ಮಹೀಂದ್ರ ಸ್ಟಾಲಿಯೊ ಬೈಕ್: ಶೀಘ್ರದಲ್ಲಿ ಮತ್ತೆ ರಸ್ತೆಗೆ

ಇದಕ್ಕೂ ಮುನ್ನ ಒಮ್ಮೆ ಸ್ಟಾಲಿಯೊ ರಸ್ತೆಗಿಳಿದಿತ್ತು. ಆದರೆ ಕೆಲವೇ ದಿನಗಳಲ್ಲಿ ಕಂಪನಿ ಉತ್ಪಾದನೆ ಸ್ಥಗಿತಗೊಳಿಸಿತ್ತು. ಯಾಕೆಂದರೆ ಈ ಬೈಕ್ ಗ್ರಾಹಕರನ್ನು ತೃಪ್ತಿಪಡಿಸುವಲ್ಲಿ ವಿಫಲವಾಗಿತ್ತು. ಅದರ ಗೇರ್ ಬಾಕ್ಸ್ ನಲ್ಲಿ ಸಮಸ್ಯೆಗಳಿವೆ ಎಂದು ಹಲವು ಗ್ರಾಹಕರು ದೂರು ಸಲ್ಲಿಸಿದ್ದರು. ಜೊತೆಗೆ ಅದರ ಸಸ್ಪೆನ್ಷನ್ ಬಗ್ಗೆಯೂ ದೂರುಗಳಿದ್ದವು.
ಈ ಎಲ್ಲ ಕಾರಣಗಳಿಂದ ಕಂಪನಿಯು ಪ್ರಸಕ್ತ ವರ್ಷ ಡಿಸೆಂಬರ್ ನಲ್ಲಿ ಸ್ಟಾಲಿಯೊ ಉತ್ಪಾದನೆ ಸ್ಥಗಿತಗೊಳಿಸಿತ್ತು. ಆದರೆ ಸ್ಟಾಲಿಯೊ ಬೈಕಿನ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಮತ್ತೆ ರಸ್ತೆಗೆ ತರುವುದಾಗಿ ಕಂಪನಿಯು ಭರವಸೆ ನೀಡಿತ್ತು. ಇದೀಗ ಸುಮಾರು 9 ತಿಂಗಳ ನಂತರ ಸ್ಟಾಲಿಯೊ ಮತ್ತೆ ರಸ್ತೆಗಿಳಿಯಲಿದೆ.
ನೂತನ ಬೈಕ್ ಸಾಕಷ್ಟು ಅಪ್ ಗ್ರೇಡ್ ಆಗಿದೆ ಎಂದು ಮಹೀಂದ್ರ ಟೂವಿಲ್ಹರ್ಸ್ ಖಚಿತ ಪಡಿಸಿದೆ. ಕಂಪನಿಯು ಸ್ಟಾಲಿಯೊ ಬೈಕ್ ಮತ್ತೆ ಅನಾವರಣ ಮಾಡುವ ಕುರಿತು ಪ್ರಕಟಿಸಿದೆ. ಆದರೆ ಮೊಜೊ ಕಾನ್ಸೆಪ್ಟ್ ಬೈಕ್ ಉತ್ಪಾದನೆ ಯಾವಾಗ ಆರಂಭಿಸಲಾಗುವುದು ಎನ್ನುವ ಪ್ರಶ್ನೆಗೆ ಉತ್ತರಿಸಿಲ್ಲ.


Click it and Unblock the Notifications








