ಪ್ರಸಕ್ತ ಸಾಲಿನಲ್ಲೇ ಕೆಟಿಎಂ ಆರ್‌ಸಿ 390 ಎಂಟ್ರಿ

Written By:

ದೇಶದಲ್ಲಿ ತನ್ನ ರೇಂಜ್ ಬೈಕ್‌ಗಳ ಜನಪ್ರಿಯತೆಯನ್ನು ಗಮನಿಸಿರುವ ಆಸ್ಟ್ರಿಯಾ ಮೂಲದ ಕೆಟಿಎಂ ಮಗದೊಂದು ಆಕರ್ಷಕ ಬೈಕ್ ಪರಿಯಚಿಸುವ ಯೋಜನೆ ಹೊಂದಿದೆ. ಈ ನಡುವೆ ಪುಣೆಯಲ್ಲಿ ನೂತನ ಕೆಟಿಎಂ ಆರ್390 ಬೈಕ್ ಪರೀಕ್ಷೆ ನಡೆಸುತ್ತಿರುವ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಬಿದ್ದಿವೆ.

ಇದಕ್ಕೂ ಮೊದಲು ಫೆಬ್ರವರಿ ತಿಂಗಳಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ತನ್ನ ರೇಂಜ್ ಬೈಕ್‌ಗಳನ್ನು ಪ್ರದರ್ಶಸಿದ್ದ ಕೆಟಿಎಂ ಕುತೂಹಲ ಕೆರಳಿಸಿತ್ತು. ಇದೀಗ ಆಸ್ಟ್ರೀಯಾ ಮೂಲದ ಈ ವಾಹನ ತಯಾರಕ ಸಂಸ್ಥೆಯು ತನ್ನ ವ್ಯಾಪಾರವನ್ನು ಇನ್ನಷ್ಟು ಕುದುರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ವರದಿಗಳ ಪ್ರಕಾರ ಕೆಟಿಎಂ ಆರ್ 390 ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಆಗಮನವಾಗಲಿದೆ. ನಿಮ್ಮ ಮಾಹಿತಿಗಾಗಿ, ನೂತನ ಕೆಟಿಎಂ ಆರ್ 390 ಆವೃತ್ತಿಯು ಈಗಾಗಲೇ ಮಾರುಕಟ್ಟೆಯಲ್ಲಿರುವ 390 ಡ್ಯೂಕ್ ಬೈಕ್‌ನ ಫೇರ್ಡ್ ವರ್ಷನ್ ಆಗಿರಲಿದೆ. ಅಂದರೆ ಪರಿಷ್ಕೃತ ಚಾಸೀಸ್ ಹಾಗೂ ಹ್ಯಾಂಡ್ಲಿಂಗ್ ಈ ಎರಡು ಬೈಕ್‌ಗಳನ್ನು ಪ್ರತ್ಯೇಕಿಸಲಿದೆ.

ಪ್ರಸ್ತುತ ಬೈಕನ್ನು ರೇಸ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಆರ್ 390 ಬೈಕ್‌ಗೆ ಕ್ರೀಡಾತ್ಮಕ ಲುಕ್ ಪ್ರದಾನ ಮಾಡಲಿದೆ. ಹಾಗಿದ್ದರೂ ದರಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಗಳು ಬಂದಿಲ್ಲ.

KTM RC 390
English summary
KTM has been spotted testing the RC 390 in Pune frequently of late. This could only mean one thing, the bike is ready to be launched and minor corrections if any will be done.
Story first published: Saturday, March 8, 2014, 16:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark