ಹೀರೋ ಮೊಟೊಕಾರ್ಪ್ ವಾಹನ ಮಾರಾಟ ಹೆಚ್ಚಳ
ಕಳೆದ ಕೆಲವು ಸಮಯದಿಂದ ಕಂಪನಿಯ ತಿಂಗಳ ವಾಹನ ಮಾರಾಟ 5 ಸಾವಿರ ಯುನಿಟಿಗಿಂತ ಹೆಚ್ಚಿದೆ. ಇದು ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಂಪನಿಯ ದ್ವಿಚಕ್ರ ವಾಹನ ಮಾರಾಟ ಸುಮಾರು 60 ಲಕ್ಷ ಯುನಿಟಿಗೆ ಹತ್ತಿರ ತಲುಪಲು ನೆರವಾಗಿದೆ.
"2011-12ರ ಆರ್ಥಿಕ ವರ್ಷದಲ್ಲಿ ಕಂಪನಿಯು 54,02,444 ಯುನಿಟ್ ಬೈಕ್ ಮತ್ತು ಸ್ಕೂಟರ್ ಮಾರಾಟ ಮಾಡಿದೆ. 26 ವರ್ಷದಿಂದ ಪಾಲುದಾರನಾಗಿದ್ದ ಹೋಂಡಾ ಕಂಪನಿಯನ್ನು ಬಿಟ್ಟಮೇಲೆಯೂ ಕಂಪನಿಯ ಪ್ರಗತಿ ಸಕಾರಾತ್ಮಕವಾಗಿದೆ" ಎಂದು ಕಂಪನಿಯು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಪ್ರಸಕ್ತ ಆರ್ಥಿಕ ವರ್ಷವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಂಪನಿಯ ಸಿಇಒ ಪವನ್ ಮುಂಜಾಲ್ ಹೇಳಿದ್ದಾರೆ. ಯಾಕೆಂದರೆ ಕಂಪನಿಯು ಈ ಸಮಯದಲ್ಲಿ ಹೋಂಡಾದಿಂದ ಬೇರ್ಪಟ್ಟು ಹೊಸ ಬ್ರಾಂಡ್ ಇಮೇಜ್, ಹೊಸ ಲೊಗೊ, ಹೊಸ ಉತ್ಪನ್ನಗಳನ್ನು ಪರಿಚಯಿಸಿತ್ತು.
ಹೀರೋ ಮೊಟೊಕಾರ್ಪ್ ಕಂಪನಿಯ ಸ್ಪ್ಲೆಂಡರ್ ಮತ್ತು ಪ್ಯಾಷನ್ ಬೈಕುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಈ ಬೈಕುಗಳು ಕೈಗೆಟುಕುವ ದರ, ಸುಲಭ ನಿರ್ವಹಣೆ, ಅತ್ಯುತ್ತಮ ಮೈಲೇಜ್ ಕಾರಣಗಳಿಂದ ಇನ್ನೂ ಬೆಸ್ಟ್ ಸೆಲ್ಲರ್ ಖ್ಯಾತಿಯನ್ನು ಉಳಿಸಿಕೊಂಡಿವೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









