ವಿಶ್ವದ ಸಣ್ಣ ಬೈಕ್ ಮಾಡಿ ಮೋಡಿ ಮಾಡಿದ ಕನ್ನಡಿಗ

ಮೈಸೂರು, ಸೆ 7: ಸುಮಾರು ನಾಲ್ಕು ಕೆ.ಜಿ ತೂಕದ, ಮೂಷಿಕ ನಾಮಾಂಕಿತ, ಬ್ಯಾಟರಿ ಚಾಲಿತ ವಿಶ್ವದ ಅತಿ ಸಣ್ಣ ಚಿಕಣಿ ವಿದ್ಯುತ್ ಬೈಕ್ ಮೂಲಕ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಕನ್ನಡಿಗ ಸಂತೋಷ್ ಜಗತ್ತಿಗೆ ಮೋಡಿ ಮಾಡಿದ್ದಾರೆ.

ಸಂತೋಷ್ ನಿರ್ಮಿಸಿದ ಮೂಷಿಕ ಬೈಕ್ ಜಗತ್ತಿನಲ್ಲಿಯೇ ಸಣ್ಣ ವಿದ್ಯುತ್ ಬೈಕಾಗಿದೆ. ಇದು ಕೇವಲ 18 ಇಂಚು ಉದ್ದ ಮತ್ತು 12 ಇಂಚು ಎತ್ತರವಿದೆಯಷ್ಟೇ. ಐದು ಕೆ.ಜಿ ತೂಕದ ಈ ಚಿಕಣಿ ಬೈಕಿನಲ್ಲಿ 70 ಕೆ.ಜಿ. ತೂಕದ ವ್ಯಕ್ತಿಗಳು ಕೂತು ರೈಡ್ ಮಾಡಬಹುದು.

ಇದು ರಿವರ್ಸ್ ಗೇರ್, ಹೆಡ್ ಲೈಟ್ ಮುಂತಾದ ಫೀಚರುಗಳನ್ನು ಹೊಂದಿದೆ. ಇದರಲ್ಲಿ ಗಂಟೆಗೆ 18 ಕಿ.ಮೀ. ವೇಗದಲ್ಲಿ ಸಾಗಬಹುದು. ಮೈಸೂರು, ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಹಲವೆಡೆ ಮೂಷಿಕ ಬೈಕನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ.

ಈ ಪುಟ್ಟ ಬೈಕಿನಲ್ಲಿ ಹಿಮಾಲಯ ರ‍್ಯಾಲಿ ಮಾಡಿ ಎರಡು ಲಿಮ್ಕಾ ದಾಖಲೆ ಮಾಡಿದ್ದಾರೆ. ಇಂಡಿಯನ್ ಬುಕ್ ಆಫ್ ರೆಕಾರ್ಡಿನಲ್ಲೂ ಇವರ ಸಾಧನೆ ದಾಖಲಾಗಿದೆ. ಮೂಲತಃ ಮೂಡಬಿದಿರೆಯವರಾದ ಸಂತೋಷ್ ಕಳೆದ ಕೆಲವು ದಶಕಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ.

ಈ ಪುಟಾಣಿ ಬೈಕ್ ತಯಾರಿಸಲು ಸಂತೋಷ್ ಗೆ 6 ತಿಂಗಳು ಹಿಡಿದಿದೆಯಂತೆ. ಇದಕ್ಕೆ ತಗುಲಿದ ವೆಚ್ಚ 18 ಸಾವಿರ ರುಪಾಯಿ. ವಿಶ್ವದ ಪುಟ್ಟ ಬೈಕ್ ತಯಾರಿಸಿದ ಕನ್ನಡಿಗನಿಗೆ ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಅಭಿನಂದನೆ.

ಅವರ ಇಮೇಲ್: [email protected]

Most Read Articles

Kannada
English summary
World Smallest Bike Moosshiqk developed by Santhosh Mysore. Moosshiqk battery driven bike height 12 inch and length 18 inch. Bike Dry weight 4 kg, Speed 12 to 18 kmph.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X