ಬೆಂಗ್ಳೂರು ಕಬ್ಬನ್ ಪಾರ್ಕಲ್ಲಿ ಕ್ಲಾಸಿಕ್ ಸ್ಕೂಟರ್ ಕೂಟ

ಹಳೆಯ ಸ್ಕೂಟರ್ ನೆನಪಿಸಿಕೊಳ್ಳಿ ಅಂದ್ರೆ ಕಣ್ಣಮುಂದೆ ಸಾಲು ಸಾಲು ವಿಂಟೇಜ್ ಸ್ಕೂಟರುಗಳು ಮೂಡುತ್ತವೆ. ಸಾಹಿತ್ಯಾಸಕ್ತರಿಗೆ ಪೂರ್ಣಚಂದ್ರ ತೇಜಸ್ವಿ ಸ್ಕೂಟರ್ ನೆನಪಾದೀತು. ಅಥವಾ ಅಜ್ಜ, ಮಾವ, ಚಿಕಪ್ಪ, ಮೇಸ್ಟ್ರು ಬಳಸುತ್ತಿದ್ದ ಸ್ಕೂಟರುಗಳು ನೆನಪಾಗಬಹುದು.

ಬೆಂಗಳೂರಿನಲ್ಲಿ ಹಳೆಯ ಸ್ಕೂಟರ್ ಬಳಸುವರ ಕೂಟವೊಂದಿದೆ. ಬೆಂಗಳೂರು ಕ್ಲಾಸಿಕ್ ಸ್ಕೂಟರ್ ಕ್ಲಬ್ ಅಂತ ಅದರ ಹೆಸರು. ನಿನ್ನೆ ಅಂದರೆ ಏಪ್ರಿಲ್ ಒಂದರ ಭಾನುವಾರ ಇವರು ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರೆರಿ ಬಳಿ ಸೇರಿದ್ದರು.

ಲೈಬ್ರೆರಿ ಮುಂದೆ ಹಳೆಯ ಚೇತಕ್, ಲ್ಯಾಂಬಿ, ಲ್ಯಾಂಬ್ರೆಟಾ ಎಕ್ಸೆಟ್ರಾ ಸ್ಕೂಟರುಗಳು ಹೊಸ ಗತ್ತಿನಿಂದ ಸಾಲಾಗಿದ್ದವು. "ನಾವು ಪ್ರತಿ ಎರಡು ತಿಂಗಳಿಗೊಂದು ಸರ್ತಿ ಇಲ್ಲಿ ಸೇರುತ್ತೇವೆ" ಎಂದು ಕ್ಲಾಸಿಕ್ ಕೂಟದ ಸದಸ್ಯರೊಬ್ಬರು ಹೇಳುತ್ತಾರೆ.

ಕೂಟವೆಂದ ಮೇಲೆ ಏನಾದ್ರು ಚರ್ಚೆ, ಮಾತುಕತೆ ಇರಬೇಕಲ್ವ? ಇವರು ಹಳೆಯ ಸ್ಕೂಟರಿನೊಂದಿಗಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಯಾವ ರೀತಿಯಾಗಿ ಇದನ್ನು ಅತ್ಯುತ್ತಮವಾಗಿ ಮೇಟೆಂನ್ ಮಾಡಬಹುದು ಎನ್ನುವುದರ ಕುರಿತು ಚರ್ಚಿಸುತ್ತಾರೆ.

ಇಲ್ಲಿ 1950ರ ಮಾಡೆಲಿನಿಂದ ಹಿಡಿದು 2000ನೇ ಇಸವಿಯವರೆಗೆ ದೇಶದ ರಸ್ತೆಯಲ್ಲಿ ಮೆರೆದ ಸ್ಕೂಟರುಗಳು ಇಲ್ಲಿ ಜೊತೆ ಸೇರುತ್ತವೆ. ಬಜಾಜ್ ಚೇತಕ್, ಕಬ್, ವೆಸ್ಪಾ, ಲ್ಯಾಂಬ್ರೆಟಾ, ಲ್ಯಾಂಬಿ, ವಿಜಯ್ ಸೂಪರ್ಸ್ ಸ್ಕೂಟರುಗಳು ಬೊಚ್ಚುಬಾಯಿಯ ಅಜ್ಜಿ ನಕ್ಕಂತೆ ಆಪ್ತತೆ ಮೂಡಿಸುತ್ತವೆ.

ಆರಂಭದಲ್ಲಿ ಇವರು ಟೀಮ್ ಬಿಎಚ್ ಪಿ ಜೊತೆಗಿದ್ದರು. 40-50 ಸದಸ್ಯರಾದಾಗ ಪ್ರತ್ಯೇಕವಾಗಿ ಬೆಂಗಳೂರು ಕ್ಲಾಸಿಕ್ ಸ್ಕೂಟರ್ ಕ್ಲಬ್ ಮಾಡಿಕೊಂಡರು. ಉಪೇಕ್ಷೆ, ಅಸಡ್ಡೆ, ಅಲಕ್ಷ್ಯ ಮಾಡದೇ ಹಳೆಯ ಸ್ಕೂಟರನ್ನು ಉಳಿಸಿಕೊಳ್ಳುವುದು ಈ ಕೂಟದ ಪ್ರಮುಖ ಉದ್ದೇಶ.

ನಿಮ್ಮ ಮನೆಯಲ್ಲೂ ಹಳೆಯ ಸ್ಕೂಟರ್ ಇತ್ತಾ? ಅದನ್ನು ಯಾರು ಬಳಸುತ್ತಿದ್ದರು? ಅದು ಈಗಲೂ ಇದೆನಾ? ನೆನಪುಗಳನ್ನು ಹಂಚಿಕೊಳ್ಳಿ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
Bangalore Classic Scooter Club Members showcased Bajaj Chetaks, Vespas, and Lambrettas etc Scooters in front of Cubbon Park Central Library, on April 1 Sunday 2012.
Story first published: Monday, April 2, 2012, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X