ಮಹಿಂದ್ರ ಸೆಂಚುರೊ 6 ವಾರಗಳಲ್ಲಿ 30,000 ಬುಕ್ಕಿಂಗ್ಸ್..!

Written By:

ದೇಶದ ಮುಂಚೂಣಿಯ ದ್ವಿಚಕ್ರ ವಾಹನಗಳಲ್ಲಿ ಒಂದಾಗಿರುವ ಮಹೀಂದ್ರ ಟು ವೀಲರ್ಸ್, ಇತ್ತೀಚೆಗಷ್ಟೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಸೆಂಚುರೊ ಪ್ರಯಾಣಿಕ ಬೈಕನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿತ್ತು. ಪ್ರಸ್ತುತ ಮಹೀಂದ್ರ ಸೆಂಚುರೊ ಬಿಡುಗಡೆಗೊಂಡಿರುವ ಕೇವಲ ಆರು ವಾರಗಳಲ್ಲಿ 30,000ಕ್ಕೂ ಹೆಚ್ಚು ಬುಕ್ಕಿಂಗ್ ಪಡೆಯುವ ಮೂಲಕ ಭಾರಿ ಯಶಸ್ಸನ್ನು ಕಂಡಿದೆ.

ನಾಲ್ಕು ಚಕ್ರದ ವಾಹನಗಳಲ್ಲಿ ಲಭ್ಯವಿರುವ ಕೆಲವು ಫೀಚರ್‌ಗಳನ್ನು ದ್ವಿಚಕ್ರ ವಾಹನಕ್ಕೆ ಆಳವಡಿಸಿರುವುದು ಸೆಂಚುರೊ ಯಶಸ್ಸಿಗೆ ಕಾರಣವಾಗಿದೆ. ಪ್ರಸ್ತುತ ಗ್ರಾಹಕರಿಂದ ಮೂಡಿಬಂದಿರುವ ಅಭೂತಪೂರ್ವ ಪ್ರತಿಕ್ರಿಯೆಗೆ ಮಹೀಂದ್ರ ಸಂತೋಷವನ್ನು ವ್ಯಕ್ತಪಡಿಸಿದೆ.

To Follow DriveSpark On Facebook, Click The Like Button

ಸವಾಲಿನಿಂದ ಕೂಡಿದ ಇಂದಿನ ಮಾರುಕಟ್ಟೆಯಲ್ಲಿ ನಮ್ಮ ಬ್ರಾಂಡ್ ಮೇಲೆ ನಂಬಿಕೆಯಿರಿಸಿದ ಪ್ರತಿಯೊಬ್ಬ ಗ್ರಾಹಕರಿಗೂ ಧನ್ಯವಾದ ಹೇಳಬಯಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ಮಹೀಂದ್ರ ತಿಳಿಸಿದೆ. ಹಾಗೆಯೇ ಗ್ರಾಹಕರ ಬೇಡಿಕೆಗಳನ್ನು ಸದ್ಯದಲ್ಲೇ ಈಡೇರಿಸಿಕೊಳ್ಳಲಾಗುವುದು. ಈ ಸಂಬಂಧ ಪಿಂತಾಪುರ ಘಟಕದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ಪುಣೆಯ ಆರ್‌ ಆಂಡ್ ಡಿ ಕೇಂದ್ರದಲ್ಲಿ ಸಂಪೂರ್ಣವಾಗಿ ದೇಶಿಯವಾಗಿ ವಿನ್ಯಾಸಗೊಳಿಸಲಾಗಿರುವ ಮಹೀಂದ್ರ ಸೆಂಚುರೊ 2013 ಜುಲೈ1ರಂದು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿತ್ತು. ಇದು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ MCi-5 (ಮೈಕ್ರೋ ಚಿಪ್ ಇಗ್ನೈಟೆಡ್-5 ಕರ್ವ್) ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಇದು 8.5 ಬಿಎಚ್‌ಪಿ ಪವರ್ (7500 ಆರ್‌ಪಿಎಂ, 8.5 ಟಾರ್ಕ್) ಉತ್ಪಾದಿಸಲಿದೆ.

ಮೈಲೇಜ್

ಭಾರತೀಯ ವಾಹನ ಅಧ್ಯಯನ ಸಂಸ್ಥೆ ಎಆರ್‌ಎಐ ಮಾನ್ಯತೆ ನೀಡಿರುವ ಪ್ರಕಾರ ಮಹೀಂದ್ರ ಸೆಂಚುರೊ ಪ್ರತಿ ಲೀಟರ್‌ಗೆ 85.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ದರ ಮಾಹಿತಿ: 45,000 ರು. (ಎಕ್ಸ್ ಶೋ ರೂಂ ದೆಹಲಿ)

ಹೆಚ್ಚುವರಿ ಫೀಚರ್ಸ್:

ಎಂಜಿನ್ ಇಂಮೊಬಿಲೈಜರ್ ಜತೆ ಆಂಟಿ ಥೆಫ್ಟ್ ಅಲಾರ್ಮ್

  • ರಿಮೋಟ್ ಪ್ಲಿಪ್ ಕೀ,
  • ಫೈಂಡ್ ಮಿ ಲ್ಯಾಂಪ್,
  • ಗೈಡ್ ಲ್ಯಾಂಪ್
  • ಡಿಜಿಟಲ್ ಡ್ಯಾಶ್ ಬೋರ್ಡ್
  • ಡಿಸ್ಟನ್ಸ್ ಟು ಎಮ್ಟಿ (ಡಿಟಿಐ) ಇಂಡಿಕೇಟರ್
  • ಸರ್ವೀಸ್ ರಿಮೈಂಡರ್
  • 5 ವರ್ಷದ ವಾರಂಟಿ
English summary
Mahindra Two Wheelers, a part of the USD 16.2 billion Mahindra Group, today announced that it has received an overwhelming 30,000 plus bookings for its Mahindra Centuro motorcycle within just 6 weeks of the bike’s launch.
Story first published: Tuesday, August 27, 2013, 11:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark