ಮುಖ್ಯಮಂತ್ರಿ ಸದಾನಂದ ಗೌಡರ ಮಾಜಿ ಪ್ರೇಯಸಿ

D V sadananda gowda
ಸಿಎಂ ಎಂಬ ಚಾಲಕನ ಸೀಟಿನಲ್ಲಿ ಡಿವಿಎಸ್ ಕುಳಿತು ಹನ್ನೊಂದು ತಿಂಗಳಾಗುತ್ತ ಬಂದಿದೆ. ರಸ್ತೆಯಲ್ಲಿ ಎದುರಾದ ಹಂಪ್ ಗಳಲ್ಲಿ, ಬೃಹತ್ ಏರ್ ಪಿನ್ ತಿರುವುಗಳಲ್ಲಿ, ಗುಂಡಿಗಂಡಾಂತರಗಳಲ್ಲಿ ಚಾಕಚಕ್ಯತೆಯಿಂದ ಡ್ರೈವಿಂಗ್ ಮಾಡಿದ್ದಾರೆ. ಇದೀಗ ಒನ್ ವೇ ಹಾದಿಯಲ್ಲಿ ಬೃಹತ್ ಕಂದಕವನ್ನು ಬಿಎಸ್ ವೈ ಬಣ ಸೃಷ್ಟಿಸಿದೆ.

ಇಲ್ಲಿ ಡಿವಿಎಸ್ ಹೇಗೆ ಡ್ರೈವಿಂಗ್ ಮಾಡುತ್ತಾರೆ ಎನ್ನುವುದರ ಮೇಲೆ ಅವರ ಚಾಲಕನ ಸೀಟಿನ ಭವಿಷ್ಯ ನಿಂತಿದೆ. ಈ ಕಂದಕವನ್ನು ಮೋಟರ್ ಸ್ಪೋರ್ಟ್ ಡ್ರೈವರ್ ತರಹ ಜಂಪ್ ಮಾಡುತ್ತಾರೋ... ಬಂಡಿಯನ್ನು ಕಂದಕಕ್ಕೆ ಉರುಳಿಸುತ್ತಾರೋ, ಚಾಲಕನ ಸೀಟಿನಿಂದ ಹೊರಕ್ಕೆ ನೆಗೆಯುತ್ತಾರೋ... ಅಥವಾ ಎಲ್ಲದಕ್ಕೂ ಬ್ರೇಕ್ ಹಾಕುತ್ತಾರೋ... ಕಾದು ನೋಡಬೇಕಿದೆ.

ಮುಖ್ಯಮಂತ್ರಿಯೆಂಬ ಚಾಲಕನ ಸೀಟಿನಲ್ಲಿ ಕುಳಿತಾಗ ಕನ್ನಡ ಡ್ರೈವ್ ಸ್ಪಾರ್ಕ್ ಅವರ ಡ್ರೈವಿಂಗ್ ಪರಿಣತಿಯ ಕುರಿತು ಬರೆದಿತ್ತು. ಈ ಲೇಖನ ಮತ್ತೆ ಮರುಓದಿಗಾಗಿ ಇಲ್ಲಿ ನೀಡಲಾಗಿದೆ.

ಇದು ನೂತನ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಮಾಜಿ ಪ್ರೇಯಸಿಯ ಖಾಸಗಿ ಸಮಾಚಾರ. ಕೊಂಚ ಡುಮ್ಮಿಯೆನಿಸಿದರೂ ಪ್ರೇಯಸಿ ಸೌಂದರ್ಯದ ಖನಿ. ಅವಳ ಮೋಹಕ ಹೆಸರು ರಾಯಲ್ ಎನ್ ಫೀಲ್ಡ್. ಯೌವನದಲ್ಲಿ ಸ್ಪೀಡಾಗಿ ರೈಡ್ ಮಾಡಲು ಗೌಡರು ಬಳಸುತ್ತಿದ್ದ ಬುಲೆಟ್ ಬೈಕ್.

ಇಂದು ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಡಿವಿ ಸದಾನಂದ ಗೌಡರು ಘಟ್ಟದ ಕೆಳಗೆ ಮಾಡುತ್ತಿದ್ದ ಬುಲೆಟ್ ಬೈಕ್ ಆನಂದ ಸವಾರಿಯನ್ನು ಮರೆತಿರಲಾರರು. ಹಳೆಯ ಬೈಸಿಕಲ್, ಹಳೆಯ ವಾಚು, ಹಳೆಯ ಸ್ಕೂಟರ್, ಹಳೆಯ ಗೆಳತಿ ಇವೆಲ್ಲ ಸವಿನೆನಪುಗಳೇ. ಸವಿನೆನಪಿಗೂ ಪ್ರೇಯಸಿಗೂ ಹೆಚ್ಚು ವ್ಯತ್ಯಾಸವಿಲ್ಲ. ಈ ಪ್ರೇಯಸಿಯ ಕಥೆ ಓದಿದರೆ ಅವರ ಪತ್ನಿ ಡಾಟಿ ಅವರಿಗೆ ಮತ್ಸರ ಉಂಟಾದರೆ ಆಶ್ಚರ್ಯವಿಲ್ಲ.

ಡಿವಿಗೆ ವೇಗವಾಗಿ ಠೀವಿಯಿಂದ ಬುಲೆಟ್ ಸವಾರಿ ಮಾಡುವುದು ಇಷ್ಟವಾಗಿತ್ತು. ಹಳೆಯ ಸ್ಕೂಟರ್ ಕೂಡ ಈಗ ದೇವರಗುಂಡ ಮನೆಯಲ್ಲಿದೆಯಂತೆ. ಬುಲೆಟ್ ಮೂಲಕ ಸ್ಪೀಡಾಗಿ ದೇವರಕುಂಡ, ಜಾಲ್ಸೂರು, ಸುಳ್ಯ, ಪುತ್ತೂರು ಮಾರ್ಗದಲ್ಲಿ ಸಾಗುತ್ತಿದ್ದರು ಅಂತ ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ.

ಡಿವಿ ಮಾತ್ರವಲ್ಲದೇ ಹೆಚ್ಚಿನ ರಾಜಕಾರಣಿಗಳಿಗೆ ಬುಲೆಟ್ ಬೈಕ್ ಅಂದ್ರೆ ಇಷ್ಟ. ರಾಜಕಾರಣಿಗಳಿಗೆ ಬುಲೆಟ್ ಬೈಕೆಂದರೆ ಪ್ರತಿಷ್ಠೆಯ ವಿಷಯವೂ ಹೌದು. ಈಗಲೂ ಹೆಚ್ಚಿನ ರಾಜಕಾರಣಿಗಳಲ್ಲಿ ಇಂತಹ ಬೈಕ್ ಗಳಿವೆ. ಕೆಲವು ರಾಜಕಾರಣಿಗಳು ಬುಲೆಟಿನಿಂದ ಲಕ್ಷುರಿ ಕಾರುಗಳಿಗೆ ಶಿಫ್ಟ್ ಆಗಿದ್ದಾರೆ.

ರಾಜಕಾರಣಿಗಳು ಸೇರಿದಂತೆ ಹೆಚ್ಚಿನವರಿಗೆ ಬುಲೆಟ್ ಬೈಕ್ ಇಷ್ಟವಾಗಲು ಕಾರಣ ಅದರ ಗತ್ತು, ಅದರ ಸದ್ದು, ರಾಜಗಾಂಭಿರ್ಯ, ವಿನ್ಯಾಸ, ಬೃಹತ್ ಆಕೃತಿ. ಈಗ ಭಾರತದಲ್ಲಿ ಹತ್ತು ಹಲವು ವಿನೂತನ ಮಾದರಿಗಳ ಎನ್ ಫೀಲ್ಡ್ ಬೈಕ್ ಗಳು ದೊರಕುತ್ತಿವೆ. ಶೀಘ್ರದಲ್ಲಿ 750 ಸಿಸಿ ಮತ್ತು 1000 ಸಿಸಿ ಬುಲೆಟ್ ಗಳೂ ಬರಲಿವೆ.

ಬುಲೆಟ್ ಎನ್ ಫೀಲ್ಡ್ ಭಾರತಕ್ಕೆ ಬಂದದ್ದು ಸೇನಾ ಅವಶ್ಯಕತೆಗಾಗಿ. 1975ರ ಸಮಯದಲ್ಲಿ ಭಾರತ ಸರಕಾರ ಪೊಲೀಸ್ ಮತ್ತು ಸೇನಾ ಅವಶ್ಯಕತೆಗಾಗಿ ಸೂಕ್ತವೊಂದರ ಬೈಕೊಂದರ ಹುಡುಕಾಟದಲ್ಲಿತ್ತು. ಆಗ ಕಣ್ಣಿಗೆ ಬಿದ್ದದ್ದು ಇಂಗ್ಲೆಂಡ್ ನ ಎನ್ ಫೀಲ್ಡ್. ಆರಂಭದಲ್ಲಿ 500 ಬೈಕ್ ಗಳನ್ನು ತರಿಸಿಕೊಳ್ಳಲಾಗಿತ್ತು.

ನಂತರ ಸರಕಾರಕ್ಕೆ ಇನ್ನಷ್ಟು ಬೈಕ್ ಅವಶ್ಯಕತೆ ಬಿತ್ತು. ಹೆಚ್ಚು ಆಮದು ಮಾಡಿಕೊಳ್ಳುವುದಕ್ಕಿಂತ ಇಲ್ಲೇ ಉತ್ಪಾದನೆ ಮಾಡೋಣ ಎಂದು ಕಂಪನಿ ಮತ್ತು ಸರಕಾರ ನಿರ್ಧರಿಸಿತ್ತು. ಹೀಗೆ 350 ಸಿಸಿ ಬೈಕ್ ಗಳಿಗೆ ಪರವಾನಿಗೆ ಪಡೆದು ಭಾರತದಲ್ಲಿ ಕಂಪನಿ ಉತ್ಪಾದನೆ ಆರಂಭಿಸಿ ದೇಶದ ರಸ್ತೆಯ ರಾಜನಾಗಿ ಮೆರೆಯಿತು. ಮತ್ತೆ ಈ ರಾಜಾ ಬೈಕ್ ಹಿಂತಿರುಗಿ ನೋಡಲೇ ಇಲ್ಲ. ಇಂದಿನವರೆಗೂ ಒಂದಿಷ್ಟು ಗಾಂಭಿರ್ಯ ಕಳೆದುಕೊಳ್ಳದೇ ರೈಡ್ ಮಾಡುತ್ತಲೇ ಇದೆ.

Most Read Articles

Kannada
English summary
Chief Minister of Karnataka D V Sadananda gowda ( 56) has a passion for speed and thrill. His favorite bike has always been Royal Enfield. Now he may travel in luxury car but always cherish good old days zoom on Bullet in green belts of Dakshina Kannada district.
Story first published: Saturday, June 30, 2012, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X