ಹೊಸ ಸಿಬಿಆರ್ ಬರಮಾಡಿಕೊಳ್ಳಲು ಸಜ್ಜಾಗಿರಿ

By Nagaraja

ಇನ್ನು ಕೆಲವೇ ತಿಂಗಳೊಳಗೆ ನೂತನ ಹೋಂಡಾ ಸಿಬಿಆರ್500ಆರ್ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ವರದಿಗಳ ಪ್ರಕಾರ ಹೋಂಡಾ ಸಿಬಿಆರ್500ಆರ್ ಹೊಸ ವರ್ಷದ ಕೊಡುಗೆಯಾಗಿ ಆಗಮನವಾಗುವ ಸಾಧ್ಯತೆಯಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದು ಗ್ರಾಹಕರ ಸಂಭ್ರಮವನ್ನು ಇಮ್ಮಡಿಗೊಳಿಸುವಂತಾಗಿದೆ. 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ಹೋಂಡಾ ಸಿಬಿಆರ್500ಆರ್ ತದಾ ಬಳಿಕ ಗ್ರಾಂಡ್ ಎಂಟ್ರಿ ಕೊಡಲಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಸಂಸ್ಥೆಯು ಈಗಾಗಲೇ ತಾಂತ್ರಿಕ ವಿಭಾಗದವರಿಗೆ ಹೇಗೆ ಸಿಬಿಆರ್500ಆರ್ ನಿರ್ವಹಣೆ ಹಾಗೂ ಹ್ಯಾಂಡ್ಲಿಂಗ್ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡುವುದನ್ನು ಆರಂಭಿಸಿದೆ.

 CBR500R

ಇದರಲ್ಲಿ 500 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಆಳವಡಿಸಲಾಗಿದ್ದು 47 ಬಿಎಚ್‌ಪಿ (43 ಎನ್‌ಎಂ ಟಾರ್ಕ್) ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 5.7 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ 185 ಗರಿಷ್ಠ ವೇಗತೆಯಲ್ಲಿ ಸಂಚರಿಸಲಿದೆ.

ಪ್ರಮುಖವಾಗಿಯೂ ಕವಾಸಕಿ ನಿಂಜಾ 300 ಮತ್ತು 390 ಸಿಸಿ ಕೆಟಿಎಂ ಡ್ಯೂಕ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಹೋಂಡಾದ ನೂತನ ಸಿಬಿಆರ್500ಆರ್ ಕಾಣಿಸಿಕೊಳ್ಳಲಿದೆ. ಇದು ದೇಶದಲ್ಲಿ ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ಲಾಂಚ್ ಆಗಲಿದೆ.

Most Read Articles

Kannada
English summary
According to the sources, Japanese two-wheeler manufacturer Honda is planning to launch the new CBR500R in India in early 2014. The Honda CBR500R will be revealed at the upcoming Indian Auto Expo in February 2014. Stay tuned for latest updates.
Story first published: Friday, November 29, 2013, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X