ಕೆಟಿಎಂ ಡ್ಯೂಕ್, ಕವಾಸಕಿ ನಿಂಜಾ ದರಗಳಲ್ಲಿ ಕಡಿತ

By Nagaraja

ಇತ್ತೀಚೆಗಷ್ಟೇ ಕೇಂದ್ರ ಸರಕಾರ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರು ಹಾಗೂ ಬೈಕ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಇದರ ಬೆನ್ನಲ್ಲೇ ಗ್ರಾಹಕ ಸ್ನೇಹಿ ನಿಲುವು ತಳೆದಿರುವ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಾಗಿರುವ ಕೆಟಿಎಂ ಹಾಗೂ ಕವಾಸಕಿ ತನ್ನ ರೇಂಜ್ ಬೈಕ್‌ಗಳಿಗೆ ದರಗಳನ್ನು ಕಡಿತಗೊಳಿಸಿರುವುದಾಗಿ ಘೋಷಿಸಿದೆ.

ಸಮಕಾಲೀನ ಮಾರುಕಟ್ಟೆಯಲ್ಲಿ ಕವಾಸಕಿ ಹಾಗೂ ಕೆಟಿಎಂ ಬೈಕ್‌ಗಳು ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದೆ. ಇದು ದೇಶದಲ್ಲಿ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್ ವೃದ್ಧಿಗೂ ಕಾರಣವಾಗಿದೆ.

KTM 390 Duke

ಕೆಟಿಎಂ ದೇಶದಲ್ಲಿ ಲಭ್ಯವಿರುವ 200 ಡ್ಯೂಕ್ ಹಾಗೂ 390 ಡ್ಯೂಕ್ ದರಗಳನ್ನು ಕಡಿತಗೊಳಿಸಿದೆ. ಅಂದರೆ 390 ಡ್ಯೂಕ್ 1.80 ಲಕ್ಷ ದೆಹಲಿ ಎಕ್ಸ್ ಶೋ ರೂ ರು.ಗಳಲ್ಲಿ ದೊರಕಲಿದೆ. ಈ ಮೂಲಕ ರು. 5600ರಷ್ಟು ಇಳಿಕೆ ಕಂಡುಬಂದಿದೆ. ಹಾಗೆಯೇ 200 ಡ್ಯೂಕ್ ದೆಹಲಿ ಎಕ್ಸ್ ಶೋ ರೂಂ ದರ 1.30 ಲಕ್ಷ ರು.ಗಳಾಗಿದ್ದು, 4,500 ರು. ಬೆಲೆ ಇಳಿಕೆ ಕಂಡುಬಂದಿದೆ.

ಇನ್ನೊಂದೆಡೆ ಕವಾಸಕಿ ನಿಂಜಾ 300 ಆವೃತ್ತಿಯಲ್ಲೂ ಬೆಲೆ ಕಡಿತಗೊಂಡಿದ್ದು, ಪರಿಷ್ಕೃತ ದರದಂತೆ ದೆಹಲಿ ಎಕ್ಸ್ ಶೋ ರೂಂ ದರ 3.38 ಲಕ್ಷ ರು.ಗಳಾಗಿವೆ. ಹಾಗೆಯೇ ನಿಂಜಾ 650 ಮಾದರಿಯು 4.92 ಲಕ್ಷ ರು.ಗಳಿಗೆ (ದೆಹಲಿ ಎಕ್ಸ್ ಶೋ ರೂಂ) ದೊರಕಲಿದೆ.

Most Read Articles

Kannada
English summary
KTM Duke Anda Kawasaki Ninja has decided to pass on the entire price benefit of new excise duty to customers.
Story first published: Wednesday, March 5, 2014, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X