2014 ಇಂಡಿಯಾ ಬೈಕ್ ವೀಕ್‌ಗೆ ನೀವು ರೆಡಿನಾ?

Written By:

ಎರಡನೇ ಆವೃತ್ತಿಯ ಇಂಡಿಯಾ ಬೈಕ್ ವೀಕ್‌ಗೆ ವೇದಿಕೆ ಸಿದ್ಧಗೊಂಡಿದೆ. ದೇಶದ ಮನೋಹರ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಗೋವಾದಲ್ಲಿ ನಡೆಯಲಿರುವ ಇಂಡಿಯಾ ಬೈಕ್ ವೀಕ್ 2014 ಜನವರಿ 17 ಹಾಗೂ 18ರಂದು ನಡೆಯಲಿದೆ.

ಬಸ್ಸಿನಲ್ಲಿ ಪಯಣಿಸುವಾಗ ಅನುಸರಿಬೇಕಾದ ಸುರಕ್ಷಾ ಕ್ರಮಗಳು

ಹಾಗೊಂದು ವೇಳೆ ನೀವು ಗೋವಾಕ್ಕೆ ತೆರಳುವ ಯೋಜನೆ ಹೊಂದಿದ್ದರೆ ಅದನ್ನು ಮೇಲೆ ತಿಳಿಸಿದ ದಿನಾಂಕಕ್ಕೆ ನಿಗದಿ ಮಾಡಿಕೊಳ್ಳಿರಿ. ಯಾಕೆಂದರೆ ನೀವು ಇದುವರೆಗೆ ನೋಡಿರದ ಬೈಕ್‌ಗಳನ್ನು ಇಂಡಿಯಾ ಬೈಕ್ ವೀಕ್‌ನಲ್ಲಿ ಕಣ್ಣಾರೆ ನೋಡುವ ಅದೃಷ್ಟ ದೊರಕಲಿದೆ. ಎರಡನೇ ಜಾಗತಿಕ ಯುದ್ಧದ ಫೈಟರ್ ಪ್ಲೇನ್ ಎಂಜಿನ್ ಹೊಂದಿರುವ ರಾಡಿಕಲ್ ಚೊಪರ್ ಜತೆಗೆ ಹಲವಾರು ವಿಂಟೇಜ್, ರೇಸ್ ಹಾಗೂ ಕಸ್ಟಮೈಸ್ಡ್ ಬೈಕ್‌ಗಳು ಇಲ್ಲಿ ಪ್ರದರ್ಶನ ಕಾಣಲಿದೆ.

To Follow DriveSpark On Facebook, Click The Like Button
2014 ಇಂಡಿಯಾ ಬೈಕ್ ವೀಕ್‌

ಹಾಗೆಯೇ ಬೈಕರುಗಳಿಗಾಗಿ ವಿಶೇಷ 'ಬ್ರದರ್‌ವುಡ್ ಜೋನ್' ಸಿದ್ಧಗೊಂಡಿದೆ. ಇಲ್ಲಿ ಬೈಕುಗಳನ್ನು ಪಾರ್ಕ್ ಮಾಡುವುದರ ಜತೆಗೆ ತಮ್ಮ ಸಹ ಸವಾರರನ್ನು ಭೇಟಿಯಾಗುವ ಅವಕಾಶವಿರಲಿದೆ. ಅಷ್ಟೇ ಅಲ್ಲದೆ ಇಂಡಿಯಾ ಬೈಕ್ ವೀಕ್‌ನಲ್ಲಿ ಪಾಲ್ಗೊಳ್ಳುವವರಿಗೆ ಬೈಕ್ ದುನಿಯಾದ ಟೆಡ್ ಸಿಮನ್ಸ್, ನಿಕ್ ಸ್ಯಾಂಡರ್ಸ್, ಸ್ಯಾಮ್ ಚೈಲ್ಡರ್ಸ್ ಮತ್ತು ಇನ್ನಿತರ ದಂತಕಥೆಗಳನ್ನು ಭೇಟಿ ಮಾಡುವ ಅವಕಾಶವಿರಲಿದೆ.

2014 ಇಂಡಿಯಾ ಬೈಕ್ ವೀಕ್‌

ಮೂಲಗಳ ಪ್ರಕಾರ ಹರ್ಲಿ ಡೇವಿಡ್ಸನ್ ಹೊಸ ಅವತಾರ ಸ್ಟ್ರೀಟ್ 750 ಇಂಡಿಯಾ ಬೈಕ್ ವೀಕ್‌ನ ಭಾಗವಾಗಿರಲಿದೆ. ಇನ್ನು ಕಾರ್ಯಕ್ರಮವನ್ನು ಇನ್ನಷ್ಟು ಇಂಪಾಗಿಸಲು ಬ್ರಿಟನ್ ಮೂಲದ 20 ಬ್ಯಾಂಡ್ ಡಿಜೆ ಸೆಟ್‌ಗಳು ಈಗಾಗಲೇ ಸಿದ್ಧಗೊಂಡಿದೆ.

2014 ಇಂಡಿಯಾ ಬೈಕ್ ವೀಕ್‌

ಇಲ್ಲಿ ಕಸ್ಟಮ್ ಬೈಕ್‌ಗಳಿಗೂ ವಿಶೇಷ ಪ್ರಾಮುಖ್ಯತೆ ಕಲ್ಪಿಸಲಾಗುತ್ತಿದ್ದು, ಮೊಡಿಫೈಡ್ ಬೈಕ್ ಸ್ಪರ್ಧೆಯಲ್ಲಿ ದೇಶದ ಕಸ್ಟಮ್ ಬೈಕ್‌ಗಳ ಪ್ರದರ್ಶನವಾಗಲಿದೆ.

2014 ಇಂಡಿಯಾ ಬೈಕ್ ವೀಕ್‌

ಹರ್ಲಿ ಡೇವಿಡ್ಸನ್‌ನಂತಹ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳ ಡಿಸೈನ್ ಹೆಡ್ ಇಲ್ಲಿ ಜಡ್ಜ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಈ ಎಲ್ಲ ಇಂಡಿಯಾ ಬೈಕ್ ವೀಕ್‌ ಕಾರ್ಯಕ್ರಮಕ್ಕೆ ಎಂಆರ್‌ಎಫ್, ಕ್ಯಾಸ್ಟ್ರಾಲ್ ಪ್ರಾಯೋಜಕತ್ವವೂ ಇದೆ.

2014 ಇಂಡಿಯಾ ಬೈಕ್ ವೀಕ್‌

ಇನ್ನು ಕಾರ್ಯಕ್ರಮಕ್ಕೆ ಬಿಸಿಯೇರಿಸಲು ಬಿಕಿನಿ ಬೈಕ್ ವಾಶ್ ಕೂಡಾ ನಡೆಯಲಿದೆ. ಇನ್ನು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಾಗುತ್ತಿದೆ.

2014 ಇಂಡಿಯಾ ಬೈಕ್ ವೀಕ್‌

ನಿಮ್ಮ ಮಾಹಿತಿಗಾಗಿ ಬೈಕುಗಳ ಜಾತ್ರೆ ಎಂದೇ ವಿಶ್ಲೇಷಿಸಬಹುದಾದ ಇಂಡಿಯಾ ಬೈಕ್ ವೀಕ್‌ನಲ್ಲಿ ಕಳೆದ ವರ್ಷ 6500ರಷ್ಟು ಸವಾರರು ಭಾಗವಹಿಸಿದ್ದರು. ಈ ಬಾರಿಯದು 10,000 ಮೀರುವ ಎಲ್ಲ ಸಾಧ್ಯತೆಗಳು ಎದ್ದು ಕಾಣಿಸುತ್ತಿದೆ.

English summary
India Bike Week returns on 17-18, January 2014 to Vagator, Goa. Woodstock of biking festival gears up for bikers, music and entertainment.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark