ಆಗ್ನಿ ಮೋಟಾರ್ಸ್‌ನಿಂದ ಮಿನಿ ಎಲೆಕ್ಟ್ರಿಕ್ ಬೈಕ್ ಪ್ರದರ್ಶನ

Written By:

ಬ್ಯಾಟರಿ ಉತ್ಪಾದಿಸುವುದರಲ್ಲಿ ನಿಸ್ಸೀಮವಾಗಿರುವ ಗುಜರಾತ್ ತಲಹದಿಯ ಆಗ್ನಿ ಮೋಟಾರ್ಸ್, ರಾಷ್ಟ್ರ ರಾಜಧಾನಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ನೂತನ ಮಿನಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪ್ರದರ್ಶಿಸಿದೆ.

ಪ್ರಮುಖವಾಗಿ ಐದು ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗಾಗಿ ಈ ಬೈಕನ್ನು ವಿನ್ಯಾಸಗೊಳಿಸಲಾಗಿದೆ. ನಿಸ್ಸಂಶಯವಾಗಿಯೂ ಇದು ಕ್ರೀಡಾ ಲುಕ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Agni Motors

ಅಂದ ಹಾಗೆ ಇದನ್ನು ಬೇಕಾದರೆ ಯುವಕರು ಕೂಡಾ ಚಾಲನೆ ಮಾಡಬಹುದಾಗಿದೆ. ಮಿನಿ ಆಗ್ನಿ ಝಡ್ ಎಂದರಿಯಲ್ಪಡುವ ಈ ವಿದ್ಯುತ್ ಚಾಲಿತ ಮೋಟಾರುಸೈಕಲ್ 15 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು 36 ವೋಲ್ಟ್ ಆಸಿಡ್ ಬ್ಯಾಟರಿಗಳಿಂದ ನಿಯಂತ್ರಿಸಲ್ಪಟ್ಟಿದೆ. ಹಾಗೆಯೇ ಭವಿಷ್ಯದಲ್ಲಿ ಲಿಥಿಯಂ ಪೊಲಿಮರ್ ಬ್ಯಾಟರಿ ಆಳವಡಿಸುವ ಇರಾದೆಯನ್ನು ಹೊಂದಿದೆ.

ಪ್ರಸ್ತುತ ಮಿನಿ ಆಗ್ನಿ ಝಡ್ ಎಲೆಕ್ಟ್ರಿಕ್ ಬೈಕ್ ಗಂಟೆಗೆ ಗರಿಷ್ಠ 110 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಂತೆಯೇ ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 30 ಕೀ.ಮೀ. ವರೆಗೂ ಸಂಚರಿಸಬಹುದಾಗಿದೆ. ಇನ್ನು ಮಕ್ಕಳ ಸುರಕ್ಷತಾ ದೃಷ್ಟಿಕೋನದಲ್ಲಿ ವೇಗವನ್ನು ನಿಯಂತ್ರಿಸಬಹುದಾಗಿದೆ. ಬೈಕ್ ಕಲಿಯಲು ಇಷ್ಟಪಡುವ ಮಕ್ಕಳಿಗೆ ಇದು ಹೆಚ್ಚು ಸೂಕ್ತವೆನಿಸಲಿದೆ. ಅಷ್ಟೇ ಯಾಕೆ ಆಗ್ನಿ ರೇಸಿಂಗ್ ಎಂಬ ರೇಸಿಂಗ್ ತಂಡವನ್ನು ಸಹ ರಚಿಸಲಾಗಿದೆ.

English summary
Agni Motors is a manufacturer of highly efficient D.C. motors, they are based in Gujarat, India. This Auto Expo they showcased ‘Mini Agni Z', their mini electric motorcycle.
Story first published: Friday, February 14, 2014, 12:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark