ದೇಶದ ಟಾಪ್ 10 ಬಜೆಟ್ ಬೈಕ್‌ಗಳು

ಇಂಧಿನ ಯಾಂತ್ರಿಕ ಯುಗದಲ್ಲಿ ಜನಸಾಮಾನ್ಯರ ದೈನಂದಿನ ದಿನ ಬಳಕೆಯಲ್ಲಿ ಬೈಕ್ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಹಾಗಾಗಿ ಬೈಕ್‌ಗಳನ್ನು ಜನರು ಅತಿ ಹೆಚ್ಚು ಆಶ್ರಯಿಸಿರುತ್ತಾರೆ. ಹಳ್ಳಿಗಳಿಂದ ಹಿಡಿದು ಅಲ್ಲಿ ದೂರದ ಪಟ್ಟಣದ ವರೆಗೂ ರಸ್ತೆಗಳಲ್ಲಿ ಬೈಕ್ ಅಬ್ಬರ ಕಾಣಸಿಗುವುದು ಸಾಮಾನ್ಯ.

ಹಾಗಿರುವಾಗ ದೇಶದ ಟಾಪ್ 10 ಬೈಕ್‌ಗಳ ಕುರಿತು ಮಾಹಿತಿ ನೀಡುವ ಪ್ರಯತ್ನವನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಮಾಡಿದೆ. ದರದಿಂದ ಹಿಡಿದು ಉತ್ತಮ ಇಂಧನ ದಕ್ಷತೆ, ವಿನ್ಯಾಸ, ನಿರ್ವಹಣೆ ಹಾಗೂ ಮೈಲೇಜ್‌ಗೆ ಹೆಚ್ಚಿನ ಮಹತ್ವ ಕೊಟ್ಟು ಬಜೆಟ್ ಬೈಕ್ ಲಿಸ್ಟ್ ತಯಾರಿಸಲಾಗಿದೆ.

ಇದರಲ್ಲಿ ಎಲ್ಲ ಬ್ರಾಂಡ್‌ಗಳ ಬೈಕ್‌ಗಳು ಸೇರಿವೆ. ಜನಪ್ರಿಯ ಹೊಂಡಾದ ಬೈಕ್ ಸೇರಿದಂತೆ ದೇಶದ ಮುಂಚೂಣಿಯ ಬೈಕ್ ತಯಾರಕ ಕಂಪನಿಗಳ ದ್ವಿಚಕ್ರ ವಾಹನಗಳು ಇದರಲ್ಲಿವೆ.

ಪ್ರಮುಖವಾಗಿಯೂ ಯುವ ಪೀಳಿಗೆಯಲ್ಲಿ ಬೈಕ್ ಬಿರುಗಾಳಿಯ ಅಲೆಯೆಬ್ಬಿಸಿದೆ. ಸ್ಟೈಲಿಷ್ ಸೇರಿದಂತೆ ಹೆಚ್ಚಿನ ಮೈಲೇಜ್ ಬೈಕ್‌ಗಳನ್ನು ಹಲವರು ನಂಬಿರುತ್ತಾರೆ. ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಹಲವು ವಿವಿಧ ಬೈಕ್‌ಗಳ ಆಗಮನವಾಗುತ್ತಿದೆ.

ಸಾಮಾನ್ಯವಾಗಿ ದೇಶದಲ್ಲಿ 100ಸಿಸಿ ಕಮ್ಯೂಟರ್ ಬೈಕ್‌ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಯಾಕೆಂದರೆ ಇದು ಕಡಿಮೆ ಬಜೆಟ್‌ನಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಇಂಧನ ಬೆಲೆಯೇರಿಕೆ ಕಂಡುಬಂದಿರುವಂತೆಯೇ ಬೈಕ್ ದರದಲ್ಲೂ ಗಣನೀಯ ಹೆಚ್ಚಳ ಕಾಣುತ್ತಿದೆ. ಹಾಗಿದ್ದರೆ ದೇಶದ ಟಾಪ್ 10 ಬಜೆಟ್ ಬೈಕ್‌ಗಳ ಮೇಲೆ ನಿಗಾ ವಹಿಸೋಣ ಬನ್ನಿ...

ದೇಶದ ಟಾಪ್ 10 ಬಜೆಟ್ ಬೈಕ್‌ಗಳು

ದೇಶದ ಮಧ್ಯಮ ವರ್ಗದ ಕುಟಂಬಗಳು ಬಹುತೇಕ ಬೈಕ್‌ಗಳನ್ನೇ ಆಶ್ರಯಿಸಿರುವುದರಿಂದ ಸಹಜವಾಗಿಯೇ ಕಡಿಮೆ ಅಗ್ಗದ ಜತೆಗೆ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳನ್ನೇ ಹರಸುತ್ತಾರೆ. ಇಲ್ಲಿ ಕೊಟ್ಟಿರುವ ಫೋಟೋ ಫೀಚರನ್ನು ಒಂದೊಂದೇ ಕ್ಲಿಕ್ಸಿಸುತ್ತಾ ಸಾಗಿರಿ ನಿಮ್ಮ ಪ್ರಶ್ನೆಗಿರುವ ಉತ್ತರ ಲಭಿಸಲಿದೆ.

ಜಜಾಜ್ ಪ್ಲಾಟಿನಾ 100ಸಿಸಿ

ಜಜಾಜ್ ಪ್ಲಾಟಿನಾ 100ಸಿಸಿ

ದರ ಮಾಹಿತಿ: 43100 (ಎಕ್ಸ್ ಶೋ ರೂಂ ದೆಹಲಿ)

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್‌ನ ಆಕರ್ಷಕ ಪ್ರಯಾಣಿಕ ಬೈಕ್ ಆಗಿರುವ ಪ್ಲಾಟಿನಾ ದೇಶದ ಮಾರುಕಟ್ಟೆಯಲ್ಲಿ ಉತ್ತಮ ಇಂಧನ ಕ್ಷಮತೆಗಾಗಿ ಹೆಸರುವಾಸಿಯಾಗಿದೆ. ಕಂಪನಿಯು ಈ ಬೈಕ್‌ನಲ್ಲಿ 13 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ನೀಡಿದೆ. ಅಲ್ಲದೆ ಪ್ರತಿ ಲೀಟರ್‌ಗೆ 72 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಹೀರೊ ಪ್ಯಾಶನ್

ಹೀರೊ ಪ್ಯಾಶನ್

ದರ ಮಾಹಿತಿ: 46000 ರು. (ಎಕ್ಸ್ ಶೋ ರೂಂ ದೆಹಲಿ)

ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಹೀರೊ ಮೊಟೋಕಾರ್ಪ್‌ನ ಅತಿ ಜನಪ್ರಿಯ0 ಪ್ಯಾಶನ್ ಅತ್ಯುತ್ತಮ ಲುಕ್ ಹೊಂದಿದೆ. ಹೀರೊ ಪ್ಯಾಶನ್ ಮೈಲೇಜ್ ಪ್ರತಿ ಲೀಟರ್‌ಗೆ 55 ಕೀ.ಮೀ ಆಗಿದೆ.

ಬಜಾಜ್ ಡಿಸ್ಕವರ್

ಬಜಾಜ್ ಡಿಸ್ಕವರ್

ದರ ಮಾಹಿತಿ: 40,000 ರು. (ದೆಹಲಿ)

ಬಜಾಜ್‌ನಿಂದ ಅತಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್ ಎಂಟ್ರಿ ಲೆವೆಲ್ ಡಿಸ್ಕವರ್ 100ಸಿಸಿ ಆಗಿದೆ. ಕಂಪನಿಯು ವರ್ಷಂಪ್ರತಿ 18 ಲಕ್ಷ ಡಿಸ್ಕವರ್ ಮಾರಾಟವನ್ನು ಕಂಡುಕೊಳ್ಳುತ್ತಿದೆ. ಹೌದು, ಆಕರ್ಷಕ ಮೈಲೇಜ್ ಹಾಗೂ ಅಗ್ಗದ ಬೈಕ್ ಆಗಿದ್ದರಿಂದ ಯುವ ಜನಾಂಗದವರಲ್ಲಿ ಅತಿ ಹೆಚ್ಚು ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದೆ. ಈ ಬೈಕ್ 100 ಸಿಸಿ ಅಲ್ಲದೆ 125 ಹಾಗೂ 150 ಸಿಸಿಗಳಲ್ಲೂ ಲಭ್ಯವಿದೆ.

ಹೀರೊ ಸಿಡಿ ಡಿಲಾಕ್ಸ್

ಹೀರೊ ಸಿಡಿ ಡಿಲಾಕ್ಸ್

ದರ ಮಾಹಿತಿ: 39,000 ರು. (ದೆಹಲಿ)

ಹೀರೊ ಮೊಟೊದ ಆಕರ್ಷಕ ಬೈಕ್ ಸಿಡಿ ಡಿಲಾಕ್ಸ್ ಆಗಿದೆ. ದಶಕಗಳಿಂದಲೂ ಹೀರೊ ತನ್ನ ನಂಬಿಕೆಯನ್ನು ಉಳಿಸಿಕೊಳ್ಳುತ್ತಲೇ ಬಂದಿರುವ ಹೀರೊದ ಸಿಡಿ ಡಿಲಾಕ್ಸ್ 100 ಸಿಸಿ ಎಂಜಿನ್ ಹೊಂದಿದೆ.

ಹೀರೊ ಸ್ಪೆಂಡರ್

ಹೀರೊ ಸ್ಪೆಂಡರ್

ದರ ಮಾಹಿತಿ: 43000 ರು. (ದೆಹಲಿ)

ಬಹುಶ: ಹೀರೊ ಸ್ಪೆಂಡರ್ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಯುವ ಮನಸ್ಕರಲ್ಲಿ ಅತಿ ಹೆಚ್ಚು ಪ್ರೀತಿ ಗಿಟ್ಟಿಸಿಕೊಂಡಿರುವ ಸ್ಪೆಂಡರ್ ನಂಬಿಕೆಯ ಬೈಕಾಗಿದೆ. ಯಾಕೆಂದರೆ ದೇಶದ ದ್ವಿಚಕ್ರ ಇತಿಹಾಸದಲ್ಲೇ ಪ್ರಮಾಣಿಕ ಬೈಕ್‌ಗಳ ಪೈಕಿ ಸ್ಪೆಂಡರ್ ರಚಿಸಿದಷ್ಟು ಖ್ಯಾತಿ ಪ್ರಾಯಶ: ಈ ತನಕ ಬೇರೇ ಯಾವುದೇ ಬೈಕ್ ಗಳಿಸಿರಲಾರದು. ಅಲ್ಲದೆ ಒಂದು ಕಾಲದಲ್ಲಿ ಕಣ್ಣುಮುಚ್ಚಿಕೊಂಡೇ ಖರೀದಿಸಿದರೂ ಗ್ರಾಹಕ ಮೋಸ ಹೋಗಲಾರದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಟಿವಿಎಸ್ ಸ್ಪೋರ್ಟ್

ಟಿವಿಎಸ್ ಸ್ಪೋರ್ಟ್

ದರ ಮಾಹಿತಿ: 49000 ರು. (ದೆಹಲಿ)

ಹೆಸರಿನಲ್ಲಿ ಸೂಚಿಸಿರುವಂತೆಯೇ ಸ್ಪೋರ್ಟಿ ಲುಕ್ ಹೊಂದಿರುವ ಟಿವಿಎಸ್ ಸ್ಪೋರ್ಟ್ ತನ್ನದೇ ಆದ ಹಲವುವೈಶಿಷ್ಟ್ಯವನ್ನು ಹೊಂದಿದೆ. ಏರೋಡೈನಾಮಿಕ್ ವಿನ್ಯಾಸ ಹೊಂದಿರುವ ಟಿವಿಎಸ್ ಪ್ರತಿ ಲೀಟರ್‌ಗೆ 58 ಕೀ.ಮೀ ಮೈಲೇಜ್ ನೀಡಲಿದೆ.

ಸುಜುಕಿ ಹಯಾಟೆ

ಸುಜುಕಿ ಹಯಾಟೆ

ದರ ಮಾಹಿತಿ: 43000 ರು. (ದೆಹಲಿ)

ಜಪಾನ್ ವಾಹನ ತಯಾರಕ ಕಂಪನಿಯಾದ ಸುಜುಕಿ ಇತ್ತೀಚೆಗಷ್ಟೇ ದೇಶದ ರಸ್ತೆಗೆ ನೂತನ ಹಯಾಟೆ ಬೈಕನ್ನು ಪರಿಚಯಿಸಿತ್ತು. ಬಾಲಿವುಡ್‌ನ ದಬಾಂಗ್ ಹೀರೊ ಸಲ್ಮಾನ್ ಖಾನ್ ಈ ಬೈಕ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕಳೆದ ದೆಹಲಿ ಆಟೋ ಷೋದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದ್ದ ಸುಜುಕಿ ಹಯಾಟೆ ಪ್ರತಿ ಲೀಟರ್‌ಗೆ 55 ಕೀ. ಮೀ. ಮೈಲೇಜ್ ನೀಡಲಿದೆ.

ಹೊಂಡಾ ಡ್ರೀಮ್ ಯುಗಾ

ಹೊಂಡಾ ಡ್ರೀಮ್ ಯುಗಾ

ದರ ಮಾಹಿತಿ: 48,690 ರು. (ದೆಹಲಿ)

ಇದು ಹೊಂಡಾ ಸಾಲಿನಲ್ಲಿ ಸೇರಿರುವ ಮತ್ತೊಂದು ಕನಸಿನ ಬೈಕಾಗಿದೆ. ಡ್ರೀಮ್ ಯುಗಾ ಮೂಲಕ ದೇಶದ ಮಾರುಕಟ್ಟೆಯಲ್ಲಿ ಹೊಂಡಾ ತನ್ನ ಹಿಡಿತವನ್ನು ಮತ್ತಷ್ಟು ಭದ್ರಗೊಳಿಸುವ ಪ್ರಯತ್ನ ಮಾಡಿದೆ. ಇದರ ಮೈಲೇಜ್ ಬಹುತೇಕ 60 ಕೀ.ಮೀ ಆಗಿದೆ.

ಯಮಹಾ ಕ್ರೂಕ್ಸ್

ಯಮಹಾ ಕ್ರೂಕ್ಸ್

ದರ ಮಾಹಿತಿ: 31,900 ರು. (ದೆಹಲಿ)

ಯಮಹಾದ ಕ್ರೂಕ್ಸ್ ಬೈಕ್ ದೇಶದ ರಸ್ತೆಗಳಲ್ಲಿ ಯಶಸ್ವಿ ಪಯಣ ನಡೆಸುತ್ತಿದೆ. ಆಕರ್ಷಕ ದರಗಳಲ್ಲಿ ಲಭ್ಯವಿರುವ ಈ ಬೈಕ್ ಉತ್ತಮ ಪಿಕ್ ಅಪ್ ಹೊಂದಿದೆ. ಮೈಲೇಜ್ ಮಾತ್ರ 45 ಕೀ.ಮೀ ಆಗಿದ್ದರೂ ದರದ ವಿಷಯದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಕಾರಣವಾಗಿದೆ.

ಸುಜುಕಿ ಸ್ಲಿಂಗ್ ಶಾಟ್

ಸುಜುಕಿ ಸ್ಲಿಂಗ್ ಶಾಟ್

ದರ ಮಾಹಿತಿ: 45000 ರು. (ದೆಹಲಿ)

ಸುಜುಕಿ ಸ್ಲಿಂಗ್ ಶಾಟ್ ವಿಶೇಷ ಶೈಲಿಗೆ ಹೆಸರುವಾಸಿಯಾಗಿದೆ. ಜಪಾನ್ ದ್ವಿಚಕ್ರ ವಾಹನ ತಯಾರಕ ಕಂಪನಿಯ ಈ ಬೈಕ್ ಗರಿಷ್ಠ 60 ಕೀ. ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
Which are the top 10 budget bikes in India? Drivespark presents to you the answer. Here are India's best selling budget bikes along with their price, specs and Photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X