ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

Written By:

ಒಂದು ಟ್ರ್ಯಾಕ್ಟರ್ ಮತ್ತು ಒಂದು ಕಾರಿನ ಮಧ್ಯೆ ಅಪಘಾತ ಸಂಭವಿಸಿದರೆ ಯಾವ ವಾಹನಕ್ಕೆ ಹೆಚ್ಚು ಹಾನಿಯಾಗುತ್ತದೆ / ಸಂದೇಹವೇ ಬೇಡ... ಕಾರು ಪುಡಿ ಪುಡಿಯಾಗುವುದು ಖಂಡಿತ.

ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

ಈ ರೀತಿಯ ಘಟನೆಯೊಂದು ಕರ್ನಾಟಕದ ಎನ್ಎಚ್ -7 ಹೆದ್ದಾರಿಯಲ್ಲಿ ಸಂಭವಿಸಿದೆ. ಸಾಮಾನ್ಯವಾಗಿ ಬಳ್ಳಾರಿ ರಸ್ತೆಯಲ್ಲಿ ಅಪಘಾತದ ಪ್ರಮಾಣ ತುಸು ಹೆಚ್ಚೇ ಎನ್ನಬಹುದು. ಆದ್ರೆ, ಈ ಬಾರಿ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ್ದು, ಕಾರಿನ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

ಈ ಅಪಘಾತವು ಚಿಕ್ಕಬಳ್ಳಾಪುರ ಬಳಿ ಹಾಗು ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿ ಸಂಭವಿಸಿದೆ. ಮಾಲೀಕರೊಬ್ಬರು ಮಹೀಂದ್ರಾ ಎಸ್‌ಯುವಿ ಕಾರಿನಲ್ಲಿ ಅವರ ಕುಟುಂಬದೊಂದಿಗೆ ಅನಂತಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

ಮೂರು ಲೇನ್ ಹೆದ್ದಾರಿಯ ಬಲ ಭಾಗದಲ್ಲಿ ಎಕ್ಸ್‌ಯುವಿ 500 ಚಲಿಸುತ್ತಿತ್ತು ಎನ್ನಲಾಗಿದೆ ಹಾಗು ಟ್ರಾಕ್ಟರ್ ಎಡ ಭಾಗದ ಲೇನ್‌ನಲ್ಲಿ ನಿಧಾನವಾಗಿ ಚಲಿಸುತ್ತಿತ್ತು ಎನ್ನಲಾಗಿದೆ. ವಿಭಾಜಕ ಕಂಡ ಕೂಡಲೇ ಟ್ರಾಕ್ಟರ್‌ನ ಡ್ರೈವರ್ ರಸ್ತೆ ದಾಟಲು ಮುಂದಾಗಿರುವುದು ಈ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ.

ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

ಎರಡು ವಾಹನಗಳು ವೇಗದ ವಿಭಿನ್ನತೆ ಮತ್ತು ವಾಹನಗಳ ನಡುವೆ ತುಂಬಾ ಕಡಿಮೆ ಅಂತರವಿದ್ದ ಕಾರಣ ಎಕ್ಸ್‌ಯುವಿ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗದೆ ಈ ದುರ್ಘಟನೆ ಸಂಭವಿಸಿದೆ. ಇದರ ಪರಿಣಾಮವಾಗಿ, ಎಕ್ಸ್‌ಯುವಿ 500 ಕಾರಿನ ಹಿಂಬದಿಯ ಚಕ್ರ ನೇರವಾಗಿ ಟ್ರ್ಯಾಕ್ಟರ್‌ಗೆ ಅಪ್ಪಳಿಸಿದೆ.

ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

ಟ್ರಾಕ್ಟರ್ ತಮಿಳುನಾಡು ನೋಂದಣಿ ಹೊಂದಿದ್ದು, ಅಪಘಾತದಲ್ಲಿ ಹೆಚ್ಚು ಹಾನಿಗೊಂಡಿಲ್ಲ ಎನ್ನಬಹುದು ಹಾಗು ಟ್ರಾಕ್ಟರ್‌ನ ಚಿತ್ರಗಳು ಹೆಚ್ಚು ಬಹಿರಂಗವಾಗದೆ ಇರುವುದು ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ತಡೆಯನುಂಟು ಮಾಡಿದೆ.

ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

ಇನ್ನೊಂದೆಡೆ, ಚಿತ್ರಗಳಲ್ಲಿ ಕಾಣುವಂತೆ ಎಕ್ಸ್‌ಯುವಿ 500 ತೀವ್ರವಾದ ಹಾನಿಗೊಳಗಾಗಿದ್ದು, ಕಾರಿನ ಮುಂಭಾಗದ ಎಡಭಾಗವು ಸಂಪೂರ್ಣವಾಗಿ ಜಖಂಗೊಂಡಿದ್ದು, ಮಾಲೀಕನ ಪ್ರಕಾರ ಹಾನಿಯು ಡ್ಯಾಶ್‌ಬೋರ್ಡ್‌ವರೆಗೆ ತಲುಪಿದೆ.

ಟ್ರ್ಯಾಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನಡುವೆ ಭೀಕರ ರಸ್ತೆ ಅಪಘಾತ

ಟ್ರಾಕ್ಟರ್ ಡ್ರೈವರ್ ಕುಡಿದು ವಾಹನ ಚಾಲನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆಯನ್ನು ಮುಂದುವರೆಸುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.

Read more on accident ಅಪಘಾತ
English summary
Mahindra XUV500 Crashes Into Tractor And Occupants Walk Away Unscathed
Story first published: Saturday, December 2, 2017, 12:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark