ಡಿಎಸ್‌ಕೆ ಹ್ಯೊಸಂಗ್‌ನಿಂದಲೂ ದರ ಕಡಿತ ಘೋಷಣೆ

Written By:

ತನ್ನ ನಿಕಟ ಪ್ರತಿಸ್ಪರ್ಧಿಗಳ ನೀತಿಯನ್ನು ಅನುಸರಿಸಿರುವ ಡಿಎಸ್‌ಕೆ ಹ್ಯೊಸಂಗ್ ಸಹ ಭಾರತದಲ್ಲಿ ತನ್ನೆಲ್ಲ ರೇಂಜ್‌ಗಳ ಬೈಕ್‌ಗಳ ದರಗಳನ್ನು ಕಡಿತಗೊಳಿಸಿರುವುದಾಗಿ ಘೋಷಿಸಿದೆ.

ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನ ಅಬಕಾರಿ ಸುಂಕ ಕಡಿತಗೊಂಡಿರುವ ಬೆನ್ನಲ್ಲೇ ಡಿಎಸ್‌ಕೆ ಹ್ಯೊಸಂಗ್‌ನಿಂದ ಇಂತಹದೊಂದು ನಡೆ ಕಂಡುಬಂದಿದೆ.

ಇದು ಪ್ರೀಮಿಯಂ ಡಿಎಸ್‌ಕೆ ಹ್ಯೊಸಂಗ್ ಬೈಕ್ ಖರೀದಿಸಲು ಬಯಸುವ ಗ್ರಾಹಕರನ್ನು ಪ್ರೋತ್ಸಾಹಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್‌ಕೆ ಹ್ಯೊಸಂಗ್ ಮುಖ್ಯಸ್ಥ ಶಿರಿಷ್ ಕುಲಕರ್ಣಿ, ದರ ಕಡಿತ ಘೋಷಿಸಿರುವ ಮೊದಲ ಪ್ರೀಮಿಯಂ ಸೂಪರ್ ಬೈಕ್ ತಯಾರಕ ಸಂಸ್ಥೆ ಡಿಎಸ್‌ಕ್ ಹ್ಯೂಸಂಗ್ ಆಗಿದ್ದು, ಅಬಕಾರಿ ಸುಂಕ ಕಡಿತಗೊಳಿಸಿರುವ ಸರಕಾರದ ನೀತಿಯನ್ನು ಸ್ವಾಗತಿಸಿರುವುದಾಗಿ ತಿಳಿಸಿದ್ದಾರೆ.

ಇದೀಗ ಕುಸಿತದಲ್ಲಿರುವ ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ. ಅಂದ ಹಾಗೆ ಡಿಎಸ್‌ಕೆ ಎಕ್ಸ್ ಶೋ ರೂಂ ದರಗಳಲ್ಲಿ 4,000 ರು.ಗಳಿಂದ 20,000 ರು. ವರೆಗೆ ಇಳಿಕೆ ಕಂಡುಬಂದಿದೆ. ಇತ್ತೀಚೆಗಷ್ಟೇ ಡಿಎಸ್‌ಕೆ ಹ್ಯೊಸಂಗ್ ಅಕ್ವಿಲಾ 250 ಬೈಕನ್ನು ಬೆಂಗಳೂರಿನಲ್ಲಿ ನಟ ಪ್ರಜ್ವಲ್ ದೇವರಾಜ್ ಲಾಂಚ್ ಮಾಡಿದ್ದರು.

English summary
DSK Hyosung announces price reduction post the excise duty cut announcement
Story first published: Monday, February 24, 2014, 15:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark