ಪಲ್ಸರ್, ಡಿಸ್ಕವರ್ ಸಾಥ್, ಬಜಾಜ್ ಮಾರಾಟ ಹೆಚ್ಚಳ

Posted By:

ಕಳೆದ ತಿಂಗಳು ಬಜಾಜ್ ಆಟೋ ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಅಂದರೆ ಕಂಪನಿಯು ಅಕ್ಟೋಬರ್ ನಲ್ಲಿ 3,51,083 ವಾಹನ ಮಾರಾಟ ಮಾಡಿ ಶೇಕಡ 6.46ರಷ್ಟು ಏರಿಕೆ ಕಂಡಿದೆ. ದೀಪಾವಳಿ ಸಮಯಕ್ಕೆ ಹೆಚ್ಚಿನ ಗ್ರಾಹಕರು ಪಲ್ಸರ್ ಮತ್ತು ಡಿಸ್ಕವರ್ ಬೈಕ್ ಖರೀದಿಗೆ ಮುಗಿಬಿದ್ದದ್ದು ಕಂಪನಿಯ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕಂಪನಿಯು ಕಳೆದ ವರ್ಷದ ಅಕ್ಟೋಬರ್ ನಲ್ಲಿ 3,29,776 ವಾಹನ ಮಾರಾಟ ಮಾಡಿತ್ತು. ಪಟ್ನಾಗರ್ ಘಟಕದಲ್ಲಿ ಕರ್ಪ್ಯೂ ವಿಧಿಸಿದ ಹಿನ್ನಲೆಯಲ್ಲಿ ಸುಮಾರು 25 ಸಾವಿರ ಬೈಕ್ ಉತ್ಪಾದನೆಗೆ ಹೊಡೆತ ನೀಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ನೂತನ ಪಲ್ಸರ್ ಬೈಕೊಂದನ್ನು ಕಂಪನಿಯು ಶೀಘ್ರದಲ್ಲಿ ಹೊರತರಲಿದೆ ಎಂದು ವರದಿಗಳು ಹೇಳಿವೆ. ಇದು ಕೂಡ ಮಾರಾಟದ ಮೇಲೆ ಕೊಂಚ ಹಿನ್ನಡೆ ನೀಡಿದೆ. ಆದರೂ ಮಾರಾಟ ಇಳಿಕೆ ಕಂಡಿಲ್ಲ ಅನ್ನೋದು ಕಂಪನಿಗೆ ಸಿಹಿಸುದ್ದಿ. ಈ ವರ್ಷದ ಅಂತ್ಯದಲ್ಲಿ ನೂತನ ಪಲ್ಸರ್ ರಸ್ತೆಗಿಳಿಯುವ ನಿರೀಕ್ಷೆಯಿದೆ.

English summary
Bajaj Auto, India's second highest selling two wheeler manufacturer has said this October's sales had bested all previous sales records achieved in October. In its press release, Bajaj has said its sales had increased by 6.46 per cent to 351,083 units.
Story first published: Saturday, November 5, 2011, 12:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark