ಹೀರೊ ಇಂಪಲ್ಸ್, ಇಗ್ನಿಟರ್, ಮ್ಯಾಸ್ಟ್ರೊ ಮಾರಾಟ ಸ್ಥಗಿತ!

Posted By:
ನವದೆಹಲಿ, ಸೆ 8: ದೇಶದ ಮಾರುಕಟ್ಟೆಯಲ್ಲಿ ಇಂಪಲ್ಸ್, ಇಗ್ನಿಟರ್ ಬೈಕ್ ಮತ್ತು ಮ್ಯಾಸ್ಟ್ರೋ ಸ್ಕೂಟರ್ ಮಾರಾಟವನ್ನು ಕೆಲವು ಸಮಯದ ನಂತರ ನಿಲ್ಲಿಸಲು ಹೀರೊ ಮೊಟೊಕಾರ್ಪ್ ನಿರ್ಧರಿಸಿದೆ. ಹೋಂಡಾ ಕಂಪನಿಯ ಜೊತೆಗಿನ ತಾಂತ್ರಿಕ ಸಹಕಾರ ಒಪ್ಪಂದ ಮುಗಿಯಲಿರುವುದರಿಂದ ಹೀರೊ ಮೊಟೊಕಾರ್ಪ್ ಈ ನಿರ್ಧಾರಕ್ಕೆ ಬಂದಿದೆ.

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಇಂಪಲ್ಸ್, ಇಗ್ನಿಟರ್, ಮ್ಯಾಸ್ಟ್ರೊ ಶ್ರೇಣಿಯ ದ್ವಿಚಕ್ರವಾಹನ ಮಾರಾಟ ಮಾಡಲು ಆರಂಭಿಸಿದೆ. ಇದನ್ನು ಭಾರತಕ್ಕೂ ಪರಿಚಯಿಸುವ ಯೋಜನೆಯಲ್ಲಿ ಹೋಂಡಾ ಕಂಪನಿಯಿದೆ.

ಹೀರೊ ಮೊಟೊಕಾರ್ಪ್ ಮತ್ತು ಹೋಂಡಾ ತಾಂತ್ರಿಕ ಸಹಕಾರ ಒಪ್ಪಂದ ಮುಂದಿನ ವರ್ಷ ಕೊನೆಯಾಗಲಿದೆ. ನಂತರ ಈ ಬೈಕುಗಳನ್ನು ಮತ್ತು ಸ್ಕೂಟರನ್ನು ಹೀರೊ ಮೊಟೊಕಾರ್ಪ್ ಮಾರಾಟ ಮಾಡುವಂತಿಲ್ಲ.

"ಕಂಪನಿಯು ಸ್ವತಂತ್ರ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವನ್ನು ನಿರ್ಮಿಸಲಿದೆ. ಯುರೋಪ್ ವಿನ್ಯಾಸ ಮತ್ತು ತಂತ್ರಜ್ಞಾನಕ್ಕಾಗಿ ನಾವು ಹೊಸ ತಂತ್ರಜ್ಞಾನ ಒಪ್ಪಂದಕ್ಕೆ ಪ್ರವೇಶಿಸಲಿದ್ದೇವೆ" ಎಂದು ಹೀರೊ ಮೊಟೊಕಾರ್ಪ್ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಮುಂಜಾಲ್ ಹೇಳಿದ್ದಾರೆ.

ಸುಮಾರು 400 ಕೋಟಿ ರುಪಾಯಿ ಹೂಡಿಕೆಯಲ್ಲಿ ಹೀರೊ ಕಂಪನಿಯು ಜೈಪುರದಲ್ಲಿ ಆರ್ ಆಂಡ್ ಡಿ ಕೇಂದ್ರ ನಿರ್ಮಿಸಲಿದೆ. ಇದಕ್ಕಾಗಿ ಕಂಪನಿಯು ಯುರೋಪ್ ಕಂಪನಿಯೊಂದರ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಿದೆ. ಆ ಕಂಪನಿಯ ಹೆಸರು ಬಹಿರಂಗ ಪಡಿಸಲು ಮುಂಜಾಲ್ ನಿರಾಕರಿಸಿದ್ದಾರೆ.

English summary
Country's largest two wheeler manufacturer Hero MotoCorp has said it will phase out Impulse and Ignitor motorcycles and Maestro scooter after some time as they have been launched with technology assistance from erstwhile partner Honda Motor Co of Japan.
Story first published: Saturday, September 8, 2012, 12:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark