ ಇಳಿ ವಯಸ್ಸಿನಲ್ಲಿ ಪೀಟರ್ ಸಾಧನೆ ಯುವಕರಿಗೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ಈಗ ತಮ್ಮ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ವೆಬೆರ್ ತಮ್ಮ ಆತ್ಮ ವರ್ಗದಿಂದ ದೂರವಾಣಿ ಕರೆ ಹಾಗೂ ಇಮೇಲ್ ಸಂದೇಶಗಳ ಸರೆಮಾಲೆಯಾಗುತ್ತಿದೆ ಎಂದಿದ್ದಾರೆ.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ಈಗಲೂ ವಿಮಾನ ಚಾಲನೆಗಾಗಿ ಚಾಲನಾ ಪರವಾನಗಿ ಹೊಂದಿರುವ ಪೀಟರ್ ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ಹಾರಾಟ ನಡೆಸುತ್ತಿದ್ದಾರೆ.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ಅಂದ ಹಾಗೆ ಹಲವು ದಶಕಗಳಷ್ಟು ವಿಮಾನ ಪೈಲಟ್ ಅನುಭವವನ್ನು ಪೀಟರ್ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಯಾಕೆ ಎರಡನೇ ಮಾಹಾಯುದ್ಧ ಹಾಗೂ ವಿಯೆಟ್ನಾಂ ಯುದ್ಧದಲ್ಲಿ ಹಾರಾಟ ನಡೆಸಿರುವ ಅವರು ಕೊರಿಯನ್ ಯುದ್ಧ ವಿಮಾನದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ಈಗ ಗಿನ್ನೆಸ್ ಪುಸ್ತಕದಲ್ಲಿ ಅಧಿಕೃತ ದಾಖಲೆ ಬರೆದಿರುವ ಪೀಟರ್ ಕಳೆದ 72 ವರ್ಷಗಳಿಂದ ಪೈಲಟ್ ಆಗಿ ದುಡಿಯುತ್ತಿದ್ದಾರೆ. ಗಿನ್ನೆಸ್ ಪುಸ್ತಕದ ಪ್ರಕಾರ ಅವರು 1943ರಲ್ಲಿ ಫ್ಲೈಟ್ ಕೇಡೆಟ್ ಆಗಿದ್ದರು.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ಅಮೆರಿಕ ವಾಯುದಳದಲ್ಲಿ ಲೆಫ್ಟಿನೆಟ್ ಕರ್ನಲ್ ಪದವಿಯನ್ನು ಆಲಂಕರಿಸಿರುವ ಪೀಟರ್ 1970ರ ಇಸವಿಯಲ್ಲಿ ಅಲ್ಲಿಂದ ನಿವೃತ್ತಿ ಪಡೆದಿದ್ದರು.

ವಿಶ್ವದ ಹಿರಿಯ ಪೈಲಟ್‌‌ನ ವಯಸ್ಸು 95 ಸಾಧನೆ ಹಿರಿದು!

ಈಗ 95 ವರ್ಷ 143ನೇ ದಿವಸದಲ್ಲಿ ಮತ್ತೆ ವಿಮಾನ ಹಾರಿಸುವ ಮೂಲಕ ಗಿನ್ನೆಸ್ ಪುಟವನ್ನು ಸೇರಿಕೊಂಡಿದ್ದಾರೆ. ಅಲ್ಲದೆ ಇಳಿ ವಯಸ್ಸೇ ತಮ್ಮ ಈ ಸಾಧನೆಗೆ ತಮಗೆ ಸ್ಪೂರ್ತಿಯಾಗಿದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದಾರೆ.

ಪೀಟರ್ ವೆಬರ್ ಜೂನಿಯರ್ ಸಾಧನೆ - ರೋಚಕ ವಿಡಿಯೋ ವೀಕ್ಷಿಸಿ

English summary
95-year-old Peter Weber Jr. is the oldest active pilot, according to Guinness World Records.
Story first published: Tuesday, April 21, 2015, 10:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark