ಹಲೋ ವೆಸ್ಪಾ ಸ್ಕೂಟರ್ ಬಂದಿದೆ, ದರ 66 ಸಾವಿರ ರು.

Posted By:

ಬಹುನಿರೀಕ್ಷಿತ, ಬಹುಚರ್ಚಿತ ಐಕಾನಿಕ ವೆಸ್ಪಾ ಸ್ಕೂಟರ್ ದೇಶದ ರಸ್ತೆಗೆ ಆಗಮಿಸಿದೆ. ಪ್ರೀಮಿಯಂ ಜೀವನಶೈಲಿಯ ವೆಸ್ಪಾ ಸ್ಕೂಟರನ್ನು ಪಿಯಾಗಿಯೊ ಕಂಪನಿಯು ಮಹಾರಾಷ್ಟ್ರದಲ್ಲಿ ಅನಾವರಣ ಮಾಡಿದೆ. ಬೆಂಗಳೂರಿನ ಶೋರೂಂಗಳಿಗೂ ಈಗಾಗಲೇ ವೆಸ್ಪಾ ಆಗಮಿಸಿದೆ.

ನೂತನ ಪಿಯಾಗಿಯೊ ಸ್ಕೂಟರ್ ಮಹಾರಾಷ್ಟ್ರ ಎಕ್ಸ್ ಶೋರೂಂನಲ್ಲಿ ದರ 66.661 ರುಪಾಯಿ. ಬೆಂಗಳೂರು ಶೋರೂಂಗಳಿಗೆ ಈಗಾಗಲೇ ವೆಸ್ಪಾ ಆಗಮಿಸಿದೆ. ಬೆಂಗಳೂರಿನಲ್ಲಿ ದರವೆಷ್ಟು ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಕಂಪನಿಯು ರಾಜ್ಯಕ್ಕೆ ಐಕಾನಿಕ್ ಸ್ಕೂಟರನ್ನು ಔಪಚಾರಿಕವಾಗಿ ಶೀಘ್ರದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button

ವೆಸ್ಪಾ 125 ಎಲ್ಎಕ್ಸ್ ಸ್ಕೂಟರ್ 124 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 10.26 ಹಾರ್ಸ್ ಪವರ್ ಮತ್ತು 9.6 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಸ್ಕೂಟರ್ ಸೆಗ್ಮೆಂಟಿನಲ್ಲಿ ಇದು ಅತ್ಯುತ್ತಮ ಪವರ್.

ನೂತನ ಪಿಯಾಗಿಯೊ ಸ್ಕೂಟರ್ ಸಿವಿಟಿ ಗೇರ್ ಬಾಕ್ಸ್ ಹೊಂದಿದೆ. ಇದರಿಂದ ಹೆಚ್ಚು ಒತ್ತಡವಿಲ್ಲದೇ ಡ್ರೈವ್ ಮಾಡಬಹುದಾಗಿದೆ. ಕಂಪನಿಯು ದೇಶದ ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ವೆಸ್ಪಾ ಪರಿಚಯಿಸಿದೆ.

ಕಂಪನಿಯು ವೆಸ್ಪಾ ಸ್ಕೂಟರ್ ಮಾರಾಟದ ಕುರಿತು ಯಾವುದೇ ಗಮನಾರ್ಹ ನಿರೀಕ್ಷೆ ಹೊಂದಿಲ್ಲ. ಆದರೆ ನೂತನ ವೆಸ್ಪಾ ಸ್ಕೂಟರಿನಿಂದ ಬ್ರಾಂಡ್ ಘನತೆ ಹೆಚ್ಚಾಗುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಸ್ಕೂಟರ್ ಖರೀದಿದಾರರಿಗೆ 66,661 ರುಪಾಯಿ ಕೊಂಚ ದುಬಾರಿ ಎಂದೆನಿಸಬಹುದು. ಆದರೆ ಇದು ಪ್ರೀಮಿಯರ್ ಸೆಗ್ಮೆಂಟಿನಲ್ಲಿ ಆಗಮಿಸಿರುವ ಕಾರಣ ದುಬಾರಿಯಾಗಿದೆ. ಕಂಪನಿಯು ವೆಸ್ಪಾ ಮಾರಾಟ ಹೆಚ್ಚಿಸಲು ದೇಶದಲ್ಲಿ ಸುಮಾರು 35 ಹೊಸ ಶೋರೂಂಗಳನ್ನು ತೆರೆಯಲಿದೆಯಂತೆ.

English summary
Piaggio launched its premium lifestyle scooter Vespa 125 LX with a price tag of Rs.66,661 (ex showroom, Maharashtra). The Piaggio Vespa was launched in Maharashtra this morning. It is powered by a 124cc single cylinder engine capable of generating 10.26bhp of power and 9.6Nm of torque. Such power and torque w
Story first published: Thursday, April 26, 2012, 13:25 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark