ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

Written By:

ಮಾಲಿಕರೇ ಎಚ್ಚರ, ನಿಮ್ಮ ಸೆಕೆಂಡ್ ಹ್ಯಾಂಡ್ ಕಾರನ್ನು ಮಾರಲು ಇಚ್ಛಿಸುವೀರಾ? ಹಾಗಿದ್ದರೆ ತುಂಬಾನೇ ಜಾಗರೂಕರಾಗಿರುವುದು ಒಳಿತು. ಯಾಕೆಂದರೆ ನಮ್ಮ ಬೆಂಗಳೂರಿನಲ್ಲಿ ಖದೀಮರ ಸಂಖ್ಯೆ ಬಹಳನೇ ಜಾಸ್ತಿಯಾಗಿಬಿಟ್ಟಿದೆ.

ಇದೀಗ ಬಂದಿರುವ ಆಘಾತಕಾರಿ ಸುದ್ದಿಯಲ್ಲಿ ಕಾರು ಖರೀದಿಸಲೆಂದು ಸಭ್ಯತೆಯ ವೇಷ ಧರಿಸಿ ಬಂದಿರುವ ಚೋರ, ಮಹೀಂದ್ರ ಸ್ಕಾರ್ಪಿಯೊ ಕಾರನ್ನು ಕದ್ದಿರುವ ಘಟನೆ ವೈಟ್ ಫೀಲ್ಡ್ ನಿಂದ ವರದಿಯಾಗಿದೆ.

ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

ಬೆಂಗಳೂರಿನ ಐಟಿ ಉದ್ಯಮಿಯಾಗಿರುವ ಅಭಿಷೇಕ್ ಕುಮಾರ್, ತಮ್ಮ ಕಪ್ಪು ಬಣ್ಣದ ಮಹೀಂದ್ರ ಸ್ಕಾರ್ಪಿಯೊ ಕಾರನ್ನು ಮಾರಲು ಇಚ್ಛಿಸಿದ್ದರು. ಈ ಸಂಬಂಧ ಕಾರು ಖರೀದಿಸಲು ಉತ್ಸುಕತೆ ವ್ಯಕ್ತಪಡಿಸಿದ ಶಂಕರ್ ಎಂಬಾತನಿಂದ ಕರೆಯನ್ನು ಸ್ವೀಕರಿಸಿದ್ದರು.

ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

ಕಳೆದೊಂದು ವಾರದ ಅವಧಿಯಲ್ಲಿ ಮೂರು ಬಾರಿ ಅಭಿಷೇಕ್ ಅವರನ್ನು ಭೇಟಿ ಮಾಡಿರುವ ಶಂಕರ್, ಕಳೆದ ಶನಿವಾರದಂದು ಕಾರನ್ನು ಖರೀದಿಸುವುದಾಗಿ ಮಾತು ಕೊಟ್ಟಿದ್ದರು.

ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

ನೋಡಲು ಸಭ್ಯ ಯುವಕನಾಗಿರುವ ಶಂಕರ್ ಅಂದಾಜು 20ರ ಹರೆಯ. ಹಾಗಾಗಿ ಮುಂದಿನ ಸಾರಿ ಬರುವಾಗ ಕುಟುಂಬ ಸದಸ್ಯರನ್ನು ಕರೆ ತರಲು ಅಭಿಷೇಕ್ ಸೂಚಿಸಿದ್ದರು.

ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

ಈ ನಡುವೆ ಮಗದೊಮ್ಮೆ ಟೆಸ್ಟ್ ಡ್ರೈವ್ ಮಾಡಲು ಉತ್ಸುಕತೆ ತೋರಿರುವ ಶಂಕರ್ ಇದೇ ಸುವರ್ಣಾವಕಾಶ ಎಂಬಂತೇ ಬಹಳ ಬುದ್ದಿವಂತಿಕೆಯಿಂದ ಕಾರನ್ನು ಎಗರಿಸಿ ಬಿಟ್ಟಿದ್ದಾರೆ.

ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

ಸದ್ಯ ಅಭಿಷೇಕ್ ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸೇಫ್ಟಿಗಾಗಿ ಯುವಕ ಮೊದಲ ಬಾರಿಗೆ ಡ್ರೈವ್ ಮಾಡುತ್ತಿರಬೇಕಾದರೆ ವಿಡಿಯೋವನ್ನು ಚಿತ್ರಿಸಿದ್ದರು.

ಟೆಸ್ಟ್ ಡ್ರೈವ್ ಮಾಡಲೆಂದು ಬಂದು ಕಾರನ್ನೇ ಎಗರಿಸಿದ ಚತುರ ಚೋರ!

ತನಿಖೆ ಚುರುಕುಗೊಳಿಸಿರುವ ಪೊಲೀಸರು ಬಹುಬೇಗನೇ ಕಳ್ಳನನ್ನು ಹಿಡಿಯುವ ಪ್ರಯತ್ನದಲ್ಲಿದ್ದು, ಈತನ ಹಿಂದೆ ದೊಡ್ಡ ಜಾಲವೇ ಇದೆ ಎಂಬುದನ್ನು ಪರೀಶೀಲಿಸಲಾಗುತ್ತಿದೆ.

English summary
Youngster Asks For Test Drive And Steals A Scorpio In Bangalore
Story first published: Wednesday, June 22, 2016, 9:50 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark