ರಾಷ್ಟ್ರೀಯ ಸುರಕ್ಷತಾ ಚಾಲನೆಗೆ ಬಾವುಟ ಹಾರಿಸಿದ ಇಶಾಂತ್

By Nagaraja

ಮುಂಬರುವ ಬಹು ನಿರೀಕ್ಷಿತ ಭಾರತೀಯ ಬೈಕ್ ಹಬ್ಬ (Bike Festival Of India) ಅಂಗವಾಗಿ ನಡೆಯುತ್ತಿರುವ ರಾಷ್ಟ್ರೀಯ ಸುರಕ್ಷತಾ ಚಾಲನೆಗೆ ( National Safety Ride) ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ, ಬಾವುಟ ಹಾರಿಸುವ ಮೂಲಕ ಹಸಿರು ನಿಶಾನೆ ತೋರಿದ್ದಾರೆ.

ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಮತ್ತು ಈವೆಂಟ್ ಕ್ಯಾಪಿಟಲ್ ಜಂಟಿ ಪ್ರಾಯೋಜಗತ್ವದಲ್ಲಿ ಸಾಗುವ ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ ಮುಂಬರುವ 2014 ಅಕ್ಟೋಬರ್ 4 ಹಾಗೂ 5ರಂದು ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆಯಲಿದೆ.


ಇದರಂಗವಾಗಿ ಆಗಸ್ಟ್ 31ರಂದು ರಾಷ್ಟ್ರೀಯ ಬಾವುಟ ದಿನ (ನ್ಯಾಷನಲ್ ಫ್ಲ್ಯಾಗ್ ಡೇ) ಆಚರಿಸಲಾಗಿದೆ. ಅಂದ ಹಾಗೆ ಭಾರತೀಯ ಬೈಕ್ ಹಬ್ಬದ ಬ್ರಾಂಡ್ ಅಂಬಾಸಿಡರ್ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಬೈಕ್ ಪ್ರೇಮಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದಾರೆ.

ನ್ಯಾಷನಲ್ ಸೇಫ್ಟಿ ರೈಡ್ ಮೂಲಕ ದೀರ್ಘ ಪಯಣ ಕೈಗೊಳ್ಳಲಿರುವ ಸವಾರರಿಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ. ದೇಶದ ಎಲ್ಲ ಮೂಲೆಗೂ ತಲುಪಲಿರುವ ಈ ತಂಡವು ಪ್ರಮುಖವಾಗಿಯೂ ಟ್ರಯಂಪ್ ಸ್ಪೀಡ್ ಟ್ರಿಪರ್ ಮತ್ತು ಥಂಡರ್ ಬರ್ಡ್ ಸ್ಟ್ರೋಮ್ ಬೈಕ್ ಬಳಕೆ ಮಾಡಲಿದೆ.

National Safety Ride

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಇಶಾಂಶ್, "ನಾನೊಬ್ಬ ಬೈಕ್ ಉತ್ಸಾಹಿಯಾಗಿದ್ದು, ಇಂತಹ ಹಬ್ಬಗಳು ದೇಶದಲ್ಲಿ ಬೈಕ್ ಸಂಸ್ಕೃತಿಯನ್ನು ಇನ್ನಷ್ಟು ಬಲಪಡಿಸಲಿದೆ ಎಂದಿದ್ದಾರೆ. ಅಲ್ಲದೆ ಬೈಕಿಂಗ್ ಬಗ್ಗೆ ಅರಿವು ಮೂಡಿಸಲು ಇಂತಹ ಪಯಣ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ" ಎಂದಿದ್ದಾರೆ.

ಅಂದ ಹಾಗೆ ನ್ಯಾಷನಲ್ ಸೇಫ್ಟಿ ರೈಡ್‌‌ನಲ್ಲಿ ಆರು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಭಾಗವಹಿಸುತ್ತಿದ್ದಾರೆ. ಇವರು ಒಂದು ತಿಂಗಳಲ್ಲಿ ಒಟ್ಟು 8100 ಕೀ.ಮೀ. ದೂರವನ್ನು ಕ್ರಮಿಸಲಿದ್ದಾರೆ. ಈ ಎಲ್ಲ ಸವಾರರು ಪ್ರತಿ ದಿನವು ಟ್ರಯಂಪ್ ಶೋ ರೂಂ ಗಳಲ್ಲಿ ತಂಗಲಿದ್ದಾರೆ. ಅಂದರೆ ಅಹಮಾದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ, ಚಂಡೀಗಡ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾಗಳಲ್ಲಿ ರಾತ್ರಿಯನ್ನು ಕಳೆಯಲಿದ್ದು, ತಮ್ಮ ಪಯಣದ ಉದ್ದಕ್ಕೂ ಬೈಕ್ ಉತ್ಸಾಹಿಗಳೊಂದಿಗೆ ಬೆರೆಯಲಿದ್ದಾರೆ.

Most Read Articles

Kannada
English summary
Bike Festival of India is a joint venture by Rhiti Sports Management and Event Capital. 31st of August is celebrated as National Flag Day in India. On this occasion BFI(Bike Festival of India) flagged off its National Safety Ride with Indian pacer Ishant Sharma.
Story first published: Tuesday, September 2, 2014, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X