ಮಹೀಂದ್ರ ಸೆಂಚುರೊ 3 ವಾರಗಳಲ್ಲೇ 10,000 ಬುಕ್ಕಿಂಗ್ಸ್

Written By:
ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮಹೀಂದ್ರ ಟು ವೀಲರ್ಸ್ ಲಿಮಿಟೆಡ್‌ನ ಬಹುನಿರೀಕ್ಷಿತ ಸೆಂಚುರೊ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ದೊರಕಿರುವುದಾಗಿ ಕಂಪನಿ ತಿಳಿಸಿದೆ.

ನೂತನ ಮಹೀಂದ್ರ ಸೆಂಚುರೊ ಬಿಡುಗಡೆಗೊಂಡ ಮೂರು ವಾರಗಳಲ್ಲೇ 10,000ಕ್ಕಿಂತಲೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಹೀಂದ್ರ ಸೆಂಚುರೊ ಜುಲೈ 1ರಂದು ದೇಶದ ರಸ್ತೆಗಿಳಿದಿತ್ತು. ಪುಣೆಯ ಆರ್ ಆಂಡ್ ಡಿ ಘಟಕದಲ್ಲಿ ತಯಾರುಗೊಳ್ಳುವ ಸೆಂಚುರೊದಲ್ಲಿ ಎಂಸಿಐ-5 (ಮೈಕ್ರೊ ಚಿಪ್ ಇಗ್ನೈಟಡ್ 5 ಕರ್ವ್) ಎಂಜಿನ್ ಆಳವಡಿಸಲಾಗಿದೆ. ಪ್ರಸ್ತುತ ಬೈಕ್ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಕಾರಿನಲ್ಲಿ ಲಭ್ಯವಿರುವ ಆಧುನಿಕ ಫೀಚರ್‌ಗಳನ್ನು ಬೈಕ್‌ನಲ್ಲಿ ಆಳವಡಿಸಿರುವುದು ಸೆಂಚುರೊ ಆಕರ್ಷಣೆಗೆ ಕಾರಣವಾಗಿದೆ. ಕಳ್ಳತನ ವಿರೋಧಿ ಅಲಾರ್ಮ್, ಎಂಜಿನ್ ಇಮ್‌ಮೊಬಿಲೈಸರ್, ರಿಮೋಟ್ ಪ್ಲಿಪ್ ಕೀ, ಫೈಂಡ್ ಮಿ ಲ್ಯಾಂಪ್, ಗೈಡ್ ಲ್ಯಾಂಪ್, ಡಿಜಿಟಲ್ ಡ್ಯಾಶ್‌ಬೋರ್ಡ್, ಡಿಸ್ಟನ್ಸ್ ಟು ಎಮ್ಟಿ ಇಂಡಿಕೇಟರ್, ಸರ್ವಿಸ್ ರಿಮೈಂಡರ್ ಆಂಡ್ ಇಕಾನಮಿ ಮೋಡ್ ಇಂಡಿಕೇಟರ್‌ಗಳಂತಹ ಹಲವಾರು ವೈಶಿಷ್ಟ್ಯಗಳು ಲಭ್ಯವಿದೆ. ಇವೆಲ್ಲದರ ಜತೆಗೆ ಉಚಿತ ಬ್ಯಾಟರಿ ನಿರ್ವಹಣೆ ಸೇರಿದಂತೆ ಐದು ವರ್ಷಗಳ ವಾರಂಟಿ ಲಭ್ಯವಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಓದಿರಿ ಸ್ಪ್ಲೆಂಡರ್ ಪ್ರತಿಸ್ಪರ್ಧಿ ಮಹೀಂದ್ರ ಸೆಂಚುರೊ ರಸ್ತೆಗೆ

English summary
Mahindra Two Wheelers Ltd., a part of the USD 16.2 billion Mahindra Group, today announced that it has received an overwhelming response to its all new Mahindra Centuro motorcycle with over 10,000 bookings being made by customers across India within 3 weeks of launch.
Story first published: Wednesday, July 24, 2013, 16:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark