ಫ್ರೀಡಂ ಬೈಕ್ ರಿ ಲಾಂಚ್ ಮಾಡಲಿರುವ ಎಲ್‌ಎಂಎಲ್

By Nagaraja

ಹಿಂದೊಮ್ಮೆ ಇಟಲಿಯ ಪಿಯಾಜಿಯೊದ ವೆಸ್ಪಾ ಜತೆ ದೀರ್ಘ ಕಾಲದ ಪಾಲುದಾರಿಕೆ ಹೊಂದಿದ್ದ ಎಲ್‌ಎಂಎಲ್ ಲಿಮಿಟೆಡ್, ತನ್ನ ಅತ್ಯಂತ ಜನಪ್ರಿಯ ಫ್ರೀಡಂ ಬೈಕನ್ನು ರಿ ಲಾಂಚ್ ಮಾಡುವ ಯೋಜನೆ ಹೊಂದಿದೆ. ಇದರ ಜತೆಗೂ ತ್ರಿಚಕ್ರ ವಾಹನವನ್ನು ದೇಶಕ್ಕೆ ಪರಿಚಯಿಸಲಿದೆ.

1999ನೇ ಇಸವಿಯಲ್ಲಿ ಪಿಯಾಜಿಯೊ ಜತೆ ಬಾಂಧವ್ಯ ಕಡಿದುಕೊಂಡ ಬಳಿಕ ಎಲ್‌ಎಂಎಲ್ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡಿತ್ತು. 2011-12ರ ಆರ್ಥಿಕ ಸಾಲಿನಲ್ಲಂತೂ 45.2 ಕೋಟಿ ರುಪಾಯಿಗಳ ಭಾರಿ ನಷ್ಟವನ್ನು ಅನುಭವಿಸಿತ್ತು.

ಪ್ರಸ್ತುತ 110ಸಿಸಿ ಫ್ರೀಡಂ ಬೈಕ್ ಮರು ಬಿಡುಗಡೆಗೊಳಿಸಲು ಎಲ್‌ಎಂಎಲ್ ಸನ್ನದ್ಧವಾಗಿದೆ. ಇದರ ಜತೆಗೆ 125 ಸಿಸಿ, 150ಸಿಸಿ ಹಾಗೂ ಸ್ಕೂಟರನ್ನು ಮಾರುಕಟ್ಟೆಗಿಳಿಸುವ ಮಹತ್ತರ ಯೋಜನೆಯನ್ನು ಕಂಪನಿ ಹೊಂದಿದೆ. ಈ ಎಲ್ಲ ಮಾದರಿಗಳು 2013ರ ಮಧ್ಯಂತರ ಅವಧಿಯಿಂದ ಮಾರುಕಟ್ಟೆಗೆ ಪರಿಚಯವಾಗುವ ನಿರೀಕ್ಷೆಯಿದೆ.

ಸರಕು ಸಾಗಣೆ ಬಂಡಿ...
ಏತನ್ಮಧ್ಯೆ ಹಗುರ ಭಾರದ ಸರಕು ಸಾಗಣೆ ವಾಹನವನ್ನು ಬಿಡುಗಡೆಗೊಳಿಸುವುದಾಗಿ ಕಂಪನಿ ತಿಳಿಸಿದೆ. ಈ ತ್ರಿಚಕ್ರ ವಾಹನವು ದೇಶದ ಮಧ್ಯಮ ವರ್ಗದವನ್ನು ಗುರಿಯಾರಿಸಿಕೊಂಡಿದೆ. ಪ್ರಸ್ತುತ ಎಲ್‌ಎಂಎಲ್ ಭಾರಿ ನಷ್ಟದಲ್ಲಿದೆ. ಹಾಗಾಗಿ ನೂತನ ಆವೃತ್ತಿಗಳ ಮೂಲಕ ಹಳಿಗೆ ಮರಳುವ ನಿರೀಕ್ಷೆ ಹೊಂದಿದೆ.

Most Read Articles

Kannada
English summary
LML Ltd, which used to make the iconic LML Vespa in collaboration with Italy's Piaggio & C Spa, is working hard to regain its lost glory with the relaunch of the Freedom motorbike, besides making new two-wheelers as well as light-weight three-wheelers
Story first published: Friday, April 12, 2013, 15:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X