ವಿಶ್ವದ ದೊಡ್ಡಣ್ಣ ಅಮೆರಿಕ; ಭಾರತದ ಮಿಲಿಟರಿ ಬಲಕ್ಕೆ ಎಷ್ಟನೇ ಸ್ಥಾನ?

Written By:

ಒಂದು ಹಾಗೂ ಎರಡನೇ ಮಹಾಯುದ್ಧದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿರುವ ಹಾಗೂ ಜಾಗತಿಕ ಆರ್ಥಿಕ ವ್ಯವಹಾರದಲ್ಲಿ ಬಹು ದೊಡ್ಡ ಪಾಲು ವಹಿಸುತ್ತಿರುವ ಅಮೆರಿಕವೇ ವಿಶ್ವದ ದೊಡ್ಡಣ್ಣ ಎಂಬುದು ಮಗದೊಮ್ಮೆ ಸಾಬೀತಾಗಿದೆ.

Also Read: ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

ವಿಶ್ವದ ಅತಿ ದೊಡ್ಡ ಮಿಲಿಟರಿ ಬಲ ಯಾವುದು ಎಂಬುದಕ್ಕೆ ಉತ್ತರ ದೊರಕಿದೆ. ನಿಸ್ಸಂಶಯವಾಗಿಯೂ ಸದ್ಯಕ್ಕಂತೂ ಅಮೆರಿಕವನ್ನು ಮೀರಿಸುವವರು ಯಾರೂ ಇಲ್ಲ ಎಂಬುದು ಸ್ಪಷ್ಟ. ಅಷ್ಟಕ್ಕೂ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ಉತ್ತರ ಹಾಗೂ ಆಸಕ್ತಿದಾಯಕ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
ವಿಶ್ವದ ಅಗ್ರ 10 ಶಕ್ತಿಯುತ ಮಿಲಿಟರಿ ಬಲ ರಾಷ್ಟ್ರಗಳು

ವಿಶ್ವದ ಸೈನ್ಯ ಬಲವನ್ನು ತುಲನೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ ವಿಶ್ಲೇಷಕರೆಲ್ಲ ಒಟ್ಟು ಸೇರಿ ಸೇನಾ ಶಕ್ತಿ ನಿರ್ಣಯಿಸಲು ವಿವಿಧ ವಿಧಾನಗಳನ್ನು ಬಳಸಿದ್ದಾರೆ. ಇದು ಸೈನಿಕರಿಂದ ಹಿಡಿದು ತಾಂತ್ರಿಕತೆ, ಯುದ್ಧ ವಿಮಾನ ವಾಹಕ, ಯುದ್ಧ ವಿಮಾನ, ಟ್ಯಾಂಕರ್, ಪರಮಾಣು ಶಸ್ತ್ರಾಸ್ತ್ರ, ನೌಕಾ ಪಡೆ ಹಾಗೂ ಭೌಗೋಳಿಕ ಸನ್ನಿವೇಶಗಳನ್ನು ಪಡೆದುಕೊಂಡಿದೆ. ಇದರಂತೆ ಈ ಎಲ್ಲ ಅಂಕಿಅಂಶಗಳನ್ನು ನಿಖರವಾಗಿ ಪರಿಶೀಲಿಸಿರುವ ಗ್ಲೋಬಲ್ ಫೈರ್ ಪವರ್ ವಿಶ್ವದ ಅಗ್ರ 10 ಮಿಲಿಟರಿ ಬಲ ಹೊಂದಿರುವ ರಾಷ್ಟ್ರಗಳನ್ನು ಗುರುತಿಸಿಕೊಂಡಿದೆ.

10. ಟರ್ಕಿ

10. ಟರ್ಕಿ

ವಿಶ್ವ ದಿಗ್ಗಜನಾಗಿ ಬೆಳೆದು ಬರುವ ಹುನ್ನಾರದಲ್ಲಿರುವ ಟರ್ಕಿ, ಭಾರತ ಹಾಗೂ ಚೀನಾ ತರಹನೇ ಮಿಲಿಟರಿ ಬಲಕ್ಕಾಗಿ ಅತಿ ಹೆಚ್ಚು ಮೊತ್ತವನ್ನು ವ್ಯಯಿಸುತ್ತಿದೆ.

ಸಕ್ರಿಯ ಸೈನಿಕರು: 410500

ಟ್ಯಾಂಕರ್: 3778

ಒಟ್ಟು ಯುದ್ಧ ವಿಮಾನ: 1020

ಯುದ್ಧ ನೌಕೆ: 13

09. ಜಪಾನ್

09. ಜಪಾನ್

ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ಅಣು ಬಾಂಬ್ ದಾಳಿಯ ಬಳಿಕ ನೂಚ್ಚು ನೂರಾಗಿರುವ ಜಪಾನ್ ಪುಟಿದೆದ್ದಿರುವ ರೀತಿಯಂತೂ ಶ್ಲಾಘನೀಯ. ಅಲ್ಲದೆ ಈ ಪುಟ್ಟ ರಾಷ್ಟ್ರವೀಗ ಇಡೀ ಜಗತ್ತಿಗೆ ಮಾದರಿಯಾಗಿದೆ.

ಸಕ್ರಿಯ ಸೈನಿಕರು:247173

ಟ್ಯಾಂಕರ್: 678

ಒಟ್ಟು ಯುದ್ಧ ವಿಮಾನ: 1613

ಯುದ್ಧ ನೌಕೆ: 16

08. ಜರ್ಮನಿ

08. ಜರ್ಮನಿ

ಎರಡನೇ ಮಹಾಯುದ್ಧಕ್ಕೆ ಕಾರಣರಾದ ನಾಜಿ ಪಕ್ಷದ ಮುಖ್ಯಸ್ಥ, ಸರ್ವಾಧಿಕಾರಿ ಅಡಾಲ್ಫ್‌ಹಿಟ್ಲರ್‌ ಅವರಂತಹ ಸರ್ವಾಧಿಕಾರಿ ನಾಯಕರು ಹುಟ್ಟಿ ಬೆಳೆದಿರುವ ಜರ್ಮನಿಯು ಈಗಲೂ ಸೈನ್ಯ ಬಲದಲ್ಲಿ ಪರಿಣಾಮಕಾರಿಯೆನಿಸಿದೆ.

ಸಕ್ರಿಯ ಸೈನಿಕರು: 179046

ಟ್ಯಾಂಕರ್: 408

ಒಟ್ಟು ಯುದ್ಧ ವಿಮಾನ: 663

ಯುದ್ಧ ನೌಕೆ: 4

07. ದಕ್ಷಿಣ ಕೊರಿಯಾ

07. ದಕ್ಷಿಣ ಕೊರಿಯಾ

ಉತ್ತರ ಕೊರಿಯಾ ವಿರುದ್ಧ ಸದಾ ಸಮರದಲ್ಲಿರುವ ದಕ್ಷಿಣ ಕೊರಿಯಾ ವಿಶ್ವ ಮಿಲಿಟರಿ ಬಲದಲ್ಲಿ ಆರನೇ ಸ್ಥಾನದಲ್ಲಿದೆ. ಇತರ ದೇಶಗಳನ್ನು ಹೋಲಿಕೆ ಮಾಡಿದಾಗ ದಕ್ಷಿಣ ಕೊರಿಯಾ ನೌಕಾ ಬಲದಲ್ಲಿ ಹೆಚ್ಚು ಬಲಿಷ್ಠವೆನಿಸಿದೆ.

ಸಕ್ರಿಯ ಸೈನಿಕರು: 624265

ಟ್ಯಾಂಕರ್: 2381

ಒಟ್ಟು ಯುದ್ಧ ವಿಮಾನ: 1412

ಯುದ್ಧ ನೌಕೆ: 13

06. ಫ್ರಾನ್ಸ್

06. ಫ್ರಾನ್ಸ್

ಪ್ರಬಲ ಮತ್ತು ಆಧುನಿಕ ಉಪಕರಣಗಳು ಫ್ರಾನ್ಸ್ ಸೇನೆಯ ಬಲವಾಗಿದೆ. ಅಲ್ಲದೆ ಹಿಂದಿನಿಂದಲೂ ಸೈನ್ಯ ಬಲದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಸಕ್ರಿಯ ಸೈನಿಕರು: 202761

ಟ್ಯಾಂಕರ್: 423

ಒಟ್ಟು ಯುದ್ಧ ವಿಮಾನ: 1264

ಯುದ್ಧ ನೌಕೆ: 10

ವಿಮಾನ ವಾಹಕ: 4

05. ಬ್ರಿಟನ್

05. ಬ್ರಿಟನ್

ಭಾರತಕ್ಕಿಂತಲೂ 10 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚು ಬಜೆಟ್ ವ್ಯಯಿಸಿದರೂ ಗ್ಲೋಬಲ್ ಫೈರ್ ಪವರ್ ಸೂಚ್ಯಂಕದ ಪ್ರಕಾರ ಬ್ರಿಟನ್ ಐದನೇ ಸ್ಥಾನದಲ್ಲಿದೆ.

ಸಕ್ರಿಯ ಸೈನಿಕರು: 146,980

ಟ್ಯಾಂಕರ್: 407

ಒಟ್ಟು ಯುದ್ಧ ವಿಮಾನ: 936

ಯುದ್ಧ ನೌಕೆ: 10

ವಿಮಾನ ವಾಹಕ: 1

04. ಭಾರತ

04. ಭಾರತ

ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತ ಮಿಲಿಟರಿ ಬಲದಲ್ಲೂ ತನ್ನ ಸಾಮರ್ಥ್ಯ ತೋರಿದೆ. ವರ್ಷಂಪ್ರತಿ ನಡೆಯುತ್ತಿರುವ ಕೇಂದ್ರ ಬಜೆಟ್ ನಲ್ಲಿ ರಕ್ಷಣಾ ವಿಭಾಗಕ್ಕೆ ಅತಿ ಹೆಚ್ಚು ಮೊತ್ತವನ್ನು ಮೀಸಲಿಡುತ್ತಿರುವ ಭಾರತ 2020ರ ವೇಳೆಯಾಗುವಾಗ ಅಶ್ವಶಕ್ತಿಯಾಗಿ ಬೆಳೆದು ಬರಲಿದೆ. ಅಲ್ಲದೆ ಸೈನಿಕ ಬಲದಲ್ಲಿ ಮೂರನೇ ಸ್ಥಾನದಲ್ಲಿದೆ.

ಸಕ್ರಿಯ ಸೈನಿಕರು: 1325000

ಟ್ಯಾಂಕರ್: 6464

ಒಟ್ಟು ಯುದ್ಧ ವಿಮಾನ: 1905

ಯುದ್ಧ ನೌಕೆ: 15

ವಿಮಾನ ವಾಹಕ: 2

03. ಚೀನಾ

03. ಚೀನಾ

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದ ಮುಖ್ಯ ಆಯುಧ ಅಲ್ಲಿನ ಸೈನಿಕ ಬಲವಾಗಿದೆ. ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಸೈನಿಕ ಬಲವನ್ನು ಚೀನಾ ಹೊಂದಿದೆ.

ಸಕ್ರಿಯ ಸೈನಿಕರು: 2333000

ಟ್ಯಾಂಕರ್: 9150

ಒಟ್ಟು ಯುದ್ಧ ವಿಮಾನ: 2860

ಯುದ್ಧ ನೌಕೆ: 67

ವಿಮಾನ ವಾಹಕ: 1

02. ರಷ್ಯಾ

02. ರಷ್ಯಾ

ಅಮೆರಿಕ ವಿರುದ್ಧದ ಶೀತಲ ಸಮರದ ಬಳಿಕ ಹಿನ್ನೆಡೆ ಅನುಭವಿಸಿದರೂ ಬೃಹತ್ ಸೈನ್ಯ ಬಲವನ್ನು ರಷ್ಯಾ ಕಟ್ಟಿಕೊಂಡು ಬಂದಿದೆ. ಇತ್ತೀಚೆಗಿನ ಉಗ್ರರ ವಿರುದ್ಧ ನೇರ ಸಮರ ಸಾರಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು.

ಸಕ್ರಿಯ ಸೈನಿಕರು: 766,055,

ಟ್ಯಾಂಕರ್: 15,398

ಒಟ್ಟು ಯುದ್ಧ ವಿಮಾನ: 3,429

ಯುದ್ಧ ನೌಕೆ: 55

ವಿಮಾನ ವಾಹಕ: 1

01. ಅಮೆರಿಕ

01. ಅಮೆರಿಕ

ವರ್ಷಗಳಿಂದಲೂ ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯ ಬಲವನ್ನು ಅಮೆರಿಕ ಕಾಪಾಡಿಕೊಂಡು ಬಂದಿದೆ. ಅಮೆರಿಕ ರಕ್ಷಣಾ ಬಜೆಟ್ 600 ಬಿಲಿಯನ್ ಅಮೆರಿಕನ್ ಡಾಲರ್ ದಾಟಿದ್ದು, ಕೆಲವು ಗಮನಾರ್ಹ ಮಾಹಿತಿಗಳು ಕೆಳಗಡೆ ಕೊಡಲಾಗಿದೆ.

ಸಕ್ರಿಯ ಸೈನಿಕರು: 1,40,000,

ಟ್ಯಾಂಕರ್: 8,848

ಒಟ್ಟು ಯುದ್ಧ ವಿಮಾನ: 13,892

ಯುದ್ಧ ನೌಕೆ: 72

ವಿಮಾನ ವಾಹಕ: 20

Read more on ವಿಮಾನ plane
English summary
World's 10 most powerful militaries
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark