ರಸ್ತೆಗೆ ಅಡ್ಡ ನಿಂತಿದ್ದ ಟ್ರಕ್ ಕೆಳಗೆ ಸ್ಕೂಟರ್ ನುಗ್ಗಿಸಿದ ಯುವಕ

ರಸ್ತೆಗೆ ಅಡ್ಡವಾಗಿರುವ ನಿಲ್ಲಿಸಿರುವ ಟ್ರಕ್‌ಗಳ ಕೆಳಗೆ ವಾಹನಗಳು ನುಗ್ಗುವ ದೃಶ್ಯಗಳನ್ನು ಸಿನೆಮಾಗಳಲ್ಲಿ ಕಾಣಬಹುದು. ಇದೇ ರೀತಿಯಲ್ಲಿ ರಸ್ತೆಯಲ್ಲಿ ಅಡ್ಡ ನಿಂತಿದ್ದ ಟ್ರಕ್ ಕೆಳಗೆ ಯುವಕನೊಬ್ಬ ತನ್ನ ಸ್ಕೂಟರ್ ನುಗ್ಗಿಸಿಕೊಂಡು ಹೋದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆಗೆ ಅಡ್ಡ ನಿಂತಿದ್ದ ಟ್ರಕ್ ಕೆಳಗೆ ಸ್ಕೂಟರ್ ನುಗ್ಗಿಸಿದ ಯುವಕ

ಈ ವೀಡಿಯೊದಲ್ಲಿ ಹೀರೋ ಮೆಸ್ಟ್ರೋ ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸದೇ ಬಂದ ಯುವಕನೊಬ್ಬ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಕ್‌ನ ಕೆಳಗೆ ನುಗ್ಗುತ್ತಿರುವುದನ್ನು ಕಾಣಬಹುದು. ಈ ವೀಡಿಯೊವನ್ನು ಇಟ್ಸ್ ಸೈನಿ ವಿಮಲ್ ಎಂಬ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ರಸ್ತೆಗೆ ಅಡ್ಡ ನಿಂತಿದ್ದ ಟ್ರಕ್ ಕೆಳಗೆ ಸ್ಕೂಟರ್ ನುಗ್ಗಿಸಿದ ಯುವಕ

ವೈರಲ್ ಆಗಿರುವ ಈ ವೀಡಿಯೊ ಇದುವರೆಗೂ ಸುಮಾರು 12,33,640 ಲೈಕ್‌ಗಳನ್ನು ಗಿಟ್ಟಿಸಿದೆ. ಈ ವೀಡಿಯೊವನ್ನು ವೀಕ್ಷಿಸುತ್ತಿರುವ ಹಲವಾರು ಜನರು ವೀಡಿಯೊವನ್ನು ಟ್ರೋಲ್ ಮಾಡುತ್ತಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರಸ್ತೆಗೆ ಅಡ್ಡ ನಿಂತಿದ್ದ ಟ್ರಕ್ ಕೆಳಗೆ ಸ್ಕೂಟರ್ ನುಗ್ಗಿಸಿದ ಯುವಕ

ಕೆಲವರು ಟ್ರಕ್ ಅಡಿಯಲ್ಲಿ ನುಸುಳುತ್ತಿರುವ ಸ್ಕೂಟರ್ ಸವಾರನನ್ನು ಟಾರ್ಜನ್ 2.0 ಎಂದು ಕರೆಯುತ್ತಿದ್ದಾರೆ. ಸಿನೆಮಾಗಳಲ್ಲಿ ಕಾರುಗಳು ಮಾತ್ರ ಟ್ರಕ್ ಅಡಿಯಲ್ಲಿ ನುಸುಳುವ ದೃಶ್ಯಗಳನ್ನು ಕಾಣಬಹುದು.

ರಸ್ತೆಗೆ ಅಡ್ಡ ನಿಂತಿದ್ದ ಟ್ರಕ್ ಕೆಳಗೆ ಸ್ಕೂಟರ್ ನುಗ್ಗಿಸಿದ ಯುವಕ

ಸಿನಿಮಾಗಳಲ್ಲಿ ಸ್ಕೂಟರ್ ಮೂಲಕ ಟ್ರಕ್ ಕೆಳಗೆ ನುಸುಳುವ ದೃಶ್ಯಗಳನ್ನು ಕಾಣುವುದು ಅಪರೂಪ. ಸಿನಿಮಾದಲ್ಲಿ ಅಪರೂಪವಾಗಿರುವ ದೃಶ್ಯವನ್ನು ಈ ಸ್ಕೂಟರ್ ಸವಾರ ನಿಜವಾಗಿಯೂ ಮಾಡಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರಸ್ತೆಗೆ ಅಡ್ಡ ನಿಂತಿದ್ದ ಟ್ರಕ್ ಕೆಳಗೆ ಸ್ಕೂಟರ್ ನುಗ್ಗಿಸಿದ ಯುವಕ

ಸ್ಕೂಟರ್ ಸವಾರನ ಈ ಕೃತ್ಯದಿಂದಾಗಿ ಸ್ಕೂಟರ್ ಸಹ ಟ್ರಕ್ ಅಡಿಯಲ್ಲಿ ಸುಲಭವಾಗಿ ನುಸುಳಬಹುದು ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಜನರು ರೈಲ್ವೆ ಕ್ರಾಸಿಂಗ್‌ಗಳಲ್ಲಿ ಈ ರೀತಿ ವಾಹನಗಳನ್ನು ನುಗ್ಗಿಸುವುದನ್ನು ಕಾಣಬಹುದು.

young-man-takes-scooter-under-truck-video-goes-viral-details

ಆದರೆ ಬಹುಶಃ ಇದೇ ಮೊದಲ ಬಾರಿಗೆ ಸ್ಕೂಟರ್ ಒಂದು ಟ್ರಕ್ ಕೆಳಗೆ ನುಸುಳುತ್ತಿರುವುದನ್ನು ಕಾಣಬಹುದು. ಈ ದೃಶ್ಯ ನಿಜಕ್ಕೂ ಅಚ್ಚರಿಯ ಜೊತೆಗೆ ಒಂದು ಕ್ಷಣ ಆತಂಕವನ್ನುಂಟು ಮಾಡುವುದು ಸುಳ್ಳಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಯಾವುದೇ ದ್ವಿಚಕ್ರ ವಾಹನಗಳು ಟ್ರಕ್'ನಂತಹ ಭಾರೀ ವಾಹನಗಳ ಕೆಳಗೆ ನುಸುಳುವುದು ನಿಜಕ್ಕೂ ಅಪಾಯಕಾರಿ ಸಂಗತಿಯಾಗಿದೆ. ಯಾವುದೋ ತುರ್ತು ಕಾರ್ಯಕ್ಕೆ ತೆರಳುವವರು ಈ ರೀತಿ ಮಾಡಬಹುದಾದರೂ ಮುಂದೆ ಎದುರಾಗಬಹುದಾದ ಅಪಾಯದ ಬಗೆಯೂ ಯೋಚನೆ ಮಾಡುವುದು ಒಳಿತು.

young-man-takes-scooter-under-truck-video-goes-viral-details

ಮೈ ಜುಮ್ ಎನಿಸುವ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಆದರೆ ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ನಡೆದಿದೆ ಎಂಬ ಬಗ್ಗೆ ತಿಳಿದು ಬಂದಿಲ್ಲ.

Most Read Articles

Kannada
English summary
Young man takes scooter under truck video goes viral. Read in Kannada.
Story first published: Friday, April 9, 2021, 19:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X