ರಾಜ್ಯದ ಘಟಕದಲ್ಲಿ ಹೋಂಡಾ ಸಿಬಿ ಶೈನ್ ನಿರ್ಮಾಣ

Written By:

ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ), ತನ್ನ ಜನಪ್ರಿಯ ಸಿಬಿ ಶೈನ್ ಆವೃತ್ತಿಗಳನ್ನು ಕರ್ನಾಟಕದ ಘಟಕದಿಂದ ಮಾರುಕಟ್ಟೆಗೆ ಹೊರಬಿಡಲಿದೆ.

ಹೋಂಡಾ ಪಾಲಿಗೆ ಅತ್ಯಂತ ಯಶಸ್ಸು ತಂದುಕೊಟ್ಟಿರುವ ಮಾದರಿಗಳ ಪೈಕಿ ಸಿಬಿ ಶೈನ್ ಪಾತ್ರ ಮಹತ್ವದ್ದು. ಪ್ರಸ್ತುತ ಬೆಳೆದು ಬರುತ್ತಿರುವ ಬೇಡಿಕೆಯನ್ನು ಗಮನಿಸಿರುವ ಹೋಂಡಾ, ಬೆಂಗಳೂರಿನ ಹೊರವಲಯದಲ್ಲಿ ಸ್ಥಿತಗೊಂಡಿರುವ ನರ್ಸಾಪುರ ಘಟಕದಿಂದಲೂ ಸಿಬಿ ಶೈನ್ ಹೊರಬಿಡಲು ಯೋಜನೆ ಹಮ್ಮಿಕೊಂಡಿದೆ.

To Follow DriveSpark On Facebook, Click The Like Button
Honda shine

ಈ ವರೆಗೆ ರಾಜಸ್ತಾನದ ತಪುಕರ ಘಟಕದಲ್ಲಿ 125ಸಿಸಿ ಸಿಬಿ ಶೈನ್ ಉತ್ಪಾದನೆಯಾಗುತ್ತಿತ್ತು. ಪ್ರಸ್ತುತ ಸಿಬಿ ಶೈನ್ ಬೆಂಗಳೂರಿನ ಘಟಕದಲ್ಲಿ ಉತ್ಪಾದನೆಯಾಗಲಿರುವ ನಾಲ್ಕನೇ ಮಾದರಿಯೆನಿಸಲಿದೆ.

ವಾರ್ಷಿಕವಾಗಿ 12 ಲಕ್ಷ ಯುನಿಟ್ ಉತ್ಪಾದನಾ ಸಾರರ್ಥ್ಯ ಹೊಂದಿರುವ ರಾಜ್ಯದ ಹೋಂಡಾ ಘಟಕದಲ್ಲಿ ಡ್ರೀಮ್ ಸಿರೀಸ್ ಮತ್ತು ಆಕ್ಟಿವಾ ಸ್ಕೂಟರ್‌ಗಳು ನಿರ್ಮಾಣವಾಗುತ್ತದೆ.

English summary
Two-wheeler manufacturer Honda Motorcycle & Scooter India (HMSI) is revamping its Karnataka facility, from where it plans to roll out the 125-cc motorcycle CB Shine amid rising demand for the model.
Story first published: Thursday, January 16, 2014, 12:03 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark