ಹೋಂಡಾ ಬಿಟ್ಟ ಹೀರೋಗೆ ಹೊಸ ಪಾಲುದಾರ

"ಹೊಸ ಒಪ್ಪಂದದ ಪ್ರಕಾರ, ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ಮತ್ತು ಭವಿಷ್ಯದ ಮಾಡೆಲ್ ವಾಹನಗಳಿಗೆ ವಿನ್ಯಾಸವನ್ನು ಇಬಿಆರ್ ನಿಂದ ಪಡೆಯಲಿದ್ದೇವೆ" ಎಂದು ಹೀರೋ ಮೊಟೊಕಾರ್ಪ್ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಜಪಾನಿನ ಹೋಂಡಾದೊಂದಿಗೆ 26 ವರ್ಷದ ಮೈತ್ರಿಯನ್ನು ಕಡಿದುಕೊಂಡಿತ್ತು.
ಜಪಾನಿನ ಹೋಂಡಾ ಮೋಟಾರ್ ಕಾರ್ಪೊರೇಷನ್ ಮೈತ್ರಿ ಕಡಿದುಕೊಂಡ ನಂತರ ಹೀರೋಮೊಟೊಕಾರ್ಪ್ ತಾಂತ್ರಿಕ ಹಾಗೂ ವಿನ್ಯಾಸದಲ್ಲಿ ಪರಿಣತ ಜಾಗತಿಕ ಕಂಪೆನಿಯೊಂದರ ಪಾಲುದಾರಿಕೆ ಪಡೆಯಲು ಹುಡುಕಾಟ ನಡೆಸುತ್ತಿತ್ತು.


Click it and Unblock the Notifications








