ಹೋಂಡಾ ಬಿಟ್ಮೇಲೆ ಹೀರೋಗೆ ಎವಿಎಲ್ ಎಂಜಿನ್!

ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೊಟೊಕಾರ್ಪ್ ಸಾಧ್ಯವಾದಷ್ಟು ಜಪಾನಿನ ಹೋಂಡಾದಿಂದ ದೂರವಿರಲು ಪ್ರಯತ್ನಿಸುತ್ತಿದೆ. ಕಳೆದ ವರ್ಷವೇ ಮೈತ್ರಿಕಡಿದು ಹೋದರೂ ಕಂಪನಿಯು ಎಂಜಿನ್ ತಂತ್ರಜ್ಞಾನವನ್ನು ಹೋಂಡಾದಿಂದ ಪಡೆದುಕೊಳ್ಳುತ್ತಿದೆ. ಆದರೆ ಇದೀಗ ಯುರೋಪಿನ ಎವಿಎಲ್ ಎಂಜಿನ್ ಕಂಪನಿಯೊಂದಿಗೆ ಹೀರೋ ಮೊಟೊಕಾರ್ಪ್ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆಯನ್ನು ಕೆಲವು ವರದಿಗಳು ವ್ಯಕ್ತಪಡಿಸಿವೆ.

ಹೋಂಡಾದ ನೆರವಿಲ್ಲದೇ ಹೀರೋ ಗೆಲುವು ಸಾಧಿಸಲು ಸಾಧ್ಯವಿಲ್ಲವೆಂದು ಹಲವು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಯಾಕೆಂದರೆ ಹೀರೋ ತನ್ನದೇ ಆದ ಸ್ವತಂತ್ರ ತಂತ್ರಜ್ಞಾನವನ್ನು ಹೊಂದಿಲ್ಲ. ಹೀಗಾಗಿ ಕಂಪನಿಯು ಎವಿಎಲ್ ಮೂಲಕ ಎಂಜಿನ್ ತಂತ್ರಜ್ಞಾನ ಪಡೆದು ಹೋಂಡಾಕ್ಕೆ ದೊಡ್ಡ ನಮಸ್ಕಾರ ಹೇಳುವ ನಿರೀಕ್ಷೆಯಿದೆ.

ಎವಿಎಲ್ ಎನ್ನುವುದು ವಿಶ್ವದ ಬೃಹತ್ ಎಂಜಿನ್ ತಯಾರಿಕಾ ಕಂಪನಿಯಾಗಿದೆ. ಆಸ್ಟ್ರೇಲಿಯಾ ಮೂಲದ ಎವಿಎಲ್ ಜಗತ್ತಿನ ಪ್ರಮುಖ ವಾಹನ ಕಂಪನಿಗಳಿಗೆ ಎಂಜಿನ್ ಮಾರಾಟ ಮಾಡುತ್ತಿದೆ. "ಎವಿಎಲ್ ಜೊತೆ ಕಾರ್ಯತಂತ್ರ ಪಾಲುದಾರಿಕೆ ಮಾಡಿಕೊಳ್ಳುವ ಕುರಿತು ಪರಿಶೀಲಿಸುತ್ತಿದ್ದೇವೆ" ಎಂದು ಹೀರೋ ಮೊಟೊಕಾರ್ಪ್ ಎಂಡಿ ಪವನ್ ಮುಂಜಾಲ್ ಹೇಳಿದ್ದಾರೆ.

ಹೀರೋ ಕಂಪನಿಯು ಎವಿಎಲ್ ಜೊತೆ ಮೈತ್ರಿಮಾಡಿಕೊಂಡರೆ ಸ್ಪ್ಲೆಂಡರ್ ಮತ್ತು ಪ್ಯಾಷನ್ ಬೈಕುಗಳಿಗೆ 100ಸಿಸಿ ಎಂಜಿನ್ ಅಭಿವೃದ್ಧಿಪಡಿಸಲು ನೆರವಾಗಲಿದೆ. ಇದರೊಂದಿಗೆ 150ಸಿಸಿ ಸೆಗ್ಮೆಂಟ್ ಬೈಕುಗಳಿಗೂ ನೂತನ ತಂತ್ರಜ್ಞಾನದ ಎಂಜಿನ್ ದೊರಕುವ ನಿರೀಕ್ಷೆಯಿದೆ.

Most Read Articles

Kannada
English summary
Hero MotoCorp, India's leading two wheeler manufacturer has decided to completely sever its ties with long time partner Honda. Hero has to still rely on Honda to get engine technology despite having split as independent manufacturers last year. But reports say Hero is now looking to develop its own engines with the help of European engine manufacturer AVL.
Story first published: Monday, March 12, 2012, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X