ಮಹೀಂದ್ರ 100 ಕೋಟಿ ರು.ನ ಸಂಶೋಧನೆ ಕೇಂದ್ರ

Posted By:

ಮಹೀಂದ್ರ ಗ್ರೂಪ್ ಸುಮಾರು 100 ಕೋಟಿ ರು. ವೆಚ್ಚದ ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಆಂಡ್ ಡಿ) ಕೇಂದ್ರವನ್ನು ಪುಣೆಯಲ್ಲಿ ಉದ್ಘಾಟಿಸಿದೆ. ಇದು ದೇಶದಲ್ಲಿರುವ ಮೂರನೇ ಬೃಹತ್ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಸಮಯದಲ್ಲಿ ಕಂಪನಿಯು ನೂತನ ಉತ್ಪನ್ನಗಳನ್ನು ಅನಾವರಣ ಮಾಡಿದೆ.

ಈ ಕೇಂದ್ರಕ್ಕೆ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ ಸುಮಾರು 500 ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯು ತನ್ನ ಬೈಕುಗಳಿಗೆ ಸ್ವಂತ ವಿನ್ಯಾಸ ಮತ್ತು ಎಂಜಿನ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇದು ನೆರವಾಗಲಿದೆ ಎಂದು ಮಹೀಂದ್ರ ಗ್ರೂಪ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆನಂದ್ ಮಹೀಂದ್ರ ಹೇಳಿದ್ದಾರೆ.

ನೂತನ ಸಂಶೋಧನೆ ಮತ್ತು ಅಭಿವೃಧಿ ಘಟಕದಲ್ಲಿ ಸುಮಾರು 175 ಎಂಜಿನಿಯರುಗಳು ಮತ್ತು ವಿನ್ಯಾಸಗಾರರು ಕಾರ್ಯನಿರ್ವಹಿಸಲಿದ್ದಾರೆ. ಇದು ಭವಿಷ್ಯದ ಉತ್ಪನ್ನಗಳ ವಿನ್ಯಾಸ ಮತ್ತು ತಂತ್ರಜ್ಞಾನಕ್ಕೆ ನೆರವಾಗಲಿದೆ" ಎಂದು ಅವರು ಹೇಳಿದ್ದಾರೆ. "ಕಂಪನಿಯು ಈಗಾಗಲೇ ಡ್ಯೂರೊ ಡಿಝಡ್ ಸ್ಕೂಟರಿಗೆ ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ" ಎಂದರು.

ಇದೇ ಸಮಯದಲ್ಲಿ ಕಂಪನಿಯು ಎರಡು ನೂತನ ಎಂಜಿನ್ ಗಳನ್ನು ಅನಾವರಣ ಮಾಡಿದೆ. ಇದು 110 ಸಿಸಿ ಎಂಜಿನ್ ಮತ್ತು 300 ಸಿಸಿಯ ಲಿಕ್ವಿಡ್ ಕೂಲ್ಡ್ ಎಂಜಿನ್ ಆಗಿದೆ. ಕಂಪನಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರು ನೂತನ ದ್ವಿಚಕ್ರವಾಹನಗಳನ್ನು ಪರಿಚಯಿಸಲು ಉದ್ದೇಶಿಸಿದೆ ಎಂದು ಮಹೀಂದ್ರ ದ್ವಿಚಕ್ರವಾಹನ ವಿಭಾಗದ ಅಧ್ಯಕ್ಷರಾದ ಅನೂಪ್ ಮಾಥುರ್ ಹೇಳಿದ್ದಾರೆ.

ಮಹೀಂದ್ರ ಕಂಪನಿಯು ಇತ್ತೀಚೆಗೆ ರಾಜ್ಯಕ್ಕೆ ರೊಡಿಯೊ ಆರ್ ಝಡ್ ಎಂಬ ಸ್ಕೂಟರನ್ನು ಪರಿಚಯಿಸಿತ್ತು. ನೂತನ 125 ಸಿಸಿಯ ಸ್ಕೂಟರಿಗೆ ರಾಜ್ಯದಲ್ಲಿ 48,930 ರು. ಎಕ್ಸ್ ಶೋರೂಂ ದರವಿದೆ. ಇದು ಪ್ರತಿಲೀಟರಿಗೆ 59.38 ಕಿ.ಮೀ. ಮೈಲೇಜ್ ನೀಡುತ್ತದೆ.

English summary
Mahindra Two Wheelers has inaugurated its Rs 100- crore research and development (R&D) centre here, claimed to be the third largest of its kind in India. The company also unveiled two brand new engines developed at the facility which includes an indigenously developed and tested 110 cc engine and a 300 cc liquid-cooled engine.
Story first published: Thursday, July 5, 2012, 12:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark