ಕವಾಸಕಿಯಿಂದ ದೇಶಕ್ಕೆ ಹೈ ಎಂಡ್ ಸೂಪರ್ ಬೈಕ್‌ಗಳು

Written By:

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಕವಾಸಕಿ, ಅಂಗಸಂಸ್ಥೆಯಾಗಿರುವ ಇಂಡಿಯಾ ಕವಾಸಕಿ ಮೋಟಾರ್ಸ್ (ಐಕೆಎಂ), ದೇಶದಲ್ಲಿ ಹೈ ಎಂಡ್ ಸೂಪರ್ ಬೈಕ್‌ಗಳನ್ನು ಲಾಂಚ್ ಮಾಡುವ ಉದ್ದೇಶ ಹೊಂದಿದೆ.

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಸೂಪರ್ ಸ್ಪೋರ್ಟ್ಸ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಈ ವಿಭಾಗದಲ್ಲಿ ಸ್ಥಿರತೆಯ ವೃದ್ಧಿ ದರ ದಾಖಲಿಸಿಸುತ್ತಿರುವುದು ಕವಾಸಕಿ ಆಕರ್ಷಣೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
Kawasaki Z1000

1000 ಸಿಸಿಗಿಂತಲೂ ಮಿಗಿಲಾದ ವಿಭಾಗದಲ್ಲಿ ವರ್ಷಂಪ್ರತಿ 2ರಿಂದ 3 ಮಾದರಿಗಳನ್ನು ಲಾಂಚ್ ಮಾಡಲು ಗುರಿಯಿರಿಸಿಕೊಂಡಿರುವ ಕವಾಸಕಿ, ಈ ಮೂಲಕ 2015ರ ವೇಳೆಗೆ ಶೇಕಡಾ 20ರಿಂದ 30ರಷ್ಟು ಮಾರುಕಟ್ಟೆ ಶೇರುಗಳನ್ನು ವಶಪಡಿಸಿಕೊಳ್ಳುವ ಗುರಿ ಹೊಂದಿದೆ.

ಕೆಲವು ದಿನಗಳ ಹಿಂದೆಯಷ್ಟೇ ಝಡ್1000 ಮತ್ತು ನಿಂಜಾ 1000 ಬೈಕ್‌ಗಳನ್ನು ಸಂಸ್ಥೆ ಲಾಂಚ್ ಮಾಡಿತ್ತು. ಇವೆರಡು ಮಾದರಿಗಳ ಎಕ್ಸ್ ಶೋ ರೂಂ ದರ 12.50 ಲಕ್ಷ ರು.ಗಳಾಗಿವೆ. ಇದು ಕಂಪ್ಲೀಟ್ ಬಿಲ್ಡ್ ಯುನಿಟ್ (ಸಿಬಿಯು) ಮುಖಾಂತರ ದೇಶವನ್ನು ತಲುಪಲಿದೆ.

Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark