ಆಫ್ರಿಕನ್ನರಿಗೆ ಹೀರೊ ಮೊಟೊಕಾರ್ಪ್ ಬೈಕ್

Posted By:
ದೇಶದ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೊಟೊಕಾರ್ಪ್ ದೃಷ್ಟಿ ಆಫ್ರಿಕಾದತ್ತ ನೆಟ್ಟಿದೆ. ಅಲ್ಲಿ ಘಟಕ ನಿರ್ಮಿಸಿ ಬೈಕುಗಳನ್ನು ಮಾರಾಟ ಮಾಡುವ ಅವಕಾಶಗಳ ಕುರಿತು ಕಂಪನಿ ಗಂಭೀರವಾಗಿ ಚಿಂತಿಸುತ್ತಿದೆ.

"ನಮ್ಮ ಬೈಕುಗಳಿಗೆ ಸಂಭಾವ್ಯ ಮಾರುಕಟ್ಟೆಯಾಗುವ ದೇಶಗಳತ್ತ ನಾವು ಗಮನ ಹರಿಸುತ್ತಿದ್ದೇವೆ. ಕೆಲವು ಕಡೆ ಅಸೆಂಬ್ಲಿ ಘಟಕ ಮತ್ತು ಇನ್ನು ಕೆಲವೆಡೆ ಉತ್ಪಾದನಾ ಘಟಕಾ ನಿರ್ಮಿಸುವ ಕುರಿತೂ ಯೋಜಿಸುತ್ತಿದ್ದೇವೆ" ಎಂದು ಕಂಪನಿಯ ಕಾರ್ಪೊರೆಟ್ ಸೇವೆ ವಿಭಾಗದ ಚೇರ್ಮನ್ ಸುನಿಲ್ ಕಾಂತ್ ಮುಂಜಾಲ್ ಹೇಳಿದ್ದಾರೆ.

"ಇತ್ತೀಚಿನ ವರ್ಷಗಳಲ್ಲಿ ಆಫ್ರಿಕಾದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆ ಗಮನಾರ್ಹವಾಗಿ ಪ್ರಗತಿ ಕಾಣುತ್ತಿದೆ. ಅಲ್ಲಿನ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪ್ರಮುಖ ಪಾಲು ಪಡೆಯಲು ಕಂಪನಿ ಯೋಜಿಸಿದೆ" ಎಂದು ಅವರು ಹೇಳಿದ್ದಾರೆ.

ಆಫ್ರಿಕಾ ಮಾತ್ರವಲ್ಲದೇ ದಕ್ಷಿಣ ಅಮೆರಿಕ, ಆಗ್ನೇಯಾ ಏಷ್ಯಾ ಮತ್ತು ಇನ್ನಿತರ ಪ್ರಗತಿ ಹೊಂದುತ್ತಿರುವ ದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಕಂಪನಿ ಯೋಜಿಸಿದೆ. ಆಫ್ರಿಕಾ ದೇಶಕ್ಕೆ ಕೇವಲ ಪ್ಯಾಷನ್ ಮತ್ತು ಸ್ಪ್ಲೆಂಡರ್ ಪರಿಚಯಿಸಲು ಕಂಪನಿ ಯೋಜಿಸಿದೆ. ಜೊತೆಗೆ ಅಲ್ಲಿನ ಸ್ಥಳೀಯ ಅವಶ್ಯಕತೆಗೆ ಸೂಕ್ತವಾದ ಬೈಕ್ ಉತ್ಪಾದಿಸುವ ಯೋಜನೆಯೂ ಕಂಪನಿಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Indian two wheeler manufacturer Hero MotoCorp has set its eyes on Africa. It is also eying markets in South America, South East Asia and other high growth markets.
Story first published: Thursday, March 22, 2012, 14:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark