ಬಾಲಿವುಡ್ ನಟಿ ಅನುಷ್ಕಾ ಈಗ ಸ್ಕೂಟಿ ಬ್ಯೂಟಿ

Posted By:
ಚೆನ್ನೈ ಮೂಲದ ಟಿವಿಎಸ್ ಮೋಟರ್ಸ್ ಕಂಪನಿಯು ತನ್ನ ಸ್ಕೂಟಿ/ಸ್ಕೂಟರುಗಳಿಗೆ ನೂತನ ಬ್ರಾಂಡ್ ಅಂಬಾಸಡರ್ ಆಗಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರನ್ನು ನೇಮಕಮಾಡಿಕೊಂಡಿದೆ. "ಯುವ ಜನತೆಯನ್ನು ಸೆಳೆಯುವ ಮೂಲಕ ಕಂಪನಿಯ ಬ್ರಾಂಡ್ ಮೌಲ್ಯ ಹೆಚ್ಚಿಸುವ ಉದ್ದೇಶದಿಂದ ಅನುಷ್ಕಾರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಬಾಲಿವುಡ್ ನಟಿಯರನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿಕೊಂಡಿರುವ ಹೀರೊ ಮೊಟೊಕಾರ್ಪ್ ಮತ್ತು ಮಹೀಂದ್ರ ಟೂವೀಲ್ಹರ್ಸ್ ಕಂಪನಿಗಳಿಗೆ ಪೈಪೋಟಿ ನೀಡಲು ಕಂಪನಿ ಈ ನಿರ್ಧಾರಕ್ಕೆ ಬಂದಿದೆ. ದೇಶದಲ್ಲಿ ಕಾಲೇಜು ತರುಣಿಯರಿಗೆ ಈಗಲೂ ಸ್ಕೂಟಿ ಅಚ್ಚುಮೆಚ್ಚು. ಅನುಷ್ಕಾ ಬ್ರಾಂಡ್ ಅಂಬಾಸಡರ್ ಆಗಿರುವುದರಿಂದ ಸ್ಕೂಟಿ ಇನ್ನಷ್ಟು ಯುವಜನತೆಯನ್ನು ಸೆಳೆಯುವ ನಿರೀಕ್ಷೆಯಿದೆ.

"ನಾವು ತಕ್ಷಣದಿಂದ ಅನುಷ್ಕಾ ಶರ್ಮಾರನ್ನು ಸ್ಕೂಟಿ ಬ್ರಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿದ್ದೇವೆ. ದೇಶದ ಯುವತಿಯರಿಗೆ ಅನುಷ್ಕಾ ತನ್ನ ಸೌಂದರ್ಯ, ನಟನೆಯಿಂದ ಐಕಾನ್ ಆಗಿದ್ದು, ಕಂಪನಿಯ ಉತ್ಪನ್ನಗಳನ್ನು ಪ್ರಚಾರಪಡಿಸಲು ಇದು ನೆರವಾಗಲಿದೆ" ಎಂದು ಟಿವಿಎಸ್ ಮೋಟರ್ ಕಂಪನಿ ಅಧ್ಯಕ್ಷರಾದ ಎಚ್.ಎಸ್ ಗೊಯಿಂಡಿ ಹೇಳಿದ್ದಾರೆ.

ಕಂಪನಿಯು ಅನುಷ್ಕಾ ಶರ್ಮಾರನ್ನು 2005ರಲ್ಲಿಯೇ ಕಂಪನಿಯ ಜಾಹೀರಾತುಗಳಿಗೆ ಬಳಸಿಕೊಳ್ಳಲು ಆರಂಬಿಸಿದೆ. "ನಾನು ಬ್ರಾಂಡ್ ಅಂಬಾಸಡರ್ ಆಗುವ ಮೂಲಕ ಮತ್ತೆ ನನ್ನ ಮನೆಗೆ ವಾಪಸ್ ಬಂದಂತೆ ಆಗಿದೆ. ಟಿವಿಎಸ್ ಸ್ಕೂಟಿ ದೇಶದ ಯುವತಿಯರ ಆತ್ಮವಿಶ್ವಾಸ ಹೆಚ್ವುವಂತಹ ಸ್ಕೂಟಿಗಳ ಮೂಲಕ ಜನಪ್ರಿಯವಾಗಿದೆ. ಸ್ಕೂಟಿ ರಾಯಭಾರಿಯಾಗುವ ಅವಕಾಶ ದೊರಕಿದ್ದು ನನಗೆ ಅತೀವ ಸಂತಸ ತಂದಿದೆ" ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ಹೀರೊ ಮೊಟೊಕಾರ್ಪ್ ಕಂಪನಿಗೆ ಪ್ರಿಯಾಂಕ ಚೋಪ್ರಾ ಮತ್ತು ಮಹೀಂದ್ರ ಟೂವೀಲ್ಹರ್ಸ್ ಕಂಪನಿಗೆ ಕರೀನಾ ಕಪೂರ್ ಬ್ರಾಂಡ್ ರಾಯಭಾರಿಗಳಾಗಿದ್ದಾರೆ. ಇದೀಗ ಈ ಬಳಗಕ್ಕೆ ಅನುಷ್ಕಾ ಶರ್ಮಾ ಜೊತೆಯಾಗಿದ್ದಾರೆ.

English summary
TVS the Chennai based two wheeler manufacturer has added some oomph to its brand image by roping in Bollywood actress Anushka Sharma as the brand ambassador for its Scooty range of scooters. TVS in its statement has said that Anushka's signing as its brand ambassador was aimed to strengthen its brand image among the youth.
Story first published: Tuesday, June 12, 2012, 12:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark