ಇನ್ನು ಮೂರು ವರ್ಷಗಳಿಗೆ ಬೈಕ್ ವಿಮೆ ತಮ್ಮದಾಗಿಸಿ!

Posted By:

ಇದುವರೆಗೆ ವಾಹನ ಮಾಲಿಕರು ವರ್ಷಂಪ್ರತಿ ತಮ್ಮ ಬೈಕ್ ಅಥವಾ ಸ್ಕೂಟರ್ ವಿಮೆಯನ್ನು ನವೀಕರಿಸಬೇಕಾಗಿತ್ತು. ಸದ್ಯ ಒಂದು ವರ್ಷದ ವರೆಗೆ ನವೀಕರಣ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ ಇದಕ್ಕೆ ತಿದ್ದುಪಡಿ ತರಲಿರುವ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎ), ದ್ವಿಚಕ್ರ ವಾಹನ ಮಾಲಿಕರಿಗೆ ಮೂರು ವರ್ಷಗಳಿಗೆ ವಿಮೆ ವಿಸ್ತರಿಸುವ ಅವಕಾಶವೊದಗಿಸಲಿದೆ.

ಭಾರತದಲ್ಲಿ ದ್ವಿಚಕ್ರ ವಾಹನ ಮಾಲಿಕರು ತಮ್ಮ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಗಿಟ್ಟಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದೀಗ ಐಆರ್‌ಡಿಎ, ಕಡ್ಡಾಯ ಥರ್ಢ್ ಪಾರ್ಟಿ ವಿಮಾ ಯೋಜನೆಯೊಂದಿಗೆ ವಿಮೆಯನ್ನು ಮೂರು ವರ್ಷಗಳಿಗೆ ವಿಸ್ತರಿಸಲಿದೆ. ಇದು ಐಚ್ಛಿಕ ಆಯ್ಕೆಯಾಗಿರಲಿದ್ದು, ಗ್ರಾಹಕರು ಬಯಸಿದ್ದಲ್ಲಿ ಮಾತ್ರ ಈ ಸೇವೆ ತಮ್ಮದಾಗಿಸಿಕೊಳ್ಳಬಹುದಾಗಿದೆ.

To Follow DriveSpark On Facebook, Click The Like Button
insurance

ಈ ಬಗ್ಗೆ ಮಾತನಾಡಿರುವ ನ್ಯೂ ಇಂಡಿಯಾ ಅಶ್ಯುರನ್ಸ್ ಮುಖ್ಯಸ್ಥ ಜಿ ಶ್ರೀನಿವಾಸನ್, ದ್ವಿಚಕ್ರ ವಾಹನ ವಿಭಾಗದಲ್ಲಿ ಅನೇಕ ಮಂದಿ ವರ್ಷಂಪ್ರತಿ ವಿಮೆ ನವೀಕರಿಸಲು ಮರೆತು ಹೋಗಿಬಿಡುತ್ತಾರೆ. ಅಂಥವರಿಗೆ ಈ ಮೂರು ವರ್ಷಗಳ ದೀರ್ಘಾವಧಿ ವಿಮಾ ಯೋಜನೆಯು ಸಹಕಾರಿಯಾಗಲಿದ್ದು, ಇದರೊಂದಿಗೆ ವಿಮಾ ರಹಿತ ವಾಹನ ಸಂಖ್ಯೆ ಕಡಿತಗೊಳಿಸಲು ನೆರವಾಗಲಿದೆ ಎಂದಿದ್ದಾರೆ.

ಇದೇ ಯೋಜನೆಯು ನಾಲ್ಕು ಚಕ್ರದ ವಾಹನಗಳಿಗೂ ಅನ್ವಯವಾಗಲಿದೆ. ಇದು ವಿಮಾ ಪ್ರೀಮಿಯಂ ವೆಚ್ಚವನ್ನು ಕಡಿತಗೊಳಿಸುವ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ಈ ನೀತಿಯು ವಿಮಾ ಸಂಸ್ಥೆಗಳ ಜೊತೆಗೆ ವಿಮಾ ಖರೀದಿಗಾರರಿಗೂ ನೆರವಾಗಲಿದೆ.

English summary
Every year, owners of motorcycles and scooters have to purchase insurance for their vehicles. Currently individuals could purchase a policy only for a period of one year. However, the Insurance Regulatory and Development Authority has opted to provide owners with a insurance policies for a period of three years.
Story first published: Wednesday, August 20, 2014, 15:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark