ಬೇಡಿಕೆ ಕಾಯ್ದುಕೊಂಡ ಮಹೀಂದ್ರ ದ್ವಿಚಕ್ರ ವಾಹನ

Written By:

ಮಹೀಂದ್ರ ಸಂಸ್ಥೆಯ 16.5 ಬಿಲಿಯನ್ ಅಮೆರಿಕನ್ ಡಾಲರ್ ಭಾಗವಾಗಿರುವ ಮಹೀಂದ್ರ ಟು ವೀಲರ್ಸ್ ಲಿಮೆಟಿಡ್ (ಎಂಟಿಡಬ್ಲ್ಯುಎಲ್) 2014 ನವೆಂಬರ್ ತಿಂಗಳಲ್ಲಿ 14,579 ಯುನಿಟ್‌ಗಳ ಮಾರಾಟ ಕಂಡಿದೆ.

ಹೋಂಡಾ ಹಾಗೂ ಹೀರೊ ಸಂಸ್ಥೆಗಳನ್ನು ಹೋಲಿಸಿದಾಗ ಮಹೀಂದ್ರ ಸಂಸ್ಥೆಯು ಮಾರಾಟದಲ್ಲಿ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಕಳೆದ ಕೆಲವು ಸಮಯಗಳಲ್ಲಿ ಸೆಂಚುರೊ ಮಾದರಿಗೆ ಹೆಚ್ಚಿನ ಯಶಸ್ಸು ದಾಖಲಾಗಿತ್ತು.

To Follow DriveSpark On Facebook, Click The Like Button
mahindra

ದೇಶೀಯ ಮಾರುಕಟ್ಟೆಯಲ್ಲಿ 13,052 ಯುನಿಟ್ ಮಾರಾಟ ಸಾಧಿಸಿರುವ ಸಂಸ್ಥೆಯು 1527 ಯುನಿಟ್‌ಗಳ ರಫ್ತು ಕಂಡಿದೆ. ಈ ಮೂಲಕ ಒಟ್ಟು 14,579 ಯುನಿಟ್‌ಗಳ ಮಾರಾಟ ದಾಖಲಿಸಿದೆ.

ಈ ಪೈಕಿ ಇತ್ತೀಚೆಗಷ್ಟೇ ಪರಿಚಯವಾಗಿರುವ ಗಸ್ಟೊ ಸ್ಕೂಟರ್‌ಗೆ ಉತ್ತರ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಕಟ ಭವಿಷ್ಯದಲ್ಲೇ ದಕ್ಷಿಣ ಭಾರತವನ್ನು ಪ್ರವೇಶಿಸಲಿದೆ.

ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಮಾರಾಟ ಸಾಧಿಸುವ ಭರವಸೆಯನ್ನು ಸಂಸ್ಥೆ ಹೊಂದಿದೆ. ಅಂದ ಹಾಗೆ ಕೇವಲ ದ್ವಿಚಕ್ರ ವಾಹನ ಮಾರುಕಟ್ಟೆ ಮಾತ್ರವಲ್ಲದೆ ಸಂಸ್ಥೆಯು ಕಾರು, ಕೃಷಿ ಉದ್ಯಮ, ವಿಮಾನಗಳ ಘಟಕ, ರಕ್ಷಣಾ ವ್ಯವಸ್ಥೆ, ಶಕ್ತಿ, ಕೈಗಾರಿಕಾ ಸಲಕರಣೆ, ವಸತಿ, ರಿಯಲ್ ಎಸ್ಟೇಟ್, ಸ್ಟೀಲ್ ಮತ್ತು ಇತರ ವಾಣಿಜ್ಯ ವಿಭಾಗದಲ್ಲೂ ತನ್ನ ಸಾನಿಧ್ಯ ಹೊಂದಿದೆ.

English summary
One of India's largest motorcycle manufacturers, Mahindra Two Wheelers Ltd. (MTWL), which is a part of the USD 16.5 billion Mahindra Group, today announced its sales numbers for November 2014, which stood at 14,579 units.
Story first published: Thursday, December 4, 2014, 12:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark