ಪಿಯಾಜಿಯೊ ವೆಸ್ಪಾ ಮೈಲೇಜ್ 60 ಕಿ.ಮೀ. ಅಂತೆ!

Posted By:
To Follow DriveSpark On Facebook, Click The Like Button
ಈ ಹಿಂದಿನ ಸ್ಕೂಟರ್ ವಿಮರ್ಶೆಯಲ್ಲಿ ವೆಸ್ಪಾ ಮೈಲೇಜ್ 45 ಕಿ.ಮೀ. ಆಸುಪಾಸಿನಲ್ಲಿರಲಿದೆ ಎಂದಿದ್ದೇವು. ಆದರೆ ಕಂಪನಿಯ ಪ್ರಕಾರ ವೆಸ್ಪಾ ಎಲ್ಎಕ್ಸ್ 125 ಸ್ಕೂಟರಿನ ಗರಿಷ್ಠ ಮೈಲೇಜ್ 60 ಕಿ.ಮೀ. ವೆಸ್ಪಾ ಮಾರಾಟ ಹೆಚ್ಚಿಸಲು ಕಂಪನಿಯು ಮೈಲೇಜನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಿದೆ.

ಪಿಯಾಜಿಯೊ ಕಂಪನಿಯು ಪರಿಚಯಿಸಿದ ವೆಸ್ಪಾ ಸ್ಕೂಟರ್ 125 ಸಿಸಿಯ 4 ಸ್ಟ್ರೋಕ್, 3 ಕವಾಟದ ಎಂಜಿನ್ ಹೊಂದಿದೆ. ಕಂಪನಿಯು ಭಾರತದಂತಹ ಅಭಿವೃದ್ಧಿಹೊಂದಿದ ಮಾರುಕಟ್ಟೆಗಳಿಗಾಗಿ ಈ ಎಂಜಿನ್ ಅಭಿವೃದ್ಧಿಪಡಿಸಿದೆ.

ಹೋಂಡಾ, ಸುಜುಕಿ ಕಂಪನಿಗಳ ಸ್ಕೂಟರುಗಳು ಪ್ರತಿಲೀಟರಿಗೆ 40-50 ಕಿ.ಮೀ. ಮೈಲೇಜ್ ನೀಡುತ್ತಿರುವ ಸಂದರ್ಭದಲ್ಲಿ ವೆಸ್ಪಾ 60 ಕಿ.ಮೀ. ಮೈಲೇಜ್ ನೀಡಿದ್ರೆ ಅಚ್ಚರಿಯ ವಿಷಯ. ಆದ್ರೆ ಹೆಚ್ಚಿನ ವಾಹನ ವಿಶ್ಲೇಷಕರ ಪ್ರಕಾರ ವೆಸ್ಪಾ ಮೈಲೇಜ್ ಅಷ್ಟಿರೊದು ಡೌಟ್. ದೇಶದ ರಸ್ತೆಯ ಸ್ಥಿತಿಗತಿ ನೋಡಿದಾಗ ಮೈಲೇಜ್ ಕಡಿಮೆಯಾಗೋದ್ರಲ್ಲಿ ಸಂದೇಹವೇ ಇಲ್ಲ.

ಆದರೆ ಮೈಲೇಜ್ ಮಾತ್ರ ಹೇಳಿದ್ರೆ ಗ್ರಾಹಕರು ಕೇಳಬಹುದೇ? ಎನ್ನುವುದು ಡೀಲರುಗಳ ಮುಂದಿರುವ ಪ್ರಶ್ನೆ. ಯಾಕೆಂದರೆ ದರ ಕೊಂಚ ದುಬಾರಿಯಾಗಿರುವುದರಿಂದ ಟ್ಯೂಬ್ ಲೆಸ್ ಟೈರ್, ಡಿಸ್ಕ್ ಬ್ರೇಕ್ ಕೊರತೆ ಎದ್ದು ಕಾಣುತ್ತದೆ. ಸಂಪೂರ್ಣ ವಿಮರ್ಶೆ ಓದಿ

English summary
Piaggio claimed 2012 Vespa LX125 automatic scooter Mileage 60 Kmpl. Read Vespa Price, Vespa Mileage, Vespa Review.
Story first published: Monday, April 30, 2012, 11:50 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark